ಕನ್ನಡಪ್ರಭ ವಾರ್ತೆ ಕೊಲ್ಹಾರ
ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ಮಂಗಳವಾರ ರೆಡ್ಡಿ ಸಮಾಜದ ವತಿಯಿಂದ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮಳ 602ನೇ ಜಯಂತಿ ಆಚರಿಸಲಾಯಿತು.ಬೆಳಿಗ್ಗೆ 8 ಗಂಟೆಗೆ ಗ್ರಾಮದ ಮಲ್ಲಿಕಾರ್ಜುನ ದೇವರಿಗೆ ವೇ.ಮೂ.ರುದ್ರಸ್ವಾಮಿಗಳು ಹಿರೇಮಠ ಅವರು ರುದ್ರಾಭಿಷೇಕ ನೆರವೇರಿಸಿದರು. ನಂತರ ತೆರೆದ ಟ್ರ್ಯಾಕ್ಟರ್ ವಾಹನದಲ್ಲಿ ಹೆಮರೆಡ್ಡಿ ಮಲ್ಲಮ್ಮಳ ಭಾವಚಿತ್ರವನ್ನು ಬಾಳೆಗರಿ, ತೆಂಗಿನ ಗರಿ ಹಾಗೂ ಬಣ್ಣ ಬಣ್ಣದ ಬಲೂನಗಳಿಂದ ಅಲಂಕರಿಸಲಾಯಿತು. ಬೆಳಿಗ್ಗೆ 10 ಗಂಟೆಗೆ ಹೆಮರೆಡ್ಡಿ ಮಲಮ್ಮಳ ಭಾವಚಿತ್ರದ ಭವ್ಯ ಮೆರವಣಿಗೆಯು ಪ್ರಾರಂಭಗೊಂಡಿತು. ಮೆರವಣಿಗೆಯು ಮಲ್ಲಿಕಾರ್ಜುನನ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಲ್ಲಯ್ಯನ್ನ ಕಂಬಿ ಕಟ್ಟಿಗೆ ತೆರಳಿ ನಂತರ ಮರಳಿ ಮಲ್ಲಿಕಾರ್ಜುನ ದೇವಸ್ಥಾನವನ್ನು ತಲುಪಿತು.ಮೆರವಣಿಗೆಯಲ್ಲಿ ನೂರಾರು ಸುಮಂಗಲೆಯರಿಂದ ಆರತಿ, ಕುಂಭ ಮೇಳ ಹಾಗೂ ನಾವಲಗಿಯ ಸಂಬಳ ಮೇಳದ ಕಲಾ ತಂಡಗಳು ಭಾಗವಹಿಸಿದ್ದವು. ಭವ್ಯವಾದ ಮೆರವಣಿಗೆಯಲ್ಲಿ ಸಂಬಳ ಮೇಳದ ಕಲಾ ತಂಡದೊಂದಿಗೆ ಜೋಗುತಿಯವರು ಯಲ್ಲಮ್ಮನ ಕುಂಭ ಹೊತ್ತು ನೃತ್ಯ ಮಾಡುವುದು ನೆರೆದ ಜನರಮನವನ್ನು ಗೆದ್ದಿತು. ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲ ಭಕ್ತಾದಿಗಳಿಗೆ ಮೆರವಣಿಗೆ ಉದ್ದಕ್ಕೂ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು.ನಂತರ ಹೆಮರೆಡ್ಡಿ ಮಲ್ಲಮ್ಮಳ ಜಯಂತಿಗೆ ಆಗಮಿಸಿದ ಹಾಗೂ ಗ್ರಾಮದ ಸಕಲ ಸದ್ಭಕ್ತರಿಗೆ ಸಿಹಿಯಾದ ಹೋಳಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಮುಖಂಡರಾದ ನಾಗನಗೌಡ ಬಿರಾದಾರ, ಪ್ರೇಮುಗೌಡ ಪಾಟೀಲ, ಶರಣಗೌಡ ಪಾಟೀಲ, ಪರಪ್ಪಸಾಹುಕಾರ ಹಳ್ಳೂರ,ಮಲ್ಲಪ್ಪ ರಕರಡ್ಡಿ,ವಿಜಯನಗೌಡ ಪಾಟೀಲ, ಸಂಗುಸಾಹುಕಾರ ಹಳ್ಲೂರ,ಪರುತಪ್ಪ ಹಳ್ಳೂರ,ಬಸವಂತಪ್ಪ ಹೊಸಮನಿ,ಸಂಗಪ್ಪ ಹಳ್ಳೂರ, ಕಲಬಸಪ್ಪ ಹಳ್ಳೂರ, ಶರಣಪ್ಪ ಗುಂಡಪ್ಪಗೋಳ, ಶಿವಪ್ಪ ಬಿರಾದಾರ,ರಾಜು ಕಂದಗಲ್, ಸುಭಾಷ ಹಳ್ಳೂರ ಸೇರಿದಂತೆ ಹಣಮಾಪೂರ ಗ್ರಾಮದ ಗುರುಹಿರಿಯರು, ಯುವಕರು, ಮಹಿಳೆಯರು ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.