ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಪರೀಕ್ಷೆಯಲ್ಲಿ ಬೀದರ್, ಭಾಲ್ಕಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಬೆಳಗಾವಿ, ವಿಜಯಪೂರ ಸೇರಿದಂತೆ ಅನೇಕ ಜಿಲ್ಲೆಗಳಿಂದ 6483 ವಿದ್ಯಾರ್ಥಿಗಳು ಹಾಜರಿದ್ದು ಗಮನ ಸೆಳೆದರು.
ಈ ಪರೀಕ್ಷೆಯಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪಾಜಿ ಅವರು 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಹೆಸರಲ್ಲಿ ಸ್ಕಾಲರ್‌ಶಿಪ್ ರೂಪದಲ್ಲಿ ₹2.5 ಕೋಟಿ ರುಪಾಯಿಗಳನ್ನು ನೀಡಲಾಗುತ್ತದೆ.ಎಸ್.ಬಿ.ಆರ್. ಪಿಯು ಕಾಲೇಜು, ಮುಕ್ತಾಂಬಿಕಾ ಪಿ.ಯು ಕಾಲೇಜು, ದೊಡ್ಡಪ್ಪ ಅಪ್ಪ ಪಿ.ಯು ಕಾಲೇಜು, ಅಪ್ಪಾ ಪಬ್ಲಿಕ್ ಶಾಲೆ, ಎಸ್.ಬಿ.ಆರ್ ಪಬ್ಲಿಕ್ ಶಾಲೆ, ಅಪ್ಪಾ ಎಂಜಿನಿಯರಿಂಗ್ ಕಾಲೇಜು ಸಿ.ಎಸ್ ವಿಭಾಗ, ಅಪ್ಪಾ ಎಂಜಿನಿಯರಿಂಗ್ ಕಾಲೇಜು ಮೆಕ್ಯಾನಿಕಲ್ ವಿಭಾಗ, ಅಪ್ಪಾ ಎಂಜಿನಿಯರಿಂಗ್ ಕಾಲೇಜು ಫಸ್ಟ್-ಇಯರ್ ಬ್ಲಾಕ್ ಹೀಗೆ ಸಂಸ್ಥೆಯ 9 ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಕ್ಯಾಂಪಸ್‍ನಲ್ಲಿ ಹೆಲ್ಪ-ಡೆಸ್ಕ ವ್ಯವಸ್ಥೆ ಮಾಡಲಾಗಿತ್ತು. ಪ್ರಾಚಾರ್ಯ ಎನ್.ಎಸ್. ದೇವರಕಲ್ ಮಾರ್ಗದರ್ಶನದಲ್ಲಿ ಹಾಗೂ ಕಾಲೇಜಿನ ಮೇಲ್ವಿಚಾರಕ ಡಾ. ಶ್ರೀಶೈಲ ಜಿ. ಹೊಗಾಡೆ ಹಾಗೂ ಗುರುವೃಂದದವರ ಉಸ್ತುವಾರಿಯಲ್ಲಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಯಿತು.