ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಗುರುವಾರ ಶೇ.68.55ರಷ್ಟು ಮತದನವಾಗಿದ್ದು, ಈ ಪೈಕಿ ನಗರ ಪ್ರದೇಶದಲ್ಲಿ ಶೇ.65.59 ಮತದಾನವಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.85.36ರಷ್ಟು ಮತ ಚಲಾವಣೆಯಾಗಿದೆ. ಇದರೊಂದಿಗೆ ತಮ್ಮ ಹಕ್ಕು ಚಲಾಯಿಸುವಲ್ಲಿ ನಗರ ವಾಸಿಗಳಿಗಿಂತ ಗ್ರಾಮೀಣರೇ ಒಂದು ಹೆಜ್ಜೆ ಮುಂದಿದ್ದಾರೆ.
- ಗ್ರಾಮೀಣ ಭಾಗದಲ್ಲಿ ಶೇ.84.36, ನಗರ ಪ್ರದೇಶಲ್ಲಿ ಶೇ.65.59ರಷ್ಟು ಮತ ಚಲಾವಣೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಗುರುವಾರ ಶೇ.68.55ರಷ್ಟು ಮತದನವಾಗಿದ್ದು, ಈ ಪೈಕಿ ನಗರ ಪ್ರದೇಶದಲ್ಲಿ ಶೇ.65.59 ಮತದಾನವಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.85.36ರಷ್ಟು ಮತ ಚಲಾವಣೆಯಾಗಿದೆ. ಇದರೊಂದಿಗೆ ತಮ್ಮ ಹಕ್ಕು ಚಲಾಯಿಸುವಲ್ಲಿ ನಗರ ವಾಸಿಗಳಿಗಿಂತ ಗ್ರಾಮೀಣರೇ ಒಂದು ಹೆಜ್ಜೆ ಮುಂದಿದ್ದಾರೆ.
ಉಪ ಚುನಾವಣೆಯಲ್ಲಿ ಒಟ್ಟು 231072 ಮತದಾರರಿದ್ದು, ಈ ಪೈಕಿ 113339 ಪುರುಷ, 117690 ಮಹಿಳಾ, 43 ಇತರೆ ಮತದಾರರಾಗಿದ್ದರು. ಈ ಪೈಕಿ 158131 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 78290 ಪುರುಷರು, 79823 ಮಹಿಳೆಯರು, 10 ತೃತೀಯ ಲಿಂಗ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಇದರೊಂದಿಗೆ ಕ್ಷೇತ್ರದಲ್ಲಿ ಶೇ.68.55 ಮತ ಚಲಾವಣೆಯಾಗಿವೆ.
* ಅತಿ ಹೆಚ್ಚು, ಅತಿ ಕಡಿಮೆ ಮತದಾನ:
ದಾವಣಗೆರೆ ಯರಗುಂಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮತ ಕೇಂದ್ರದ ಕೊಠಡಿ ಸಂಖ್ಯೆ 1ರಲ್ಲಿ 800 ಮತದಾರರಲ್ಲಿ 343 ಪುರುಷ, 341 ಮಹಿಳಾ ಮತದಾರರು ಸೇರಿದಂತೆ ಒಟ್ಟು 684 ಮತದಾರರು ಮತ ಚಲಾಯಿಸಿದ್ದು, ಶೇ.85.50 ಅತೀ ಹೆಚ್ಚು ಮತದಾನವಾಗಿದೆ. ದೇವರಾಜ ಅರಸು ಬಡಾವಣೆಯ ಅಪ್‌ಗ್ರೇಟೆಡ್ ಸ್ವಿಮ್ಮಿಂಗ್ ಪೂಲ್, ಕೊಠಡಿ ಸಂಖ್ಯೆ 1ರಲ್ಲಿ 626 ಮತದಾರರಲ್ಲಿ 272 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು. ಶೇ.43.61ರಷ್ಟು ಅತೀ ಕಡಿಮೆ ಮತದಾನವಾಗಿದೆ. ಕ್ಷೇತ್ರದ ಒಟ್ಟು 284 ಮತಗಟ್ಟೆ ಪೈಕಿ ಎಲ್ಲಿಯೂ ಅಹಿಕರ ಘಟನೆ ಸಂಭವಿಸದೆ, ಶಾಂತಿ, ಸುವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
* ನಗರ ಪ್ರದೇಶದ ಮತದಾನ ವಿವರ:
ಪಾಲಿಕೆ ವ್ಯಾಪ್ತಿಯ 1ನೇ ವಾರ್ಡ್ ಗಾಂಧಿನಗರದಲ್ಲಿ 9299 ಮತದಾರರ ಪೈಕಿ 6309 ಮತದಾರರು (ಶೇ.67.85) ಮತದಾನವಾಗಿದೆ. 2ನೇ ವಾರ್ಡ್ ಎಸ್ಸೆಸ್ಸೆಂ ನಗರದಲ್ಲಿ 12736 ಮತದಾರರ ಪೈಕಿ 7943 ಮತದಾರರು (ಶೇ.62.37) ರಷ್ಟು, 3ನೇ ವಾರ್ಡ್ ಶ್ರೀ ಸಿದ್ಧರಾಮೇಶ್ವರ ಬಡಾವಣೆಯಲ್ಲಿ 8743 ಮತದಾರರ ಪೈಕಿ 5791 ಮತದಾರರು (ಶೇ.66.24) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
4ನೇ ವಾರ್ಡ್ ಬಾಷಾ ನಗರದಲ್ಲಿ 14146 ಮತದಾರರ ಪೈಕಿ 8652 ಮತದಾರರು (ಶೇ.61.16), 5ನೇ ವಾರ್ಡ್ ಜಗಜೀವನ ರಾಂ ನಗರದ 13324 ಮತದಾರರ ಪೈಕಿ 9371 ಮತದಾರರು (ಶೇ.70.33), 6ನೇ ವಾರ್ಡ್ ಕುರುಬರ ಕೇರಿಯಲ್ಲಿ 10,738 ಮತದಾರರಲ್ಲಿ 7090 ಮತದಾರರು (ಶೇ.66.03), 7ನೇ ವಾರ್ಡ್ ಜಾಲಿ ನಗರದಲ್ಲಿ 12822 ಮತದಾರರ ಪೈಕಿ 7797 (ಶೇ.60.81) ಮತದಾರರು ಮತ ಹಾಕಿದ್ದಾರೆ.
ವಾರ್ಡ್ 8ರ ಸುರೇಶ ನಗರದ 5938 ಮತದಾರರ ಪೈಕಿ 3815 ಮತದಾರರು (ಶೇ.64.25), 9ನೇ ವಾರ್ಡ್ ಆಜಾದ್ ನಗರದಲ್ಲಿ 9075 ಮತದಾರರ ಪೈಕಿ 5852 ಮತದಾರರು (ಶೇ.64.48), 10ನೇ ವಾರ್ಡ್ ಗಣೇಶ ನಗರದಲ್ಲಿ 6453 ಮತದಾರರಲ್ಲಿ 4693 ಜನರು (ಶೇ.72.73), 11ನೇ ವಾರ್ಡ್ ಬಸವರಾಜ ಪೇಟೆಯ 10675 ಮತದಾರರಲ್ಲಿ 6992 ಮತದಾರರು (ಶೇ.65.50) ತಮ್ಮ ಮತ ಚಲಾಯಿಸಿದ್ದಾರೆ.
12ನೇ ವಾರ್ಡ್ ಅಹಮ್ಮದ್ ನಗರದ 14690 ಮತದಾರರ ಪೈಕಿ 9448 ಮತದಾರರು (ಶೇ.64.32), 13ನೇ ವಾರ್ಡ್ ಕೊರಚರಹಟ್ಟಿಯ 8850 ಮತದಾರರಲ್ಲಿ 5929 ಮತದಾರರು (ಶೇ.66.99), 14ನೇ ವಾರ್ಡ್ ಚಾಮರಾಜಪೇಟೆ 8459 ಮತದಾರರಲ್ಲಿ 5460 ಜನರು (ಶೇ.54.55), 18ನೇ ವಾರ್ಡ್ ಕಾಯಿಪೇಟೆಯಲ್ಲಿ 7918 ಜನರಲ್ಲಿ 5307 ಜನರು (ಶೇ.67.02) ಮತದಾರರು ತಮ್ಮ ಮತದಾನ ಮಾಡಿದ್ದಾರೆ.
ಇನ್ನು 19ನೇ ವಾರ್ಡ್ ಮಂಡಿಪೇಟೆಯ 8170 ಮತದಾರರಲ್ಲಿ 5348 ಮತದಾರರು(ಶೇ.65.46), 20ನೇ ವಾರ್ಡ್ ಭಾರತ ಕಾಲನಿಯ 7848 ಮತದಾರರಲ್ಲಿ 5168 ಜನರು (ಶೇ.65.85) ಮತ ನೀಡಿದ್ದಾರೆ. ಪಾಲಿಕೆ 21ನೇ ವಾರ್ಡ್ ಬಸಾಪುರದಲ್ಲಿ 6988 ಮತದಾರರಲ್ಲಿ 5123 ಮತದಾರರು (ಶೇ.73.13). 25ನೇ ವಾರ್ಡ್ ಕೆ.ಬಿ. ಬಡಾವಣೆಯ 6309 ಮತದಾರರಲ್ಲಿ 3534 ಮತದಾರರು (ಶೇ.56.02), 45ನೇ ವಾರ್ಡ್ ಎಸ್‌ಜೆಎಂ ನಗರದಲ್ಲಿ 11419 ಮತದಾರರಲ್ಲಿ 8014 ಜನರು (ಶೇ.70.18) ಮತ ಹಾಕಿದ್ದಾರೆ.
* 8 ಗ್ರಾಪಂ ವ್ಯಾಪ್ತಿಯ ಮತದಾನ ಪ್ರಮಾಣ:
ಹದಡಿ ಗ್ರಾಪಂ ವ್ಯಾಪ್ತಿ 5903 ಮತದಾರರಲ್ಲಿ 4822 ಜನ (ಶೇ.81.69), ಕೈದಾಳೆ ಗ್ರಾಪಂ 3607 ಮತದಾರರಲ್ಲಿ 3060 ಜನರು (ಶೇ.84.84), ಬೆಳವನೂರು ಗ್ರಾಪಂ ವ್ಯಾಪ್ತಿಯ 7891 ಮತದಾರರಲ್ಲಿ 6509 ಮತದಾರರ (ಶೇ.82.49), ಶಿರಮಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ 4595 ಮತದಾರರಲ್ಲಿ 3859 ಜನರು (ಶೇ.83.98), ಮುದಹದಡಿ ಗ್ರಾಪಂ 6559 ಮತದಾರರಲ್ಲಿ 5643 ಮತದಾರರು (ಶೇ.86.03), ಕುಕ್ಕವಾಡ ಗ್ರಾಪಂ 3623 ಮತದಲ್ಲಿ 2974 ಮತದಾರರು (ಶೇ.82.09), ಕನಗೊಂಡನಹಳ್ಳಿ ಗ್ರಾಪಂ 3527 ಮತದಾರರಲ್ಲಿ 3216 ಜನರು (ಶೇ.91.18) ಹಾಗೂ ಕುರ್ಕಿ ಗ್ರಾಪಂ ವ್ಯಾಪ್ತಿಯ 767 ಮತದಾರಲ್ಲಿ 685 ಮತದಾರರು (ಶೇ.89.31) ರಷ್ಟು ಜನರು ಮತ ಚಲಾವಣೆ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.