ರೈಲಿಗೆ ಸಿಲುಕಿ 68 ಕುರಿಗಳ ದಾರುಣ ಸಾವು

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಬೆಂಗಳೂರು-ಕೋಲಾರ ಮಾರ್ಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ. ಹುಸಹುಡ್ಯಾ ನಿವಾಸಿಗಳಾದ ಆಂಜಿನಪ್ಪ, ಕೂದಲಪ್ಪ, ಶಶಿಕಲಾ ಹಾಗೂ ನಾರಾಯಣಸ್ವಾಮಿಗೆ ಸೇರಿದ ಕುರಿಗಳಾಗಿದ್ದು, ಶುಕ್ರವಾರ ಬೆಳಿಗ್ಗೆ 11.30 ರಲ್ಲಿ ಕುರಿಗಾಹಿಗಳು ಮೆಯಿಸಲು ಹೋಗಿದ್ದ ಸಮಯದಲ್ಲಿ ಕುರಿಹಿಂಡಿನ ಮೇಲೆ ನಾಯಿಗಳು ದಾಳಿ ಮಾಡಿದ ಹಿನ್ನಲೆಯಲ್ಲಿ ಬೆದರಿದ ಕುರಿಗಳ ಹಿಂಡು ಒಮ್ಮೆಗೆ ರೈಲ್ವೆ ಟ್ರಾಕ್ ಮೇಲೆ ನುಗ್ಗಿವೆ. ಇದೇ ವೇಳೆಯಲ್ಲಿ ಬೆಂಗಳೂರು-ಕೋಲಾರ ಮಾರ್ಗವಾಗಿ ಸಂಚರಿಸುವ ಪ್ಯಾಸೆಂಜರ್‌ ರೈಲು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟದತ್ತ ತೆರಳುತ್ತಿತ್ತು.ರೈಲ್ವೆ ಟ್ರಾಕ್ ಮೇಲೆ ಇದ್ದ ಅಷ್ಟೂ ಕುರಿಗಳು ರೈಲಿನಡಿ ಸಿಲುಕಿ, ಚಿತ್ರವಿಚಿತ್ರವಾಗಿ ಸತ್ತುಹೋಗಿವೆ. ರೈಲಿಗೆ ಸಿಲುಕಿದ ಕೆಲ ಕುರಿಗಳು ಶಿಡ್ಲಘಟ್ಟ ರೈಲ್ವೆ ಸ್ಟೇಷನ್ ವರೆಗೂ ಹೋಗಿ ಬಿದ್ದಿವೆ.

ಬೆಂಗಳೂರು-ಕೋಲಾರ ಮಾರ್ಗವಾಗಿ ಚಲಿಸುತ್ತಿದ್ದ ರೈಲಿಗೆ ಕುರಿಗಳ ಬಲಿ । ನಷ್ಟ ಭರಿಸುವಂತೆ ಕುರಿಗಾಹಿಗಳಿಂದ ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಲಿಸುವ ರೈಲಿಗೆ ಸಿಲುಕಿ 68ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಲಕ್ಕಹಳ್ಳಿ- ಅಮ್ಮನ ಕೆರೆಯಂಗಳದ ಬಳಿ ನಡೆದಿದೆ.

ಕುರಿಗಾಹಿ ಕೂದಲಮ್ಮಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು-ಕೋಲಾರ ಮಾರ್ಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ. ಹುಸಹುಡ್ಯಾ ನಿವಾಸಿಗಳಾದ ಆಂಜಿನಪ್ಪ, ಕೂದಲಪ್ಪ, ಶಶಿಕಲಾ ಹಾಗೂ ನಾರಾಯಣಸ್ವಾಮಿಗೆ ಸೇರಿದ ಕುರಿಗಳಾಗಿದ್ದು, ಶುಕ್ರವಾರ ಬೆಳಿಗ್ಗೆ 11.30 ರಲ್ಲಿ ಕುರಿಗಾಹಿಗಳು ಮೆಯಿಸಲು ಹೋಗಿದ್ದ ಸಮಯದಲ್ಲಿ ಕುರಿಹಿಂಡಿನ ಮೇಲೆ ನಾಯಿಗಳು ದಾಳಿ ಮಾಡಿದ ಹಿನ್ನಲೆಯಲ್ಲಿ ಬೆದರಿದ ಕುರಿಗಳ ಹಿಂಡು ಒಮ್ಮೆಗೆ ರೈಲ್ವೆ ಟ್ರಾಕ್ ಮೇಲೆ ನುಗ್ಗಿವೆ. ಇದೇ ವೇಳೆಯಲ್ಲಿ ಬೆಂಗಳೂರು-ಕೋಲಾರ ಮಾರ್ಗವಾಗಿ ಸಂಚರಿಸುವ ಪ್ಯಾಸೆಂಜರ್‌ ರೈಲು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟದತ್ತ ತೆರಳುತ್ತಿತ್ತು.ರೈಲ್ವೆ ಟ್ರಾಕ್ ಮೇಲೆ ಇದ್ದ ಅಷ್ಟೂ ಕುರಿಗಳು ರೈಲಿನಡಿ ಸಿಲುಕಿ, ಚಿತ್ರವಿಚಿತ್ರವಾಗಿ ಸತ್ತುಹೋಗಿವೆ. ರೈಲಿಗೆ ಸಿಲುಕಿದ ಕೆಲ ಕುರಿಗಳು ಶಿಡ್ಲಘಟ್ಟ ರೈಲ್ವೆ ಸ್ಟೇಷನ್ ವರೆಗೂ ಹೋಗಿ ಬಿದ್ದಿವೆ.

ಮಾಹಿತಿ ತಿಳಿದ ರೈಲ್ವೆ ಪೊಲೀಸ್ ಸ್ಥಳಕ್ಕೆ ಆಗಮಿಸಿ ಪತಿಶೀಲನೆ ನಡೆಸಿ ಕುರಿ ಮಾಲೀಕರ ಹೆಸರು ವಿಳಾಸ ಸಂಗ್ರಹಿಸಿದರು, ಕುರಿ ಮತ್ತು ಉಣ್ಣೆ ಅಬಿವೃದ್ದಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸತ್ತ ಕುರಿಗಳ ಲೆಕ್ಕ ಪಡೆದರು.

ಈ ವೇಳೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಜ್ಞಾನೇಶ್, ಸುಮಾರು 68 ಕುರಿಗಳು ನಮಗೆ ಪತ್ತೆಯಾಗಿವೆ, ಇನ್ನೊಂದಷ್ಟು ಕುರಿಗಳನ್ನು ಮುಂದಕ್ಕೆ ಎಳೆದೊಯ್ದಿರಬಹುದು. ಆ ಕುರಿಗಳಲ್ಲಿ ಗರ್ಬಿಣಿಯಾಗಿದ್ದ ಕುರಿಗಳೂ ಇದ್ದವು.ಇದರಿಂದ ಲಕ್ಷಾಂತರ ರು. ಗಳು ನಷ್ಟವಾಗಿದೆ, ಎಲ್ಲ ಕುರಿಗಳು ಹೊಸಹುಡ್ಯ ಗ್ರಾಮದ ಮೂರ್ನಾಲಕ್ಕೂ ಮಾಲೀಕರಿಗೆ ಸೇರಿವೆ. ನಷ್ಟಕ್ಕೊಳಗಾದ ಮಾಲೀಕರಿಗೆ ಒಂದು ಕುರಿಗೆ ಐದು ಸಾವಿರ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.

ಕುರಿಗಳನ್ನು ಕಳೆದುಕೊಂಡ ಮಾಲೀಕ ಆಂಜಿನಪ್ಪ ಮಾತನಾಡಿ, ಮಾಮೂಲಿಯಂತೆ ನಮ್ಮವರು ಕುರಿ ಮೇಯಿಸಲು ಬಂದಿದ್ದರು, ನಾಯಿಗಳು ಒಡಿಸಿಕೊಂಡು ಬಂದ ಕಾರಣ ಎಲ್ಲ ಕುರಿಗಳು ಒಟ್ಟಿಗೆ ರೈಲ್ವೆ ಟ್ರಾಕ್ ಮೇಲೆ ಬಂದು ನಿಂತಿದ್ದವು, ಅದೇ ವೇಳೆಗೆ ರೈಲು ಬಂದು ಈ ಅವಘಡವಾಗಿದೆ. ನನಗೆ ಇಬ್ಬರು ಹೆಣ್ಣು ಮಕ್ಕಳು, ಅವರಿಗೆ ಮದುವೆ ಮಾಡಬೇಕು. ಕುರಿಗಳಲ್ಲಿಯೇ ಐದು ಲಕ್ಷ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇವು ಎಂದು ಕಣ್ಣೀರು ಹಾಕಿದರು.

ಕುರಿಗಳನ್ನೇ ನಂಬಿಕೊಂಡು ಜೀವನ ಸಾಗಿಸಿದ್ದ ಆ ನಾಲ್ಕು ಕುಟುಂಬಗಳು ಈ ಅಪಘಾತದಿಂದ ಆಘಾತಕ್ಕೊಳಗಾಗಿದ್ದು, ಸರ್ಕಾರ ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿದರೆ ಮಾತ್ರ ಅವರ ಕಷ್ಟದಲ್ಲೊಂದಿಷ್ಟು ಬಾಗಿಯಾದಂತೆ ಆಗುತ್ತದೆ.

---

ರೈಲಿಗೆ ಸಿಲುಕಿ ದಾರುಣವಾಗಿ ಸತ್ತಿರುವ ಕುರಿಗಳ ರಾಶಿ ರಾಶಿ ಹೆಣಗಳು.

Share this article