ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲಾದ್ಯಂತ ಶುಕ್ರವಾರ ರಾತ್ರಿಯಿಡೀ ಭಾರಿ ಸಿಡಿಲು ಮಳೆಯಾಗಿದೆ. ಗಾಳಿಯಿಂದ, ಅನೇಕ ಮನೆಗಳ ಮೇಲೆ ಮರಗಳು ಉರುಳಿ, 25 ಮನೆ, 4 ಜಾನುವಾರು ಕೊಟ್ಟಿಗೆಗಳಿಗೆ ಮತ್ತು ಅಡಕೆ- ಬಾಳೆ ತೋಟಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. ಒಂದೇ ರಾತ್ರಿಯಲ್ಲಿ ಜಿಲ್ಲೆಯಲ್ಲಿ 69 ಮಿ.ಮೀ. ಮಳೆಯಾಗಿದೆ.
ಸಿಡಿಲು ಬಡಿದು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಸಾಧು ಮೂಲ್ಯ ಅವರ ಮನೆಗೆ 30 ಸಾವಿರ, ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಹರೀಶ್ ಅವರ ಮನೆಗೆ 25 ಸಾವಿರ, ಮಲ್ಲಾರು ಗ್ರಾಮದ ದಿನೇಶ್ ಕೋಟ್ಯಾನ್ ಮನೆಗೆ 40 ಸಾವಿರ, ಶಿರ್ವ ಗ್ರಾಮದ ಲೀಲಾ ಆಚಾರ್ಯ ಮನೆಗೆ 15 ಸಾವಿರ, ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ಅಬ್ದುಲ್ ರಹೀಮ್ ಅವರ ಮನೆಗೆ 75 ಸಾವಿರ, ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ಜ್ಯೋತಿ ಮರಾಠಿ ಅವರ ಮನೆಗೆ 50 ಸಾವಿರ, ರೇವತಿ ಮಹಾಬಲ ಅವರ ಮನೆಗೆ 1 ಲಕ್ಷ ರು.ಗಳ ನಷ್ಟ ಸಂಭವಿಸಿದೆ.ಅದೇ ರೀತಿ ಗಾಳಿ ಮಳೆಗೆ ಮರಗಳು ಉರುಳಿ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ನೂರುದ್ದೀನ್ ಮನೆಗೆ 75 ಸಾವಿರ, ಬೈಂದೂರು ತಾಲೂಕಿನ ತೆಗ್ಗರ್ಸೆ ಗ್ರಾಮದ ಗುರ್ಗಮ್ಮ ಶೇರಿಗಾರ್ ಮನೆಗೆ 10 ಸಾವಿರ, ಬೈಂದೂರು ಗ್ರಾಮದ ಚೇತನ್ ಕುಮಾರ್ ಮನೆಗೆ 70 ಸಾವಿರ, ಶಾರದಾ ಪೂಜಾರಿ ಮನೆಗೆ 50 ಸಾವಿರ, ಜುಲೇಖಾ ಅಬ್ಬಾಸ್ ಮನೆಗೆ 50 ಸಾವಿರ ರು., ಪಡುವರಿ ಗ್ರಾಮದ ಪಾರ್ವತಿ ಪೂಜಾರಿ ಮನೆಗೆ 50 ಸಾವಿರ, ಕೊಲ್ಲೂರಿ ಪೂಜಾರಿ ಮನೆಗೆ 50 ಸಾವಿರ, ಯಡ್ತೆರೆ ಗ್ರಾಮದ ಶ್ರೀನಿವಾಸ ನಾಯ್ಕ ಮನೆಗೆ 50 ಸಾವಿರ, ವೀರಭದ್ರ ಅವರ ಮನೆಗೆ 50 ಸಾವಿರ, ರು.ಗಳಷ್ಟು ಹಾನಿಯಾಗಿದೆ.
ಇನ್ನು ಗಾಳಿಮಳೆಗೆ ಬೈಂದೂರು ತಾಲೂಕಿನ ಬೈಂದೂರು ಗ್ರಾಮದ ಭಾಗೀರಥಿ ಅವರ ಮನೆಗೆ 50 ಸಾವಿರ, ಸಂದೇಶ ಹೆಬ್ಬಾಗಿಲು ಅವರ ಮನೆಗೆ 50 ಸಾವಿರ, ನಾಗರಾದ ಶೇರಿಗಾರ್ ಮನೆಗೆ 50 ಸಾವಿರ ರು., ಯಡ್ತೆರೆ ಗ್ರಾಮದ ಬಾಬು ಮೊಗವೀರ ಅವರ ಮನೆಗೆ 60 ಸಾವಿರ, ಶಾಂತಿ ಮಂಜುನಾಥ ಅವರ ಮನೆಗೆ 50 ಸಾವಿರ, ತುಂಬಾ ಸೋಮನಾಥ ಅವರ ಮನೆಗೆ 50 ಸಾವಿರ, ಮುಕಾಂಬು ಮಹಾಬಲ ಮನೆಗೆ 50 ಸಾವಿರ, ನಾಗರತ್ನ ಗೋವಿಂದ ಮನೆಗೆ 50 ಸಾವಿರ, ಪಡುವರಿ ಗ್ರಾಮದ ಮರ್ಲಿ ಪೂಜಾರಿ ಮನೆಗೆ 50 ಸಾವಿರ, ಪಾರ್ವತಿ ಲಿಂಗಯ್ಯ ಮನೆಗೆ 50 ಸಾವಿರ, ಮರ್ಲಿ ಗೋವಿಂದ ಮನೆಗೆ 50 ಸಾವಿರ ರು. ಹಾನಿಯಾಗಿದೆ.ಬೈಂದೂರು ತಾಲೂಕಿನ ಬೈಂದೂರು ಗ್ರಾಮದ ವಿಘ್ನೇಶ್ವರ ಮುದ್ದೋಡಿ ಅವರ ಬಾಳೆ ತೋಟಕ್ಕೆ 50 ಸಾವಿರ, ರಾಮ ಶೇರಿಗಾರ್ ಅವರ ಅಡಕೆ ತೋಟಕ್ಕೆ 50 ಸಾವಿರ, ನಾಗರಾಜ ಶೇರಿಗಾರ್ ಅವರ ಅಡಕೆ ಮತ್ತು ಬಾಳೆ ತೋಟಕ್ಕೆ 60 ಸಾವಿರ, ಪಡುವರಿ ಗ್ರಾಮದ ಮರ್ಲಿ ನಾಗಪ್ಪ ಅವರ ಅಡಕೆ ತೋಟಕ್ಕೆ 45 ಸಾವಿರ, ಯಡ್ತೆರೆ ಗ್ರಾಮದ ವೀರಭದ್ರ ಅವರ ಅಡಕೆ ತೋಟಕ್ಕೆ 45 ಸಾವಿರ ರು.ಗಳಷ್ಟು ನಷ್ಟವಾಗಿದೆ.
ಗಾಳಿಗೆ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಕುಂದಾಪುರ ತಾಲೂಕಿನ ಮೊಳಹಳ್ಳಿ ಗೋವಿಂದ ನಾಯ್ಕರಿಗೆ 8 ಸಾವಿರ, ಸಂಜೀವ ಮೋಗವೀರರಿಗೆ 90 ಸಾವಿರ, ಅಂಪಾರು ಗ್ರಾಮದ ಯಶೋಧಾ ಪಾಣರಿಗೆ 10 ಸಾವಿರ, ಸಿದ್ದು ಪೂಜಾರಿ ಅವರಿಗೆ 10 ಸಾವಿರ ರು. ನಷ್ಟವಾಗಿದೆ.ಶುಕ್ರವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 69.60 ಮಿ.ಮೀ. ಮಳೆಯಾಗಿದೆ. ಕಾರ್ಕಳ 78.70, ಕುಂದಾಪುರ 52.90, ಉಡುಪಿ 99.90, ಬೈಂದೂರು 43.70, ಬ್ರಹ್ಮಾವರ 78.70, ಕಾಪು 130.90 ಮತ್ತು ಹೆಬ್ರಿ 70 ಮಿ.ಮೀ. ಮಳೆಯಾಗಿದೆ.