ಕನ್ನಡಪ್ರಭ ವಾರ್ತೆ ಮಂಡ್ಯ
ಕುಡಿಯುವ ನೀರಿಗಾಗಿ ಕೆಆರ್‌ಎಸ್‌ನಿಂದ 1 ರಿಂದ 4ನೇ ಹಂತದವರೆಗೆ ಯೋಜನೆ ರೂಪಿಸಿ ಜಾರಿಗೊಳಿಸಿದೆ. ಐದನೇ ಹಂತಕ್ಕೆ 4600 ಕೋಟಿ ರು. ಇದೀಗ 6939 ಕೋಟಿ ರು. ವೆಚ್ಚದಲ್ಲಿ ಆರನೇ ಹಂತದ ಯೋಜನೆಗೂ ಡಿಪಿಆರ್ ತಯಾರಿಸಿ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ. ಇದು ಮಂಡ್ಯ ಜಿಲ್ಲೆಯ ರೈತರಿಗೆ ದೊಡ್ಡ ಆಘಾತಕಾರಿ ಸುದ್ದಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರನೇ ಹಂತದ ಯೋಜನೆಗೆ ಜಿಲ್ಲೆಯ ಕಟ್ಟೇರಿ ಬಳಿ ಸಂಸ್ಕರಣಾ ಘಟಕ, ಶೇಖರಣಾ ಜಲಾಶಯ ನಿರ್ಮಿಸಿ ಅಲ್ಲಿಂದ ನೀರನ್ನು ಪಂಪ್ ಮಾಡಿ 82 ಕಿ.ಮೀ. ದೂರಕ್ಕೆ ನೀರನ್ನು ಹರಿಸುವ ಕಾರ್ಯಕ್ರಮ ಇದಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ 49.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದರೂ ಬಳಕೆಗೆ ಸಿಗುವುದು 41 ಟಿಎಂಸಿ ನೀರು ಮಾತ್ರ. ವರ್ಷಕ್ಕೆ ಕುಡಿಯುವ ನೀರಿಗೆ 24 ಟಿಎಂಸಿ ನೀರನ್ನು ಬಳಕೆ ಮಾಡಲಾಗುತ್ತಿದ್ದು, ಉಳಿದ 25 ಟಿಎಂಸಿ ನೀರಿನಲ್ಲಿ ಡ್ಯಾಂ ಸುರಕ್ಷತೆ, ವಾತಾವರಣ, ತಮಿಳುನಾಡಿಗೆ ನೀರು ಬಿಡುವುದನ್ನು ಸೇರಿಸಿದರೆ ಜಿಲ್ಲೆಯ ಕೃಷಿಗೆ ನೀರಿನ ಲಭ್ಯತೆಯೇ ಇರುವುದಿಲ್ಲ ಎಂದರು.ಬೆಂಗಳೂರಿನ ಕುಡಿವ ನೀರಿನ ಯೋಜನೆಗೆ ಪ್ರತಿ ತಿಂಗಳು 2 ಟಿಎಂಸಿ ನೀರನ್ನು ಉಪಯೋಗಿಸಲಾಗುತ್ತಿದೆ. 6ನೇ ಹಂತದ ಯೋಜನೆಗೆ 6 ಟಿಎಂಸಿ ನೀರನ್ನು ತೆಗೆದುಕೊಂಡು ಹೋದರೆ ಕೊನೆಯ ಭಾಗದ ಮಳವಳ್ಳಿ, ಮದ್ದೂರು ಭಾಗಗಳ ಕೃಷಿ ಸಂಪೂರ್ಣ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಆರ್‌ಎಸ್ ಅಣೆಕಟ್ಟೆ ನೀರು ಪ್ರಧಾನವಾಗಿ ಕೃಷಿಗೆ ಬಳಕೆಯಾಗಬೇಕೇ ಹೊರತು ಮಹಾನಗರಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಲ್ಲ ಎನ್ನುವುದನ್ನು ಸರ್ಕಾರಕ್ಕೆ ಆಗಿಂದಾಗ್ಗೆ ಮನದಟ್ಟು ಮಾಡಿಕೊಡುತ್ತಿದ್ದರೂ ಕೆಆರ್‌ಎಸ್ ನೀರನ್ನು ಪೂರೈಸಜು ಜಿಲ್ಲೆಯ ಕೃಷಿ ಗ್ರಾಮಗಳನ್ನು ನಗರೀಕರಣ ಮಾಡಲು ಯೋಜನೆಗಳನ್ನು ಸರ್ಕಾರ ರೂಪಿಸುತ್ತಲೇ ಇದೆ ಎಂದು ದೂಷಿಸಿದರು.
ರಾಜ್ಯ ಸರ್ಕಾರ ಐದನೇ ಹಂತದ ಯೋಜನೆಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಫುಲ್‌ಸ್ಟಾಪ್ ಹಾಕಬೇಕು. ನೀರಿಗಾಗಿ ಕೆಆರ್‌ಎಸ್ ನೀರಿನ ಮೇಲೆ ಆಕ್ರಮಣಕಾರಿ ಧೋರಣೆಯನ್ನು ಕೈಬಿಡಬೇಕು. ಜೊತೆಗೆ ಜಿಲ್ಲೆಯ ರೈತರು, ಸಾರ್ವಜನಿಕರು ಭವಿಷ್ಯದಲ್ಲಿ ಎದುರಾಗಲಿರುವ ನೀರಿನ ಹಾಹಾಕಾರವನ್ನು ತಡೆಯಲು ಈಗಲೇ ಸನ್ನದ್ಧರಾಗಿ ಹೋರಾಟಕ್ಕೆ ಧುಮುಕುವಂತೆ ಮನವಿ ಮಾಡಿದರು.ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಈ ವಿಷಯವಾಗಿ ಶೀಘ್ರವೇ ಸಭೆ ಕರೆದು ಹೋರಾಟದ ರೂಪು-ರೇಷೆಗಳನ್ನು ತಯಾರಿಸಲಾಗುವುದು ಎಂದು ನುಡಿದರು.
ಗೋಷ್ಠಿಯಲ್ಲಿ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಹೆಚ್.ಸಿ.ಮಂಜುನಾಥ, ಎಸ್.ನಾರಾಯಣ್, ಸಾತನೂರು ವೇಣುಗೋಪಾಲ್ ಇದ್ದರು.