ಆಸ್ತಿ ವಿಚಾರಕ್ಕೆ ವೃದ್ಧೆ ಹತ್ಯೆ: 7 ಆರೋಪಿಗಳು ಕೋರ್ಟ್‌ಗೆ ಹಾಜರು

KannadaprabhaNewsNetwork |  
Published : May 08, 2024, 01:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಮತೆ ವೃದ್ದೆಯನ್ನು ಹತ್ಯೆಗೈದು ಮೃತದೇಹವನ್ನು ಸುಟ್ಟುಹಾಕಿ ಸಾಕ್ಷ್ಯನಾಶ ಮಾಡಿದ ಏಳು ಜನ ಆರೋಪಿತರನ್ನು ಬಂಧಿಸಿರುವ ದಾವಣಗೆರೆ ಕೆಟಿಜೆ ನಗರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ದಾವಣಗೆರೆ: ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಮತೆ ವೃದ್ದೆಯನ್ನು ಹತ್ಯೆಗೈದು ಮೃತದೇಹವನ್ನು ಸುಟ್ಟುಹಾಕಿ ಸಾಕ್ಷ್ಯನಾಶ ಮಾಡಿದ ಏಳು ಜನ ಆರೋಪಿತರನ್ನು ಬಂಧಿಸಿರುವ ಕೆಟಿಜೆ ನಗರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಉಮಾದೇವಿ ಹತ್ಯೆಯಾದ ವೃದ್ಧೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ದೆಯನ್ನು ಏ.30ರಂದು ಹತ್ಯೆಗೈದ ಆರೋಪಿಗಳಾದ ಕಾರ್ತಿಕ, ಸಂದೀಪ, ತೇಜಸ್ವಿನಿ, ಮಹೇಶಪ್ಪ, ನಾಗರಾಜ, ಶಿವು, ವಿವೇಕ ಇವರು ವೃದ್ಧೆಗೆ ಸೇರಿದ ₹13,02,000, ಮೌಲ್ಯದ 217 ಗ್ರಾಂ ಬಂಗಾರವನ್ನು ದೋಚಿ, ಶವವನ್ನು ಅಂತ್ಯಸಂಸ್ಕಾರ ಮಾಡಿದ್ದರು.

ಈ ಬಗ್ಗೆ ವೃದ್ಧೆಯ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ ಮತ್ತು ನಗರ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಕೆಟಿಜೆ ನಗರ ಠಾಣೆಯ ಪಿಐ ಎಚ್.ಎಸ್. ಸುನೀಲ್‌ಕುಮಾರ್ ನೇತೃತ್ವದಲ್ಲಿ ಸಾಗರ್ ಅತ್ತರ್‌ವಾಲ ಪಿ.ಎಸ್.ಐ (ಕಾ ಮತ್ತು ಸು), ಎ.ಎಸ್.ಐ. ಈರಣ್ಣ ಹಾಗೂ ಸಿಬ್ಬಂದಿ ಶ್ರೀನಿವಾಸ್, ರವಿ, ಗೌತಮ್, ಷಣ್ಮುಖ, ಶಿವರಾಜ, ಮಂಜಪ್ಪ, ಗಿರೀಶ್ ಗೌಡ, ಹರೀಶ ನಾಯ್ಕ, ವತ್ಸಲ, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ ಮತ್ತು ಶಾಂತರಾಜ್ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಸದರಿ ತಂಡವು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪ್ರಕರಣ ಭೇದಿಸಿ, ಆರೋಪಿತರಿಂದ 217 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?