ಜಾನುವಾರುಗಳ ಕದ್ದು ಸಂತೆಗಳಲ್ಲಿ ಮಾರಾಟ: 7 ಬಂಧನ

KannadaprabhaNewsNetwork |  
Published : Jun 21, 2026, 02:00 AM IST
ತಾಲೂಕಿನ ವಿವಿದೆಡೆಗಳಲ್ಲಿ ಜಾನುವಾರುಗಳ ಕಳ್ಳತನ ಮಾಡಿ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ ನ್ಯಾಮತಿ ಪೊಲೀಸ್‌ ಠಾಣೆಯ ಪಿಐ ಸಿದ್ದೇಗೌಡ ಮತ್ತು ಸಿಬ್ಬಂದಿಗಳು. | Kannada Prabha

ಸಾರಾಂಶ

ನ್ಯಾಮತಿ ತಾಲೂಕಿನ ವಿವಿಧೆಡೆ ಜಾನುವಾರುಗಳನ್ನು ಕದ್ದು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದ 7 ಕಳ್ಳರನ್ನು ಬಂಧಿಸಿ ವಾಹನ ಹಾಗೂ ಹಸುಗಳನ್ನು ನ್ಯಾಮತಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

- ನ್ಯಾಮತಿ ಪೊಲೀಸರ ಕಾರ್ಯಾಚರಣೆಗೆ । ಜಿಲ್ಲಾ ಎಸ್‌ಪಿ ಶೇಖರ್‌ ಎಚ್‌.ಟಿ. ಶ್ಲಾಘನೆ - - -

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ವಿವಿಧೆಡೆ ಜಾನುವಾರುಗಳನ್ನು ಕದ್ದು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದ 7 ಕಳ್ಳರನ್ನು ಬಂಧಿಸಿ ವಾಹನ ಹಾಗೂ ಹಸುಗಳನ್ನು ನ್ಯಾಮತಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಚಾಲಕ ಮುರುಳಿ (21), ಮಲ್ಲೇಶ್‌ ಎಂ. (27), ಗಣೇಶ್‌ ಕೆ. (27), ಆದರ್ಶ ಜಿ.ಎ. (23), ಹರೀಶ್‌ (39), ಬೇಗೂರು ಗ್ರಾಮದ ಫಕಿರೇಶ್‌ (22), ಕೆಂಚಿಗೊಂಡನಕೊಪ್ಪ ಗ್ರಾಮದ ಶಶಿಕುಮಾರ್‌ (29) ಬಂಧಿತ ಆರೋಪಿಗಳು. ನ್ಯಾಮತಿ ಟೌನ್‌ ಹಾಗೂ ತಾಲೂಕಿನ ಆರುಂಡಿ ಗ್ರಾಮದಲ್ಲಿ ಜಾನುವಾರುಗಳ ಕಳವು ಕುರಿತು ದೂರುಗಳು ದಾಖಲಾಗಿದ್ದವು. ಪ್ರಕರಣ ದಾಖಲಿಸಿದ್ದ ನ್ಯಾಮತಿ ಪೊಲೀಸರು ಜಾನುವಾರು ಕಳ್ಳರ ಪತ್ತೆಗೆ ಕಾರ್ಯಾಚರಣೆಗೆ ಕ್ರಮ ಕೈಗೊಂಡಿದ್ದರು.

ನ್ಯಾಮತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳರು ಎರಡು ತಂಡಗಳ ಕಟ್ಟಿಕೊಂಡು ಜಾನುವಾರುಗಳನ್ನು ಕಳ್ಳವು ಮಾಡುತ್ತಿದ್ದರು. ಬಳಿಕ ಅವುಗಳನ್ನು ಅಶೋಕ ಲೇಲ್ಯಾಂಡ್‌ ಮತ್ತು ಟಾಟಾ ಇಂಟ್ರಾ ವಾಹನಗಳಲ್ಲಿ ಸಾಗಿಸಿ, ಬೇರೆ ಬೇರೆ ವಾರದ ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ವಿಚಾರಣೆ ವೇಳೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಠಾಣೆಯ ಪಿಐ ಎಚ್‌.ಎಂ.ಸಿದ್ದೇಗೌಡ ತಿಳಿಸಿದ್ದಾರೆ.

ಚನ್ನಗಿರಿ ಉಪವಿಭಾಗದ ಪೊಲೀಸ್‌ ಅಧೀಕ್ಷಕ ರುದ್ರಪ್ಪ ಉಜ್ಜಿನಕೊಪ್ಪ ಉಸ್ತುವಾರಿಯಲ್ಲಿ ತಂಡ ರಚಿಸಿ ನ್ಯಾಮತಿ ಪೊಲೀಸ್‌ ಠಾಣೆಯ ಪಿಐ ಸಿದ್ದೇಗೌಡ, ಪಿಎಸ್‌ಐ ಹೊಳೆಬಸಪ್ಪ ಮತ್ತು ಶೋಭರಾಣಿ, ಸಿಬ್ಬಂದಿಗಳಾದ ಮಂಜಪ್ಪ, ವಿಕ್ರಂ, ಭರತ್‌, ಮನೋಹರ್‌, ಉಮೇಶ್‌, ರಂಗಪ್ಪ, ಗಿರೀಶ್‌ನಾಯ್ಕ, ಶಿವರಾಜ್‌, ಆನಂದ, ಯಶವಂತಾಚಾರಿ, ಪ್ರಶಾಂತ್‌, ನಿರಂಜನ್‌, ರಾಮಪ್ಪ, ಪಂಪನಾಯ್ಕ, ಪ್ರಸನ್ನ, ಚನ್ನೇಶ ರವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕ ಶೇಖರ್‌ ಎಚ್‌.ಟಿ. ಶ್ಲಾಘಿಸಿದ್ದಾರೆ.

- - -

-ಚಿತ್ರ:

ನ್ಯಾಮತಿ ತಾಲೂಕಿನ ವಿವಿಧೆಡೆಗಳಲ್ಲಿ ಜಾನುವಾರುಗಳ ಕದ್ದು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ನ್ಯಾಮತಿ ಪೊಲೀಸ್‌ ಠಾಣೆಯ ಪಿಐ ಸಿದ್ದೇಗೌಡ, ಸಿಬ್ಬಂದಿ ಬಂಧಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗಳ ಎಲ್‌ಕೆಜಿ–ಯುಕೆಜಿಗೆ ಉತ್ತಮ ಸ್ಪಂದನೆ
ಶಿಥಿಲಾವಸ್ಥೆ ತಲುಪಿದ ಶಿರಸಿ ಪೊಲೀಸ್ ವಸತಿಗೃಹ, ಸೋರುವ ಮನೆಯಲ್ಲೇ ವಾಸ