ಕನಕಪುರ: ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನೇತೃತ್ವದಲ್ಲಿ ಆಯೋಜಿಸಿದ್ದ ಮೂರು ದಿನಗಳ ಇ-ಖಾತಾ ಆಂದೋಲನದಲ್ಲಿ ಅರ್ಜಿ ಸಲ್ಲಿಸಿದ್ದ 72 ಸ್ವತ್ತುಗಳಿಗೆ ನಗರಸಭೆ ಇ-ಖಾತೆಗಳನ್ನು ಆಸ್ತಿ ಮಾಲಿಕರಿಗೆ ವಿತರಣೆ ಮಾಡಲಾಯಿತು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಇ-ಖಾತೆಗಳನ್ನು ವಿತರಿಸಿ ಮಾತನಾಡಿ, ಕೆಲವರು ಅಗತ್ಯ ಬಿದ್ದಾಗ ಇ-ಖಾತೆಗೆ ಅರ್ಜಿ ಸಲ್ಲಿಸಿದ್ದು ಸಮಯಕ್ಕೆ ಸರಿಯಾಗಿ ಇ-ಖಾತೆ ಸಿಗದಿದ್ದರೆ ಕಚೇರಿಗೆ ಬಂದು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ನಗರಸಭೆ ಇ-ಖಾತಾ ಆಂದೋಲನ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಆಂದೋಲನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಆಂದೋಲನದಲ್ಲಿ ನಗರಸಭೆ ಪೌರಾಯುಕ್ತ ಎಂ.ಎಸ್.ಮಹದೇವ್, ಉಪಾಧ್ಯಕ್ಷ ಸೈಯದ್ ಸಾಧಿಕ್, ಸದಸ್ಯರಾದ ವಿಜಯಕುಮಾರ್, ಕಾಂತರಾಜು, ರಾಮದಾಸ್, ಹೇಮರಾಜು ಸೇರಿದಂತೆ ಅಧಿಕಾರಿಗಳು, ನೌಕರರು, ಸಿಬ್ಬಂದಿ ಉಪಸ್ಥಿತರಿದ್ದರು.ಬಾಕ್ಸ್...............
-ಮಹದೇವ್, ಪೌರಾಯುಕ್ತ, ನಗರಸಭೆ
ಕೆ ಕೆ ಪಿ ಸುದ್ದಿ 02:ಕನಕಪುರ ನಗರಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಇ-ಖಾತೆಗಳನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೌರಾಯುಕ್ತ ಮಹದೇವ್, ಉಪಾಧ್ಯಕ್ಷ ಸೈಯದ್ ಸಾಧಿಕ್, ಸದಸ್ಯರಾದ ವಿಜಯಕುಮಾರ್, ಕಾಂತರಾಜು, ರಾಮದಾಸ್, ಹೇಮರಾಜು ಇತರರಿದ್ದರು.