15 ತಿಂಗಳಲ್ಲಿ ₹7000 ಕೋಟಿ ಫ್ರೀ ಟಿಕೆಟಲ್ಲಿ ಸ್ತ್ರೀಯರ ಸಂಚಾರ

KannadaprabhaNewsNetwork |  
Published : Sep 10, 2024, 01:40 AM IST
ಶಕ್ತಿ ಯೋಜನೆ  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅಡಿಯಲ್ಲಿ ಈವರೆಗೆ ಸಂಚರಿಸಿದ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 7 ಸಾವಿರ ಕೋಟಿ ರು. ತಲುಪಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅಡಿಯಲ್ಲಿ ಈವರೆಗೆ ಸಂಚರಿಸಿದ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 7 ಸಾವಿರ ಕೋಟಿ ರು. ತಲುಪಿದೆ.

ಕಳೆದ ವರ್ಷದ ಜೂನ್‌ 11ರಂದು ಜಾರಿಯಾದ ಶಕ್ತಿ ಯೋಜನೆಯಡಿ ಕಳೆದ 15 ತಿಂಗಳಲ್ಲಿ 285 ಕೋಟಿ ಫಲಾನುಭವಿ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಹೀಗೆ ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯ 7 ಸಾವಿರ ಕೋಟಿ ರು. ತಲುಪಿದೆ.

2023-24ನೇ ಸಾಲಿನಲ್ಲಿ ಯೋಜನೆಗಾಗಿ 2,800 ಕೋಟಿ ರು. ನಿಗದಿ ಮಾಡಲಾಗಿತ್ತಾದರೂ, ಅಂತಿಮವಾಗಿ 4 ಸಾವಿರ ಕೋಟಿ ರು.ಗೂ ಹೆಚ್ಚಿನ ವೆಚ್ಚವಾಗಿತ್ತು. 2024-25ನೇ ಸಾಲಿಗೆ ರಾಜ್ಯ ಸರ್ಕಾರ 5,200 ಕೋಟಿ ರು. ಮೀಸಲಿಟ್ಟಿದೆ. ಅದರಲ್ಲಿ ಈಗಾಗಲೆ ಮೂರು ಸಾವಿರ ಕೋಟಿ ರು.ವರೆಗೆ ಖರ್ಚಾಗಿದ್ದು, ಇನ್ನು 6 ತಿಂಗಳಿಗೆ 2,200 ಕೋಟಿ ರು.ಗಳು ಮಾತ್ರ ಉಳಿದಿದೆ. ಹೀಗಾಗಿ ಈ ವರ್ಷವೂ ಯೋಜನೆಗಾಗಿ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಬೇಕಾಗುವ ಸಾಧ್ಯತೆಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಕ್ಷೇತ್ರದಲ್ಲಿ ಕೊಪ್ಪಳ ರಾಜ್ಯಕ್ಕೆ ಮಾದರಿ : ರಮೇಶ ಬನ್ನಿಕೊಪ್ಪ
ತೊಡೆ ತಟ್ಟಿ ಮಣ್ಣು ಮುಕ್ಕಿಸಿದ ಪೈಲ್ವಾನರು!