‘ಜೀವಾಮೃತ’ ಬ್ಯಾಂಕ್‌ಗೆ 7000 ಮಾತೆಯರ ಕೊಡುಗೆ

KannadaprabhaNewsNetwork |  
Published : Apr 17, 2026, 02:00 AM IST
ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ  ಸುರಾಲು ಚಂದ್ರಶೇಖರ ಭಟ್  | Kannada Prabha

ಸಾರಾಂಶ

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಸ್ಥಾಪಿಸಿದ್ದ ಜೀವಾಮೃತ ಹಾಲು ಬ್ಯಾಂಕಿಗೆ 2 ವರ್ಷದಲ್ಲೇ 7147 ಮಾತೆಯರು 1,530 ಲೀಟರ್‌ ಎದೆಹಾಲು ದಾನ ಮಾಡುವ ಮೂಲಕ 2,599 ಶಿಶುಗಳಿಗೆ ಮಾತೃಸ್ಪರ್ಶ ನೀಡಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಸ್ಥಾಪಿಸಿದ್ದ ಜೀವಾಮೃತ ಹಾಲು ಬ್ಯಾಂಕಿಗೆ 2 ವರ್ಷದಲ್ಲೇ 7147 ಮಾತೆಯರು 1,530 ಲೀಟರ್‌ ಎದೆಹಾಲು ದಾನ ಮಾಡುವ ಮೂಲಕ 2,599 ಶಿಶುಗಳಿಗೆ ಮಾತೃಸ್ಪರ್ಶ ನೀಡಿದ್ದಾರೆ.

ಮಗುವಿಗೆ ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ಪೌಷ್ಟಿಕಾಂಶ ಪಡೆಯಲು ತಾಯಿಯ ಹಾಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಮಗು ಜನನದ ಬಳಿಕ ಕೆಲ ಬಾಣಂತಿಯರು ಎದೆಹಾಲಿನ ಕೊರತೆ ಅನುಭವಿಸುವ ಪರಿಣಾಮ ಆ ಮಗು ಹಾಲು ದೊರೆಯದೆ ಅಪೌಷ್ಟಿಕತೆಯಿಂದ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ. ಜತೆಗೆ ಸಾವು ಸಹ ಸಂಭವಿಸಿದ ಉದಾಹರಣೆಗಳಿವೆ. ಇದನ್ನು ಮನಗಂಡು ಕೆಎಂಸಿಆರ್‌ಐನಲ್ಲಿ 2024ರ ಏ.12ರಂದು ‘ಹುಬ್ಬಳ್ಳಿ ಮಿಡ್‌ಟೌನ್ ರೋಟರಿ ಕ್ಲಬ್ ಮತ್ತು ಕೊಪ್ಪೆಲ್ ರೋಟರಿ ಕ್ಲಬ್’ (ಯುಎಸ್‌ಎ) ಸಹಯೋಗದೊಂದಿಗೆ ರಾಜ್ಯದ ಮೊದಲ ‘ಜೀವಾಮೃತ’ ಹಾಲು ಬ್ಯಾಂಕ್‌ ಸ್ಥಾಪಿಸಲಾಗಿತ್ತು. ಹೀಗೇ ಆಸ್ಪತ್ರೆಗೆ ಹೆರಿಗೆಗೆ ಬಂದ ತಾಯಂದಿರು ಮಗುವಿಗೆ ಜನ್ಮ ನೀಡಿದ ಬಳಿಕ ಅವರಲ್ಲಿರುವ ಹೆಚ್ಚುವರಿ ಹಾಲನ್ನು ದಾನದ ರೂಪದಲ್ಲಿ ನೀಡುತ್ತಿದ್ದಾರೆ. ಹೀಗೆ ಸಂಗ್ರಹವಾದ ಹಾಲನ್ನು ಜೀವಾಮೃತ ಬ್ಯಾಂಕಿನಲ್ಲಿ ಸಂಗ್ರಹಿಸಿ ಅವಶ್ಯವಿರುವ ಮಗುವಿಗೆ ನೀಡಲಾಗುತ್ತಿದೆ.

ನಿರ್ವಹಣೆ:

ಮೊದಲಿಗೆ ಎದೆಹಾಲು ನೀಡಲು ಹಿಂದೇಟು ಹಾಕುತ್ತಿದ್ದ ಮಹಿಳೆಯರು ಬಳಿಕ ತಾವೇ ಜೀವಾಮೃತ ಬ್ಯಾಂಕ್‌ಗೆ ಬಂದು ದಾನ ಮಾಡುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಿದ ಪರಿಣಾಮ ಎರಡು ವರ್ಷದಲೇ 7000ಕ್ಕೂ ಹೆಚ್ಚು ಮಾತೆಯರು ದಾನ ಮಾಡಿದ್ದಾರೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗೆ ಸಂಗ್ರಹಗೊಂಡ ಹಾಲನ್ನು ಒಂದು ತಿಂಗಳ ವರೆಗೆ ಸಂಸ್ಕರಿಸಿ ಬೇಕಾದ ಮಗುವಿಗೆ ನೀಡಲು ಸುಸಜ್ಜಿತ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಏಕಕಾಲಕ್ಕೆ 1500 ಲೀಟರ್‌ ಹಾಲು ಸಂಗ್ರಹಿಸಿ ಇಡಬಹುದಾಗಿದೆ.ಬಾಕ್ಸ್‌...

7147 ತಾಯಂದಿರಿಂದ ದಾನ

ಈ ಬ್ಯಾಂಕ್ ಮಕ್ಕಳ ಚಿಕಿತ್ಸಾ ವಿಭಾಗದ ಅಡಿ ಕಾರ್ಯನಿರ್ವಹಿಸುತ್ತಿದ್ದು, ನಾಲ್ವರು ದಾದಿಯರು, ಇಬ್ಬರು ಗ್ರೂಪ್ ಡಿ ಕೆಲಸಗಾರರು ಮತ್ತು ಒಬ್ಬ ನೋಡಲ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. 7147 ತಾಯಂದಿರು 1530 ಲೀಟರ್‌ ಹಾಲು ದಾನ ಮಾಡಿದ್ದಾರೆ. ಇದನ್ನು ಅವಧಿ ಪೂರ್ವ ಜನಿಸಿದ 1455 ಹಾಗೂ ಅಕಾಲಿಕವಾಗಿ ಜನಿಸಿದ 1444 ಸೇರಿ ಒಟ್ಟು 2599 ಶಿಶುಗಳಿಗೆ ನೀಡಲಾಗಿದೆ. ಈವರೆಗೆ 1,492 ಲೀಟರ್ ಹಾಲು ಸಂಸ್ಕರಿಸಿ, 9325 ಮಿಲಿ ಲೀಟರ್‌ ಹಾಲು ವಿತರಿಸಲು ಲಭ್ಯವಿದೆ.

----

ಮಗು ಸುರಕ್ಷಿತ

ವಾರದ ಹಿಂದೆ ಅವಧಿಪೂರ್ವ ಗಂಡು ಮಗುವಿಗೆ ಜನ್ಮ ನೀಡಿದ್ದು, ನಾನು ಎದೆಹಾಲು ನೀಡಲು ಸಾಧ್ಯವಾಗಲಿಲ್ಲ. ಜೀವಾಮೃತ ಬ್ಯಾಂಕಿನ ಹಾಲು ನೀಡಿದ ಪರಿಣಾಮ ಮಗು ಆರೋಗ್ಯಪೂರ್ಣವಾಗಿದೆ.

-ವಂದನಾ, ಬಾಣಂತಿ

---

ಉತ್ತಮ ಪ್ರತಿಕ್ರಿಯೆ

ಕೆಎಂಸಿಆರ್‌ಐನಲ್ಲಿ 2024ರಿಂದ ಪ್ರಾರಂಭಿಸಿರುವ ಜೀವಾಮೃತ ಹಾಲಿನ ಬ್ಯಾಂಕಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಗುವಿಗೆ ತಾಯಿಯ ಹಾಲಿನ ಮಹತ್ವ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುವುದು.

-ಡಾ। ಈಶ್ವರ ಹೊಸಮನಿ, ಕೆಎಂಸಿಆರ್‌ಐ ನಿರ್ದೇಶಕ

---

ಚಿತ್ರ ಶೀರ್ಷಿಕೆ

ಹುಬ್ಬಳ್ಳಿಯ ಕೆಎಂಸಿಆರ್‌ಐ ಜೀವಾಮೃತ ಹಾಲಿನ ಬ್ಯಾಂಕ್‌ನಲ್ಲಿ ಸಿಬ್ಬಂದಿಯೋ ತಾಯಂದಿರು ನೀಡಿರುವ ಹಾಲನ್ನು ಸಂಗ್ರಹಿಸಿಡುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯುವ ನೀರಿನ ಸಮಸ್ಯೆಗೆ ಗುತ್ತಿಗೆದಾರರೇ ಕಾರಣ-ಸಚಿವ ಶಿವಾನಂದ ಪಾಟೀಲ
ವಿಬಿ-ಜಿ ರಾಮ್‌ಜಿ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ