70ನೇ ಕನ್ನಡ ರಾಜ್ಯೋತ್ಸವ: ಆಕರ್ಷಕ ಪಥಸಂಚಲನ

KannadaprabhaNewsNetwork |  
Published : Nov 02, 2025, 02:00 AM IST
3 | Kannada Prabha

ಸಾರಾಂಶ

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಅವರು ರಾಷ್ಟ್ರ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಪೊಲೀಸ್ ಬ್ಯಾಂಡ್‌ ನಿಂದ ರಾಷ್ಟ್ರಗೀತೆ, ಅಮ್ಮ ರಾಮಚಂದ್ರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಜಿಲ್ಲಾಡಳಿತವು ಶನಿವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಪೊಲೀಸ್ ತುಕಡಿಗಳು ಹಾಗೂ ವಿವಿಧ ಶಾಲಾ ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಅವರು ರಾಷ್ಟ್ರ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಪೊಲೀಸ್ ಬ್ಯಾಂಡ್‌ ನಿಂದ ರಾಷ್ಟ್ರಗೀತೆ, ಅಮ್ಮ ರಾಮಚಂದ್ರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.

ತದನಂತರ ತೆರೆದ ಜೀಪಿನಲ್ಲಿ ತೆರಳಿದ ಡಾ.ಎಚ್.ಸಿ. ಮಹದೇವಪ್ಪ ಅವರು ತುಕಡಿಗಳ ಪರಿವೀಕ್ಷಣೆ ಮಾಡಿದರು. ಈ ವೇಳೆ ಡಿಸಿಪಿ ಆರ್.ಎನ್. ಬಿಂದು ಮಣಿ ಇದ್ದರು. ನಂತರ ನಡೆದ ವಿವಿಧ ಪೊಲೀಸ್ ತುಕಡಿಗಳ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು.

ಪ್ರಧಾನ ದಳಪತಿ ಅಶ್ವರೋಹಿ ದಳದ ಸಾಸನೂರು, ಉಪ ಪ್ರಧಾನ ದಳಪತಿ ಸುರೇಶ್ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಅಶ್ವರೋಹಿ ದಳ, ಕೆಎಸ್‌ ಆರ್‌ಪಿ, ಸಿಎಆರ್, ಡಿಎಆರ್, ನಗರ ಸಂಚಾರ ಪೊಲೀಸ್, ಮಹಿಳಾ ಪೊಲೀಸರು, ನಗರ ಪೊಲೀಸ್, ಗೃಹರಕ್ಷಕ ದಳ, ಎನ್ ಸಿಸಿ ಭೂದಳ, ನೌಕ ದಳ, ವಾಯುದಳ, ಪೊಲೀಸ್ ಪಬ್ಲಿಕ್ ಶಾಲೆಯ ಬಾಲಕರು, ಬಾಲಕಿಯರ ತಂಡ, ನವೋದಯ ಶಾಲೆಯ ತಂಡ, ಭಾರತ ಸೇವಾ ದಳದ ಬಾಲಕರು ಮತ್ತು ಬಾಲಯಿಕರ ತಂಡವು ಶಿಸ್ತು ಬದ್ಧವಾಗಿ ಸಾಗಿದರು. ಇವರ ಪಥಸಂಚಲನಕ್ಕೆ ಪೊಲೀಸ್ ಬ್ಯಾಂಡ್‌ ನವರು ಸಂಗೀತ ಸಂಯೋಜನೆಯೊಂದಿಗೆ ಸಾಥ್ ನೀಡಿದರು.

ಪ್ರಧಾನ ದಳಪತಿ ಅಶ್ವರೋಹಿ ದಳದ ಸಾಸನೂರು ಅವರು, ಪಥಸಂಚಲನವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ನಿರ್ವಹಿಸಿದರು.

ಸುತ್ತೂರು ಜೆಎಸ್ಎಸ್ ಶಿಕ್ಷಣ ಸಮುಚ್ಚಯದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ ಸುತ್ತೂರು

ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿತು.

ಬಸವೇಶ್ವರ ಬಾಲಕರ ವಿದ್ಯಾರ್ಥಿನಿಲಯದ ನಿಲಯಪಾಲಕ ಮಹದೇವಪ್ರಸಾದ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತಾಯಿಯಿಂದ ಕಲಿತ ನಮ್ಮ ಕನ್ನಡ ಭಾಷೆಯು ರೋಮ ರೋಮಗಳಲ್ಲಿಯೂ ಮಿಡಿಯುವ ಭಾಷೆಯಾಗಿದೆ. ಮಗುವಿನ ಮೊದಲ ತೊದಲ ನುಡಿಯೆ ಅಮ್ಮ ಎಂದು ಪ್ರಾರಂಭಗೊಂಡು, ಮಾತೃಭಾಷೆಯಾಗಿ ಮನದಲ್ಲಿ ಮಿಡಿಯುತ್ತದೆ. ಅಮ್ಮನ ಮಾತನ್ನು ಕೇಳಲು ಎಷ್ಟು ಮಧುರವಾಗಿರುತ್ತದೆಯೋ, ಕನ್ನಡವು ಅಷ್ಟೇ ಸಿಹಿಯಾಗಿರುತ್ತದೆ. ಕನ್ನಡ ಭಾಷೆಯನ್ನು ಕಲಿಯುವುದು, ಮಾತನಾಡುವುದು, ಬಳಸುವುದು ನಮ್ಮ ಗೌರವ. ಅಳುವ ಮಗುವಿಗೆ ಜಾನಪದ ಜೋಗುಳ ಹಾಡುವ ಮೂಲಕ ನಲಿಸುವ ಶಕ್ತಿ ಕನ್ನಡ ಭಾಷೆಗಿದೆ. ಕನ್ನಡ ಬರೀ ಭಾಷೆಯಲ್ಲ ಅದೊಂದು ಸಾಹಿತ್ಯದ ವೈಭವ ಶೌರ್ಯದ ಸಂಕೇತ. ಕರ್ನಾಟಕ ಎಂದರೆ ಕೇವಲ ಒಂದು ರಾಜ್ಯವಲ್ಲ, ಇದು ಸಂಸ್ಕೃತಿಯ ನಾಡು, ಸಾಹಿತ್ಯದ ನೆಲೆ, ಶೌರ್ಯದತಾಣ. ಕಿತ್ತೂರುರಾಣಿಚೆನ್ನಮ್ಮನ ಪರಾಕ್ರಮದ ವೀರಘೋಷವನ್ನು ನೆನಪಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಮುಖ್ಯೋಪಾಧ್ಯಾಯರಾದ ಜಿ. ಶಿವಮಲ್ಲು. ಎಂ.ಜಿ. ಬಸವಣ್ಣ, ಜಿ.ಎಂ. ಷಡಕ್ಷರಿ, ಜಿ. ಶಿವಸ್ವಾಮಿ ಇದ್ದರು. ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಿ.ಎಸ್. ಜಗದಾಂಬಿಕ ಸ್ವಾಗತಿಸಿದರು. ಎಸ್.ಹೇಮಲತಾ ವಂದಿಸಿದರು, ಬಿ. ವೇದಾವತಿ ನಿರೂಪಿಸಿದರು.ಸಮರ್ಥನಂ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡಪ್ರಭ ವಾರ್ತೆ ಮೈಸೂರು

ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಮೊದಲಿಗೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ನಂತರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ವಿಶೇಷ ವಿದ್ಯಾರ್ಥಿನಿ ನಂದಿನಿ ಮಾತನಾಡಿ, ಪ್ರತಿ ಕನ್ನಡಿಗನ- ಕರುನಾಡಿದ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ. ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಇದೇ ವೇಳೆ ಸಂಸ್ಥೆಯ ವಿಶೇಷ ಮಕ್ಕಳು ನಾಡ ಗೀತೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಹಾಡಿನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಶಿವರಾಜು, ಮಹಾಂತೇಶ್, ಚೈತ್ರಕುಮಾರಿ, ಮುಖ್ಯೋಪಾಧ್ಯಾಯಿನಿ ಭ್ರಮಾರಂಭ, ವಿಶೇಷ ಶಿಕ್ಷಕರಾದ ಪದ್ಮಾ, ಬೃಂದಾಬಾಯಿ, ವಿದ್ಯಾವತಿ, ಮನು, ಮಹಾದೇವ, ಮಂಜುಳಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ