ಇತರ ಭಾಷೆಗಳ ಜೊತೆ ಕನ್ನಡವನ್ನು ಬೆಳೆಸಿ: ಬಿ.ಆರತಿ

KannadaprabhaNewsNetwork |  
Published : Nov 02, 2025, 02:00 AM IST
ಗುಬ್ಬಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ 70 ನೇ ಕನ್ನಡ ರಜೋತ್ಸವ ಧ್ವಜಾರೋಹಣ ವನ್ನು ಶಾಸಕ ಎಸ್ ಆರ್ ಶ್ರೀನಿವಾಸ್ ನೆರವೇರಿಸಿದರು. | Kannada Prabha

ಸಾರಾಂಶ

ಕೇವಲ ರಾಜ್ಯೋತ್ಸವದ ದಿನದಂದು ಕನ್ನಡವನ್ನು ನೆನಪು ಮಾಡಿಕೊಳ್ಳುವುದಲ್ಲದೆ ಪ್ರತಿದಿನ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಹಲವು ಮಹನೀಯರ ಶ್ರಮದಿಂದ ಕರ್ನಾಟಕ ರಾಜ್ಯ ರೂಪಗೊಂಡಿದ್ದು, ಅವರನ್ನು ಸ್ಮರಿಸುವುದು ನಮ್ಮಗಳ ಆದ್ಯ ಕರ್ತವ್ಯ ಎಂದು ತಹಸೀಲ್ದಾರ್ ಬಿ.ಆರತಿ ತಿಳಿಸಿದರು.ಗುಬ್ಬಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ 70ನೇ ಕನ್ನಡ ರಜೋತ್ಸವ ದಿನಾಚರಣೆ ಮಹೋತ್ಸವದಲ್ಲಿ ಮಾತನಾಡಿದರು. ಕೇವಲ ರಾಜ್ಯೋತ್ಸವದ ದಿನದಂದು ಕನ್ನಡವನ್ನು ನೆನಪು ಮಾಡಿಕೊಳ್ಳುವುದಲ್ಲದೆ ಪ್ರತಿದಿನ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ನಾವು ಎಲ್ಲೇ ಇರಲಿ ಕನ್ನಡವನ್ನು ಬಿಟ್ಟುಕೊಡದೆ ಇತರ ಭಾಷೆಗಳ ಜೊತೆ ಕನ್ನಡವನ್ನು ಬೆಳೆಸಬೇಕು ಎಂದರು.ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ.ಎಸ್ ಆರ್. ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು.

ಕನ್ನಡ ಉಪನ್ಯಾಸಕ ಮುರುಳೀಧರ್ ಮಾತನಾಡಿ, ಜನನಿ ಹಾಗೂ ಜನ್ಮಭೂಮಿ ಸ್ವರ್ಗಕ್ಕಿಂತ ದೊಡ್ಡದು ಎಂಬಂತೆ ನಮ್ಮ ಮಾತೃಭಾಷೆ ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು. 1956 ರಂದು ಭಾಷಾವಾರು ವಿಂಗಡಿಸಿ ಮೈಸೂರು ರಾಜ್ಯ ಕನ್ನಡನಾಡು ಆಗಿತ್ತು. 1973ರಲ್ಲಿ ಕರ್ನಾಟಕ ಹೆಸರು ಅಧಿಕೃತ ನಾಮಕರಣ ಮಾಡಲಾಯಿತು. ಎರಡು ಸಾವಿರ ವರ್ಷಗಳ ಇತಿಹಾಸ ಕನ್ನಡ ಭಾಷೆಗಿದೆ. ಕನ್ನಡ ಸಾಹಿತ್ಯ ಎಂಟು ಜ್ಞಾನಪೀಠ ಪ್ರಶಸ್ತಿ ತಂದಿದೆ. ಸರಳ ವಚನ ಸಾಹಿತ್ಯ, ಕೀರ್ತನಾ ಸಾಹಿತ್ಯ ಹೀಗೆ ಕನ್ನಡ ಬೆಳೆಯುತ್ತಿದೆ. ಮುಂದಿನ ಪೀಳಿಗೆ ಕನ್ನಡ ಉಳಿಸಿ ಬೆಳೆಸಬೇಕು ಎಂದರು.ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆ.ಜಿ.ವಿಜಯಲಕ್ಷ್ಮಮ್ಮ, ಕೃಷಿ ಕ್ಷೇತ್ರದಲ್ಲಿ ಶಿವಲಿಂಗಯ್ಯ, ಪರಿಸರ ಕ್ಷೇತ್ರದಲ್ಲಿ ಜೆ ಗೀತಾ, ಕ್ರೀಡಾ ಕ್ಷೇತ್ರದಲ್ಲಿ ಜಿ.ಆರ್.ಸುರೇಶ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಪಿ.ನಾರಾಯಣಗೌಡ, ರಂಗಭೂಮಿ ಕ್ಷೇತ್ರದಲ್ಲಿ ರಂಗಸ್ವಾಮಿ, ಸಾಹಿತ್ಯ ಕ್ಷೇತ್ರದಲ್ಲಿ ಅಂಜನ್ ಕುಮಾರ್ ಪಿ.ಆರ್, ಜನಪದ ಕ್ಷೇತ್ರದಲ್ಲಿ ಗಂಗಣ್ಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸಕೆರೆ ಹೆಚ್.ಎಸ್.ನರಸಿಂಹಮೂರ್ತಿ, ಪೌರ ಕಾರ್ಮಿಕರಾದ ಶಿವಮ್ಮ, ನಾಗರಾಜುಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಆಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತ, ಪ್ರಾಂಶುಪಾಲರಾದ ಡಾ.ಪ್ರಸನ್ನ, ಚಂದ್ರಶೇಖರ್, ತಾಪಂ ಇಒ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳದೇವಿ, ಬಿಇಒ ಎಂಎಸ್ ನಟರಾಜ್, ಕಸಾಪ ಅಧ್ಯಕ್ಷ ಹೆಚ್.ಸಿ.ಯತೀಶ್, ಸಿಪಿಐ ರಾಘವೇಂದ್ರ, ಎಇಇ ಯೋಗೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್ ಸಿ ಗುರುಪ್ರಸಾದ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ಆರ್. ವೆಂಕಟೇಶ್ ಉಪಸ್ಥಿತರಿದ್ದರು1 ಜಿ ಯು ಬಿ 2

ಗುಬ್ಬಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ 70 ನೇ ಕನ್ನಡ ರಜೋತ್ಸವ ಧ್ವಜಾರೋಹಣ ವನ್ನು ಶಾಸಕ ಎಸ್.ಆರ್. ಶ್ರೀನಿವಾಸ್ ನೆರವೇರಿಸಿದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ