ಮೈಸೂರು ವಿಭಾಗದಲ್ಲಿ 70ನೇ ರೈಲ್ವೆ ಸಪ್ತಾಹ: ಪ್ರಶಸ್ತಿ ವಿತರಣೆ

KannadaprabhaNewsNetwork |  
Published : May 11, 2026, 01:15 AM IST
34 | Kannada Prabha

ಸಾರಾಂಶ

ವಿವಿಧ ಉತ್ತಮ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಶೀಲ್ಡ್‌ ಗಳನ್ನು ಪ್ರದಾನಿಸಲಾಯಿತು. ಚಿಕ್ಕಜಾಜೂರು ನಿಲ್ದಾಣವು ಅತ್ಯುತ್ತಮ ನಿರ್ವಹಿತ ಪ್ರಮುಖ ನಿಲ್ದಾಣ ಪ್ರಶಸ್ತಿಯನ್ನು ಪಡೆದರೆ, ಹೊನ್ನವಳ್ಳಿ ರಸ್ತೆ ನಿಲ್ದಾಣವು ಅತ್ಯುತ್ತಮ ನಿರ್ವಹಿತ ಸಣ್ಣ ನಿಲ್ದಾಣ ಪ್ರಶಸ್ತಿಯನ್ನು ಪಡೆದಿತು.

ಕನ್ನಡಪ್ರಭ ವಾರ್ತೆ ಮೈಸೂರು

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು 2025ನೇ ಸಾಲಿನ 70ನೇ ರೈಲ್ವೆ ಸಪ್ತಾಹವನ್ನು ಶನಿವಾರ ನಗರದ ಚಾಮುಂಡಿ ಕ್ಲಬ್‌ ನಲ್ಲಿ ಆಚರಿಸಿತು.

ಈ ಕಾರ್ಯಕ್ರಮವನ್ನು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ರೈಲ್ವೆ ಸೇವಾ ಪುರಸ್ಕಾರ 2025 ಹಾಗೂ ಡಿಆರ್ ಎಂ ಪ್ರಶಂಸಾ ಪ್ರಶಸ್ತಿಗಳನ್ನು ಉದ್ಯೋಗಿಗಳಿಗೆ ನೀಡಿ ಗೌರವಿಸಲಾಯಿತು. ಭಾರತೀಯ ರೈಲ್ವೆಯ ಕಾರ್ಯಕ್ಷಮತೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಸೇವೆ, ಸಮರ್ಪಣೆ ಮತ್ತು ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಯಿತು. ಒಟ್ಟು 22 ಮಂದಿ ರೈಲ್ವೆ ಸೇವಾ ಪುರಸ್ಕಾರವನ್ನು ಪಡೆದರೆ, 55 ಮಂದಿ ಡಿಆರ್ ಎಂ ಪ್ರಶಂಸಾ ಪ್ರಶಸ್ತಿಗೆ ಭಾಜನರಾದರು.

ನಂತರ ಎಸ್ ಡಬ್ಲ್ಯೂಆರ್ ಡಬ್ಲ್ಯೂಡಬ್ಲ್ಯೂಒ/ ಮೈಸೂರು ವಿಭಾಗದ ವತಿಯಿಂದ ಹಿರಿಯ ಹಾಗೂ ನಿವೃತ್ತ ರೈಲ್ವೆ ನೌಕರರನ್ನು ಸನ್ಮಾನಿಸಲಾಯಿತು.

ವಿವಿಧ ಉತ್ತಮ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಶೀಲ್ಡ್‌ ಗಳನ್ನು ಪ್ರದಾನಿಸಲಾಯಿತು. ಚಿಕ್ಕಜಾಜೂರು ನಿಲ್ದಾಣವು ಅತ್ಯುತ್ತಮ ನಿರ್ವಹಿತ ಪ್ರಮುಖ ನಿಲ್ದಾಣ ಪ್ರಶಸ್ತಿಯನ್ನು ಪಡೆದರೆ, ಹೊನ್ನವಳ್ಳಿ ರಸ್ತೆ ನಿಲ್ದಾಣವು ಅತ್ಯುತ್ತಮ ನಿರ್ವಹಿತ ಸಣ್ಣ ನಿಲ್ದಾಣ ಪ್ರಶಸ್ತಿಯನ್ನು ಪಡೆದಿತು. ಶಿವಮೊಗ್ಗ ರೈಲ್ವೆ ಕಾಲೋನಿ ಮತ್ತು ಮೊಳಕಾಲ್ಮೂರು ರೈಲ್ವೆ ಕಾಲೋನಿಗಳು ಕ್ರಮವಾಗಿ ಅತ್ಯುತ್ತಮ ನಿರ್ವಹಿತ ದೊಡ್ಡ ಮತ್ತು ಸಣ್ಣ ಕಾಲೋನಿಗಳಾಗಿ ಗುರುತಿಸಲ್ಪಟ್ಟವು.

ಮೈಸೂರು– ಸಾಯಿನಗರ ಶಿರಡಿ ವಾರಾಂತ್ಯ ಎಕ್ಸ್‌ ಪ್ರೆಸ್ (ರೇಕ್ ಸಂ. 16217/18) ಅತ್ಯುತ್ತಮ ನಿರ್ವಹಿತ ರೇಕ್ ಪ್ರಶಸ್ತಿಯನ್ನು ಪಡೆದರೆ, ಸುಬ್ರಹ್ಮಣ್ಯ ರಸ್ತೆ ರನ್ನಿಂಗ್ ರೂಮ್ ಅತ್ಯುತ್ತಮ ನಿರ್ವಹಿತ ರನ್ನಿಂಗ್ ರೂಮ್ ಪ್ರಶಸ್ತಿಗೆ ಪಾತ್ರವಾಯಿತು. ಚಿತ್ರದುರ್ಗವು ಅತ್ಯುತ್ತಮ ನಿರ್ವಹಿತ ಟ್ರಾಕ್ಷನ್ ಸಬ್ ಸ್ಟೇಷನ್ ಹಾಗೂ ಎಸ್ಎಸ್ಇ/ ಸಿಗ್ನಲ್ ವಿಭಾಗ ಪ್ರಶಸ್ತಿಗಳನ್ನು ಪಡೆದಿತು. ಹಾಸನ ವಿಭಾಗ ಎಸ್ಎಸ್ಇ/ ಟೆಲಿಕಾಂ ಪ್ರಶಸ್ತಿಯನ್ನು ಪಡೆದರೆ, ಸಕಲೇಶಪುರ ಅತ್ಯುತ್ತಮ ಅಪಘಾತ ಪರಿಹಾರ ರೈಲು ಪ್ರಶಸ್ತಿಯನ್ನು ಪಡೆದಿತು.

ಟ್ರಾಕ್ಷನ್ ಆಪರೇಷನ್ಸ್ ವಿಭಾಗಕ್ಕೆ ನವೀನತಾ ಶೀಲ್ಡ್ ನೀಡಲಾಯಿತು. ಮೈಸೂರು ಯಾಂತ್ರಿಕ ವಿಭಾಗದ ಕಚೇರಿಗೆ ಅತ್ಯುತ್ತಮ ನಿರ್ವಹಿತ ಕಚೇರಿ ಪ್ರಶಸ್ತಿ ನೀಡಲಾಯಿತು. ಎಸ್ಎಸ್ಇ/ ಪಿ.ವೇ/ ಕೃಷ್ಣರಾಜನಗರ ವಿಭಾಗಕ್ಕೆ ಅತ್ಯುತ್ತಮ ಪಿ.ವೇ ವಿಭಾಗ ಪ್ರಶಸ್ತಿ ನೀಡಲಾಯಿತು. ಕೋಚ್ ಮತ್ತು ವ್ಯಾಗನ್ ರೈಲ್ ಮದಾದ್ ವಾರ ರೂಮ್ ಅತ್ಯುತ್ತಮ ವಿಭಾಗೀಯ ನಿಯಂತ್ರಣವಾಗಿ ಗುರುತಿಸಲಾಯಿತು.

ಮೈಸೂರು ಲಲಿತಾ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭಕ್ಕೆ ರಂಗು ಮತ್ತು ಚೈತನ್ಯ ತುಂಬಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾ ಹಮೀದ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಃಖದ ಮಡುವಿನಲ್ಲಿ ಮುಳುಗಿದ ಹಿರಿಯೂರು
ಸುಧಾಕರ್ ಅಂತಿಮ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ