ಯುವಕರಿಗೆ ಕೃಷಿಯಲ್ಲಿ ತೊಡಗುವಂತೆ ಪ್ರೆರೇಪಿಸಿ

KannadaprabhaNewsNetwork |  
Published : May 17, 2026, 01:15 AM IST
56 | Kannada Prabha

ಸಾರಾಂಶ

ರೈತರ ನಡುವೆ ನೇರ ಸಂಪರ್ಕವನ್ನು ಇಟ್ಟುಕೊಂಡು ರೈತರ ಜಮೀನುಗಳಿಗೆ ಖುದ್ದಾಗಿ ತೆರಳಿ ಬಾಳೆ ಬೆಳೆ ಸೇರಿದಂತೆ ಹಲವರು ಬೆಳೆಗಳ ರೋಗ ತಡೆಗಟ್ಟಲು ಸಲಹೆ

ಕನ್ನಡಪ್ರಭ ವಾರ್ತೆ ನಂಜನಗೂಡು ತೋಟಗಾರಿಕಾ ಅಧಿಕಾರಿಗಳು ಕಚೇರಿ ಬಿಟ್ಟು ರೈತರ ಜಮೀನುಗಳಿಗೆ ತೆರಳಿ ರೈತರಿಗೆ ಸಲಹೆ ನೀಡಿ ಅವರ ಕೃಷಿ ಕಾರ್ಯಕ್ಕೆ ನೆರವು ನೀಡುವ ಜೊತೆಗೆ ಹೊಸ ಯುವಕರಿಗೆ ಪ್ರೋತ್ಸಾಹ ನೀಡಿ ಕೃಷಿ ಕಾಯಕದಲ್ಲಿ ತೊಡಗುವಂತೆ ಪ್ರೇರೇಪಿಸಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು. ಪಟ್ಟಣದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ 71 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತೋಟಗಾರಿಕಾ ಇಲಾಖೆಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ದೂರವಾಣಿಗೂ ಸಿಗುವುದಿಲ್ಲ ಎಂಬ ಆರೋಪವಿದೆ, ಶಾಸಕರಾಗಿ ನಾವೇ ಎಲ್ಲ ಕರೆಗಳಿಗೂ ಸ್ಪಂದಿಸುತ್ತೇವೆ, ಆದರೆ ಅಧಿಕಾರಿಗಳಿಗೆ ಏನಾಗಿದೆ? ರೈತರ ನಡುವೆ ನೇರ ಸಂಪರ್ಕವನ್ನು ಇಟ್ಟುಕೊಂಡು ರೈತರ ಜಮೀನುಗಳಿಗೆ ಖುದ್ದಾಗಿ ತೆರಳಿ ಬಾಳೆ ಬೆಳೆ ಸೇರಿದಂತೆ ಹಲವರು ಬೆಳೆಗಳ ರೋಗ ತಡೆಗಟ್ಟಲು ಸಲಹೆ ನೀಡಿ ರೈತರಿಗೆ ಆಗುವ ಬೆಳೆ ಹಾನಿ ಅನಾಹುತವನ್ನು ತಪ್ಪಿಸಬೇಕು, ಮುಖ್ಯವಾಗಿ ಬೆಳೆ ಹಾನಿಗೆ ಶೀಘ್ರವಾಗಿ ಸೂಕ್ತ ಪರಿಹಾರ ವಿತರಿಸಿ ರೈತರಿಗೆ ನೆರವು ನೀಡಬೇಕು, ಅಲ್ಲದೆ ಹೊಸ ಯುವಕರಿಗೆ ಕೃಷಿ ಕಾರ್ಯ ಕೈಗೊಳ್ಳಲು ಹೆಚ್ಚಿನ ಪ್ರೋತ್ಸಾಹ ನೀಡಿ ಅವರನ್ನು ಕೃಷಿ ಕಾರ್ಯದತ್ತ ಸೆಳೆಯಬೇಕು ಎಂದರು.ನಂಜನಗೂಡು ರಸ ಬಾಳೆ ಸಂಶೋಧನಾ ಕೇಂದ್ರ ಸ್ಥಾಪಿಸಲು ಕ್ರಮ. ನಂಜನಗೂಡು ರಸಬಾಳೆಗೆ ಭೌಗೋಳಿಕ ಸೂಚಕದಲ್ಲಿ ಸ್ಥಾನ ಪಡೆದಿರುವದರಿಂದ, ದೇಶ ವಿದೇಶಗಳಿಗೆ ರಫ್ತಾಗುತ್ತಿದೆ, ಕಳೆದ ಕೆಲದಿನಗಳಲ್ಲಿ 50 ಎಕರೆ ಪ್ರದೇಶದಲ್ಲಿ ಮಾತ್ರ ರಸಬಾಳೆ ಬೆಳೆಯುತ್ತಿದ್ದರು, ಪ್ರಸ್ತುತ 150 ಎಕರೆಗೆ ವಿಸ್ತರಣೆಗೊಂಡಿದೆ, ನಂಜನಗೂಡು ರಸ ಬಾಳಿಗೆ ಬರುವ ಗಂಟು ರೋಗದ ಬಗ್ಗೆ ಸಂಶೋಧನೆಗಳು ನಡೆಯಬೇಕು, ಈ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಸದುದ್ದೇಶದಿಂದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ನಂಜನಗೂಡಿನಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು. ಕಳಪೆ ಕಾಮಗಾರಿಯ ಬಗ್ಗೆ ಆಕ್ರೋಶ- ಕೆಆರ್ ಐಡಿಎಲ್ ಸಂಸ್ಥೆ ವತಿಯಿಂದ ನಿರ್ವಹಿಸಿರುವ ತೋಟಗಾರಿಕಾ ಕಚೇರಿಯ ಕಟ್ಟಡ ಕಳಪೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಶೌಚಾಲಯದಲ್ಲಿ ಅಳವಡಿಸಿರುವ ಪರಿಕರಗಳನ್ನು ಬದಲಾಯಿಸಿ ಗುಣಮಟ್ಟದ ಪರಿಕರಗಳನ್ನು ಅಳವಡಿಸಬೇಕು ಸೂಚನೆ ನೀಡಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಹಾಯಧನ ವಿತರಿಸುವುದಿಲ್ಲ, ರೈತರ ಜಿಮಿನಿಗಳಿಗೆ ತೆರಳಿ ಸಲಹೆ ನೀಡುತ್ತಿಲ್ಲ ಮತ್ತು ಸವಲತ್ತು ವಿತರಣೆಯಲ್ಲೂ ಸಹ ತಮಗೆ ಬೇಕಾದವರಿಗೆ ವಿತರಿಸುತ್ತಿದ್ದಾರೆ ಎಂಬ ಬಗ್ಗೆ ವ್ಯಾಪಕ ದೂರ ಕೇಳಿ ಬಂದಿದೆ, ಆದ್ದರಿಂದ ಸೂಚನಾ ಫಲಕದಲ್ಲಿ ಸವಲತ್ತುಗಳ ವಿತರಣೆ ಮತ್ತು ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು ಜೊತೆಗೆ ರೈತರಿಗೆ ಸವಲತ್ತು ವಿತರಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ತಾಲೂಕಿನ ಮುಳ್ಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿ ಕಳೆದ 20 ವರ್ಷಗಳಿಂದ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿತ್ತು, ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿ ಗ್ರಾಮದ ಮುಖ್ಯರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ರಸ್ತೆಯ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಶಾಸಕ ದರ್ಶನ್ನಾ ಧ್ರುವರಾಯಣ್ 2.45 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು.ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಮಾಜಿ ಸದಸ್ಯರಾದ ಗಾಯತ್ರಿ ರವಿ, ಸೌಭಾಗ್ಯ, ಯೋಗೀಶ್, ಹಳ್ಳದಕೇರಿ ಗೋವಿಂದರಾಜು, ಸ್ವಾಮಿ, ಶ್ರೀನಿವಾಸಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳು ನಾಯಕತ್ವ ಗುಣ ಬೆಳೆಸುತ್ತದೆ
ರೈತರಲ್ಲಿ ಸಂತಸ ತಂದ ಬೀನ್ಸ್, ಸೌತೆಕಾಯಿ