ರಂಗೂಪುರ ಶಿವಕುಮಾರ್
೨೦೨೪ರ ಅವಧಿಯಲ್ಲಿ ತಾಲೂಕಿನಲ್ಲಿ ೨೦೨ ರಸ್ತೆ ಅಪಘಾತದ ಪ್ರಕರಣದಲ್ಲಿ ೭೪ ಮಂದಿ ಸಾವನ್ನಪ್ಪಿದ್ದು, ೧೨೦ಕ್ಕೂ ಹೆಚ್ಚು ಮಂದಿಗೆ ವಿವಿಧ ರೀತಿಯ ಗಾಯಾಳುಗಳಾಗಿದ್ದಾರೆ.
ತಾಲೂಕಿನ ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತಗಳು ನಡೆದಿವೆ. ಅಂಥ ಬೀಕರ ಅಪಘಾತಗಳು ನಡೆದಿಲ್ಲ. ಕೇವಲ ೨ ಅಥವಾ ೩ ಮಂದಿ ಒಂದೆರಡು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಲೂಕಿನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇದ್ದರೂ ಸಾವಿನ ಸಂಖ್ಯೆ ಹೆಚ್ಚಿವೆ ಇದು ಅಘಾತಕಾರಿ ವಿಷಯವಾಗಿದೆ.೧೩ ಲಕ್ಷಕ್ಕೂ ಹೆಚ್ಚು ದಂಡ:
ಗುಂಡ್ಲುಪೇಟೆ, ಬೇಗೂರು ಠಾಣಾ ವ್ಯಾಪ್ತಿಯ ಮೈಸೂರು-ಊಟಿ ಹಾಗೂ ಗುಂಡ್ಲುಪೇಟೆ-ಕೇರಳ ಹೆದ್ದಾರಿ ನಾಲ್ಕು ಪಥದ ರಸ್ತೆಯಾಗುವ ತನಕ ಅಪಘಾತಗಳ ಸಂಖ್ಯೆ ಇಳಿಮುಖವಾಗುವುದಿಲ್ಲ. ನಂಜನಗೂಡು-ಗುಂಡ್ಲುಪೇಟೆ ಮಾರ್ಗ ಮೇಲುಕಾಮನಹಳ್ಳಿ ಹಾಗೂ ಮದ್ದೂರು ತನಕ ನಾಲ್ಕು ಪಥ ರಸ್ತೆಯಾದರೆ ಜನರ ಸಾವು-ನೋವುಗಳು ತಪ್ಪಲಿದೆ.
ʼವಾಹನ ಮಾಲೀಕರು ಹಾಗೂ ಚಾಲಕರು ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರೂ ನಿಯಮ ಪಾಲಿಸುತ್ತಿಲ್ಲ. ಮೈಸೂರು-ಊಟಿ, ಕೇರಳ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಳವಾಗಿದೆ. ರಸ್ತೆ ಅಗಲೀಕರಣವಾಗಬೇಕು. ಟ್ರಾಫಿಕ್ ಹೆಚ್ಚಳದ ಸಮಯದಲ್ಲಿ ಬೈಕ್ ಸವಾರರ ಪ್ರಾಣ ಹೋಗುತ್ತಿದೆ. ಆ ಸಮಯದಲ್ಲಿ ಎಚ್ಚರವಹಿಸಬೇಕು.
ಪೊಲೀಸರು ಸಂಚಾರ ನಿಯಮ ಉಲ್ಲಂಘನೆಗಳ ಬಗ್ಗೆ ದಂಡ ಹಾಕುತ್ತಾರೆ. ದಂಡ ಹಾಕುವ ಜೊತೆಗೆ ಹೆದ್ದಾರಿಯಲ್ಲಿನ ಸಿಎಲ್ ೭ ಹೆಸರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಬೇಗೂರಿಂದ ಹಿರೀಕಾಟಿ ಗಡಿ ತನಕ ಕ್ರಷರ್‌ನ ಸಂಪರ್ಕ ರಸ್ತೆ ಹಾಗೂ ಟಿಪ್ಪರ್ ಹೊದಿಕೆ ಇಲ್ಲದೆ ಬರುವ ಧೂಳು ನಿಲ್ಲಿಸಬೇಕು. ಈ ಕೆಲಸ ಮಾಡಿದರೆ ಅಪಘಾತ ಕಡಿಮೆಯಾಗಲಿದೆ.ರಾಜು,ಬೈಕ್ ಸವಾರ,ಗುಂಡ್ಲುಪೇಟೆಸವಾರಿಗೆ ಕನ್ನಡಪ್ರಭ ಕೆಲ ಟಿಪ್ಸ್
ಸಮಯಪ್ರಜ್ಞೆ, ನಿಯಮ ಪಾಲನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಆಗಾಗ್ಗೆ ಪೊಲೀಸರು ನಡೆಸುತ್ತಿದ್ದರೂ ಅಪಘಾತಗಳು ನಡೆಯುತ್ತಲೇ ಇವೆ. ಜನರಿಗೆ ಪೊಲೀಸರು ಮತ್ತಷ್ಟು ಜಾಗೃತಿ ಮೂಡಿಸಬೇಕು.