ಹೊಸಹಳ್ಳಿ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆ

KannadaprabhaNewsNetwork |  
Published : Mar 12, 2026, 12:15 AM IST
58 | Kannada Prabha

ಸಾರಾಂಶ

ಸಾಲಗಾರರಲ್ಲದ ಕ್ಷೇತ್ರದಿಂದ ಎ.ಎಂ. ಜಯಣ್ಣ- ಜೆಡಿಎಸ್, ಸಾಲಗಾರರ ಕ್ಷೇತ್ರದಿಂದ ತಿರ್ಥೇಶ್

ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕಿನ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿ ನಿರ್ದೇರ್ಶಕರ ಸ್ಥಾನಕ್ಕೆ ಚುನಾವಣೆಯಲ್ಲಿ 8 ಮಂದಿ ಕಾಂಗ್ರೆಸ್ ಬೆಂಬಲಿತರು ಮತ್ತು 4 ಮಂದಿ ಜೆಡಿಎಸ್ ಬೆಂಬಲಿತ ನಿರ್ದೇರ್ಶಕರು ಚುನಾಯಿತರಾಗಿದ್ದಾರೆ. ಸಾಲಗಾರರ ಕ್ಷೇತ್ರದಿಂದ ವೆಂಕಟೇಗೌಡ, ಹೊಸಹಳ್ಳಿ ರಮೇಶ್, ರಮೇಶ್, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸುರೇಶ್, ಹಿಂದುಳಿದ ವರ್ಗ ಬಿ. ಕ್ಷೇತ್ರದಿಂದ ವಿಜಯಕುಮಾರ್, ಪ. ಪಂಗಡ ಮೀಸಲು ಕ್ಷೇತ್ರದಿಂದ ರಾಜನಾಯಕ, ಪ.ಜಾತಿ ಮೀಸಲು ಕ್ಷೇತ್ರದಿಂದ ಲಕ್ಷ್ಮಣ್, ಮಹಿಳಾ ಮೀಸಲು ಕ್ಷೇತ್ರದಿಂದ ಮಂಜುಳ ಚುನಾಯಿತರಾಗಿದ್ದಾರೆ.ಸಾಲಗಾರರಲ್ಲದ ಕ್ಷೇತ್ರದಿಂದ ಎ.ಎಂ. ಜಯಣ್ಣ- ಜೆಡಿಎಸ್, ಸಾಲಗಾರರ ಕ್ಷೇತ್ರದಿಂದ ತಿರ್ಥೇಶ್ - ಜೆಡಿಎಸ್, ಎಲ್.ಎಸ್. ಮಹೇಶ್ - ಜೆಡಿಎಸ್, ಮಹಿಳಾ ಮೀಸಲು ಕ್ಷೇತ್ರದಿಂದ ಹೇಮಲತಾ - ಜೆಡಿಎಸ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಎಸ್.ರವಿ, ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಎಂ.ಜಿ.ಸಂತೋಷ್ ಕರ್ತವ್ಯ ನಿರ್ವಹಿಸಿದ್ದರು. ನೂತನ ನಿರ್ದೇರ್ಶಕರನ್ನು ಕಾಂಗ್ರೆಸ್ ಜಿಪಂ ಮಾಜಿ ಸದಸ್ಯ ಶಿವರಾಂ, ಎಪಿಎಂಸಿ ಮಾಜಿ ನಿರ್ದೇರ್ಶಕ ಎಲ್.ಪಿ. ರವಿಕುಮಾರ್, ಡೋರ್ನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ. ಗಿರೀಶ್, ಚಂದ್ರೇಗೌಡ, ಮುಖಂಡರಾದ ಬಲರಾಮೇಗೌಡ, ರೇವಣ್ಣ, ಜಗದೀಶ್, ಎಂ.ಸಿ. ರವಿ, ಕೆ.ಎಂ. ಹರೀಶ್, ಉಮೇಶ್, ವಸಂತೇಗೌಡ, ಶಿವರಾಜು, ಎಂಸಿಡಿಸಿಸಿ ಬ್ಯಾಂಕ್ ಜಿಲ್ಲಾ ಪ್ರತಿನಿಧಿ ಎನ್. ದಿನೇಶ್ ಮತ್ತಿತರರು ಅಭಿನಂದಿಸಿದರು.ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡರ ನಿವಾಸಕ್ಕೆ ತೆರಳಿದ್ದ ನೂತನ ನಿರ್ದೇರ್ಶಕರು ಚುನಾವಣೆಯಲ್ಲಿ ಗೆಲ್ಲಲು ಸಹಕಾರ ನೀಡಿದದ್ದಕ್ಕಾಗಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನ ಸಂಕಷ್ಟ ದೂರ ಮಾಡುವ ಶಕ್ತಿ ಶಿವನಾಮಸ್ಮರಣೆಯಲ್ಲಿದೆ
ಗಾಡಿ ಓಟದ ಸ್ಪರ್ಧೆ: ಮಾರುತಿ ಆರಂಜ್ಯೋತಿ ತಂಡ ಪ್ರಥಮ