ಅರೇಹಳ್ಳಿ ಆರೋಗ್ಯಕೇಂದ್ರದಲ್ಲಿ 24 ಗಂಟೆಯಲ್ಲಿ 8 ಹೆರಿಗೆ

KannadaprabhaNewsNetwork |  
Published : Dec 12, 2024, 12:32 AM IST
10ಎಚ್ಎಸ್ಎನ್14 : ಬೇಲೂರು ತಾಲೂಕು    ಅರೇಹಳ್ಳಿ   ಸಿ.ಎಚ್.ಸಿ ಯಲ್ಲಿ  24 ಘಂಟೆಯಲ್ಲಿ 8 ಹೆರಿಗೆ ಮಾಡಿಸಿದ‌  ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಮತಾರವರ ಕಾರ್ಯಕ್ಷಮತೆ ಬಗ್ಗೆ    ಸಾರ್ವಜನಿಕರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. | Kannada Prabha

ಸಾರಾಂಶ

ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯಲ್ಲಿ 8 ಹೆರಿಗೆ ಮಾಡಿಸಿದ‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಮತಾರವರ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾರವರು ಒಂದೇ ದಿನದಲ್ಲಿ 4 ಸಾಮಾನ್ಯ, 3 ಹೆಚ್ಚಿನ ಹಾನಿ ಸಂಭವ ಹಾಗೂ ಒಂದು ಶಸ್ತ್ರಚಿಕಿತ್ಸೆ ಮೂಲಕ ಒಟ್ಟಾರೆಯಾಗಿ 8 ಹೆರಿಗೆಯನ್ನು ಮಾಡಿದ್ದು ಸಾರ್ವಜನಿಕ ವಲಯದಲ್ಲಿ ವೈದ್ಯೆಯ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯಲ್ಲಿ 8 ಹೆರಿಗೆ ಮಾಡಿಸಿದ‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಮತಾರವರ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾರವರು ಒಂದೇ ದಿನದಲ್ಲಿ 4 ಸಾಮಾನ್ಯ, 3 ಹೆಚ್ಚಿನ ಹಾನಿ ಸಂಭವ ಹಾಗೂ ಒಂದು ಶಸ್ತ್ರಚಿಕಿತ್ಸೆ ಮೂಲಕ ಒಟ್ಟಾರೆಯಾಗಿ 8 ಹೆರಿಗೆಯನ್ನು ಮಾಡಿದ್ದು ಸಾರ್ವಜನಿಕ ವಲಯದಲ್ಲಿ ವೈದ್ಯೆಯ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಅರೇಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ.ಮಮತಾರವರು ಕಳೆದ ಏಳೆಂಟು ವರ್ಷಗಳಲ್ಲಿ ಸರಿ ಸುಮಾರು 4300 ಆರೋಗ್ಯದಾಯಕ ಹೆರಿಗೆಯನ್ನು ಮಾಡುವ ಮೂಲಕ ಎಲ್ಲಾ ಗರ್ಭಿಣಿ, ಬಾಣಂತಿ ಹಾಗೂ ಸಾರ್ವಜನಿಕರ ಮನೆ ಮಾತಾಗಿದ್ದಾರೆ. ಇದೀಗ ದಿನದ 24 ಗಂಟೆಯಲ್ಲಿ ತನ್ನ ಅತ್ಯಮೂಲ್ಯ ನಿದ್ರೆಯನ್ನು ತ್ಯಜಿಸಿ 8 ಹೆರಿಗೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈ ವೇಳೆ ತನ್ನ ಪತ್ನಿಯ ಹೆರಿಗೆಗಾಗಿ ಬಂದಿದ್ದ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆ ಗ್ರಾಮದ ರವೀಂದ್ರ ಮಾತನಾಡಿ, ಈ ಮೊದಲು ತಾಲೂಕಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸುತ್ತಿದ್ದು ನಂತರ ನೆಂಟರೊಬ್ಬರ ಸಲಹೆಯಂತೆ ಉತ್ತಮ ಆರೋಗ್ಯದಾಯಕ ಹೆರಿಗೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಹೋಗುವ ಬದಲಾಗಿ ಇಲ್ಲಿಗೆ ಬಂದು ತಪಾಸಣೆ ನಡೆಸಿ ಹೆರಿಗೆಗಾಗಿ ದಾಖಲು ಮಾಡಲಾಯಿತು. ಇಲ್ಲಿ ದೊರಕುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿರುವುದರ ಜೊತೆಗೆ ಇಲ್ಲಿನ ವೈದ್ಯಾಧಿಕಾರಿ ಹಾಗು ಸಿಬ್ಬಂದಿಯ ಕಾರ್ಯವೈಖರಿ ಅತ್ಯುತ್ತಮವಾಗಿದೆ, ಹೋಬಳಿ ಮಟ್ಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹ ಸೌಲಭ್ಯಗಳು ಸಿಗುವುದು ಬಹಳ ಅಪರೂಪ, ಇಂತಹ ಆಸ್ಪತ್ರೆ ಹಾಗೂ ಸಿಬ್ಬಂದಿಯ ಕಾರ್ಯಚಟುವಟಿಕೆ ಉತ್ತಮವಾಗಿರುವುದನ್ನು ನಾನು ಹೋಬಳಿ ಮಟ್ಟದಲ್ಲಿ ಎಲ್ಲಿಯೂ ನೋಡಿಲ್ಲ,

ಸರ್ಕಾರಿ ಆಸ್ಪತ್ರೆಗಳಲ್ಲಿ ತಮ್ಮ ದಿನದ ಸೇವೆ ಅವಧಿ ಮುಗಿದ ಬಳಿಕವೂ ತುರ್ತು ಪರಿಸ್ಥಿಯ ನಡುರಾತ್ರಿಯಲ್ಲಿ ಕರೆದರೂ ಬಂದು ಸ್ಪಂದಿಸುವ ಇಂಥಹ ವೈದ್ಯಾಧಿಕಾರಿಗಳು ಇರುವುದು ನಮ್ಮ ಹೆಮ್ಮೆ, ಇದೇ ರೀತಿ ಅವರ ವೈದ್ಯಸೇವೆ ಎಲ್ಲರಿಗೂ ದೊರಕುತ್ತಾ ನಿವೃತ್ತಿ ಹೊಂದುವವರೆಗೂ ಅವರ ವೈದ್ಯ ಸೇವೆ ಇಲ್ಲಿಯೇ ಇರಲಿ ಎಂದು ಬಯಸುತ್ತೇನೆ. ಅದೇ ರೀತಿ ಮುಂದಿನ ದಿನಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರಕುವ ಹೆಚ್ಚಿನ ಸೌಲಭ್ಯಗಳು ಸಹ ಇಲ್ಲಿಯೇ ದೊರಕುವಂತಾಗಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌