ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಂತ್ರಿಮಂಡಲ ಸೇರಿದ ನೂತನ ಸಚಿವರು ಇದೀಗ ಕಾರ್ಯಾರಂಭ ಮಾಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲೆಗಳಿಗೆ ತೆರಳಿ ಬರ ಅಧ್ಯಯನ ಆರಂಭಿಸಿದ್ದಾರೆ.

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಂತ್ರಿಮಂಡಲ ಸೇರಿದ ನೂತನ ಸಚಿವರು ಇದೀಗ ಕಾರ್ಯಾರಂಭ ಮಾಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲೆಗಳಿಗೆ ತೆರಳಿ ಬರ ಅಧ್ಯಯನ ಆರಂಭಿಸಿದ್ದಾರೆ.

ಬರ ಪರಿಶೀಲನೆ

ಸಚಿವ ವಿಜಯಾನಂದ ಕಾಶಪ್ಪನವರ ಅವರು ಬಾಗಲಕೋಟೆ, ಹಾಸನದಲ್ಲಿ ಕೆ.ಎಂ.ಶಿವಲಿಂಗೇಗೌಡ, ಭೈರತಿ ಸುರೇಶ್ ಚಿಕ್ಕಬಳ್ಳಾಪುರದಲ್ಲಿ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸಂತೋಷ ಲಾಡ್, ಟಿ.ರಘುಮೂರ್ತಿ ಚಿತ್ರದುರ್ಗದಲ್ಲಿ, ಸಚಿವ ಶಿವರಾಜ ತಂಗಡಗಿಯವರು ಕೊಪ್ಪಳದಲ್ಲಿ ಬರ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಸಚಿವರಿಗೆ ಸಾಥ್

ಈ ವೇಳೆ, ಜಿಲ್ಲಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.