ನಿಗಮ ಮತ್ತು ಮಂಡಳಿಗಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡು 2 ವರ್ಷ ಅವಧಿ ಪೂರೈಸಿರುವ ಎಲ್ಲಾ ಸದಸ್ಯ/ನಿರ್ದೇಶಕರನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಮುಖ್ಯಮಂತ್ರಿಯವರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ರವಾನೆಯಾಗಿದೆ.
ಬೆಂಗಳೂರು : ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಹೊರತುಪಡಿಸಿ ಉಳಿದೆಲ್ಲ ನಿಗಮ ಮತ್ತು ಮಂಡಳಿಗಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡು 2 ವರ್ಷ ಅವಧಿ ಪೂರೈಸಿರುವ ಎಲ್ಲಾ ಸದಸ್ಯ/ನಿರ್ದೇಶಕರನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಮುಖ್ಯಮಂತ್ರಿಯವರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ರವಾನೆಯಾಗಿದೆ.
2 ವರ್ಷ ಅವಧಿ ಪೂರೈಸಿರುವರ ಪದಮುಕ್ತ
ಈ ಸಂಬಂಧ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಟಿಪ್ಪಣಿ ರವಾನಿಸಿರುವ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು, ನಿಗಮ-ಮಂಡಳಿಗಳಿಗೆ ನಾಮನಿರ್ದೇಶನಗೊಂಡು 2 ವರ್ಷ ಅವಧಿ ಪೂರೈಸಿರುವ ಎಲ್ಲ ಸದಸ್ಯ/ನಿರ್ದೇಶಕರನ್ನು ಕೂಡಲೇ ಪದಮುಕ್ತಗೊಳಿಸಬೇಕು.
ಜತೆಗೆ ಈಗಾಗಲೇ ಮುಖ್ಯಮಂತ್ರಿ ಅವರು ಅನುಮೋದಿಸಿರುವ ನೂತನ ಸದಸ್ಯರು/ನಿರ್ದೇಶಕರನ್ನು ಆಯಾ ನಿಗಮ/ಮಂಡಳಿಗಳಿಗೆ ನೇಮಕಾತಿ ಮಾಡಿದ ವಿವರಗಳನ್ನು ತಕ್ಷಣ ಮುಖ್ಯಮಂತ್ರಿಯವರ ಅವಗಾಹನೆಗೆ ಸಲ್ಲಿಸುವಂತೆ ಸಂಬಂಧಿಸಿದ ಎಲ್ಲಾ ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆಯೂ ಕೋರಿದ್ದಾರೆ.
ಇತ್ತೀಚೆಗೆ ನಿಗಮ ಮಂಡಳಿಗಳಿಗೆ ಹೊಸ ಸದಸ್ಯರ ನೇಮಿಸಿದ್ದ ಸರ್ಕಾರ
ಅದರ ಬೆನ್ನಲ್ಲೇ 2 ವರ್ಷ ಅಧಿಕಾರ ಪೂರೈಸಿದವರ ಕೈಬಿಡಲು ಸೂಚನೆ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಕಚೇರಿಯಿಂದ ಸುತ್ತೋಲೆ
ಈ ಮೂಲಕ ಹೊಸ ಸದಸ್ಯರ ಅಧಿಕಾರಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ
ಸಿಎಂ ಸೂಚಿಸಿದವರ ನೇಮಿಸುವಂತೆ ಸುತ್ತೋಲೆಯಲ್ಲಿ ಸಿಎಸ್‌ಗೆ ಮಾಹಿತಿ
