ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ರಾಷ್ಟ್ರ ಮಟ್ಟದ 67ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ರಾಜ್ಯ ಪೊಲೀಸ್ ಅಧಿಕಾರಿಗಳು-ಸಿಬ್ಬಂದಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮೂರು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಸೇರಿದಂತೆ ಟ್ರೋಫಿಗಳನ್ನು ಗೆದ್ದಿದ್ದಾರೆ.
ಪಿಎಸ್‌ಐ ಎಂ.ಆರ್.ಹರೀಶ್- ಫೊರಾನ್ಸಿಕ್ ರಿಟನ್ ಟೆಸ್ಟ್-ಚಿನ್ನ, ಕಾನ್ಸ್‌ಟೇಬಲ್ ಎಸ್.ಆರ್.ವಿನೋದ್‌ರಾಜ್- ಅಬ್ಸರ್ವೆಷನ್ ಟೆಸ್ಟ್-ಚಿನ್ನ, ಹೆಡ್‌ಕಾನ್ಸ್‌ಟೇಬಲ್ ಜಿ.ವಿ.ವೆಂಕಟೇಶಪ್ಪ- ಆ್ಯಂಟಿ ಸಾಬೋಟೇಜ್ ವೆಹಿಕಲ್ ಸರ್ಚ್-ಚಿನ್ನ, ಪಿಎಸ್‌ಐ ಪ್ರಕಾಶ್ ದಂಬಾಳ್- ಹ್ಯಾಡ್ಲಿಂಗ್, ಲಿಫ್ಟಿಂಗ್ ಆ್ಯಂಡ್ ಪ್ಯಾಕಿಂಗ್-ಬೆಳ್ಳಿ
ಎಪಿಸಿ ತುಕಾರಾಮ್ ಜಮಾದಾರ್ - ಎಕ್ಸ್‌ಪ್ಲೋಸೀವ್ ಡೆಟೆಕ್ಷನ್ (ಡಾಗ್)-ಬೆಳ್ಳಿ, ಎಪಿಸಿ ರಂಗಪ್ಪ ಉಪ್ಪಾರ್- ಟ್ರಾಕರ್(ಡಾಗ್) -ಕಂಚು, ಎಆರ್‌ಎಸ್‌ಐ ಬಿ.ಗಿರೀಶ್- ಪೊಲೀಸ್ ಫೋಟೋಗ್ರಫಿ- ಕಂಚು ಹಾಗೂ ಎಎಸ್‌ಐ ಎನ್.ಶ್ರೀನಾಥ್- ಪೊಲೀಸ್ ವಿಡಿಯೋಗ್ರಫಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಟ್ರೋಫಿ ವಿಜೇತರು: ಎಆರ್‌ಎಸ್ಐ ಬಿ.ಕೆ.ಅಜ್ಜಯ್ಯ- ಪೊಲೀಸ್ ವಿಡಿಯೋಗ್ರಫಿ ವಿನ್ನರ್ ಟ್ರೋಫಿ, ಎಎಚ್‌ಸಿ ಡ್ಯಾನಿಯಲ್ ಡಿಸೋಜಾ- ಪೊಲೀಸ್ ಫೊಟೋಗ್ರಫಿ- ರನ್ನರ್ ಟ್ರೋಫಿ, ಎಪಿಸಿ ಆನಂದ ನಾಯಕ್- ಎಕ್ಸ್‌ಪ್ಲೋಸೀವ್ ಡಾಗ್ ಸ್ಕ್ವಾಡ್ ರನ್ನರ್ ಟ್ರೋಫಿ, ಎಪಿಸಿ ಪ್ರವೀಣ್ ಮೇತ್ರಿ- ಟ್ರಾಕಿಂಗ್ ಡಾಗ್ ಸ್ಕ್ವಾಡ್ ರನ್ನರ್ ಟ್ರೋಫಿ, ಎಎಚ್‌ಸಿ ಕೆ.ಪುರುಷೋತ್ತಮ್- ನಾರ್ಕೊಟಿಕ್ ಡಾಗ್ ಸ್ಕ್ವಾಡ್ ರನ್ನರ್ ಟ್ರೋಫಿ ಹಾಗೂ ಎಪಿಸಿ ಸಂಜೀವ ಭೀಮಪ್ಪ ನಾಯಕ್- ನಾರ್ಕೊಟಿಕ್ ಡಾಗ್ ಸ್ಕ್ವಾಡ್ ರನ್ನರ್ ಟ್ರೋಫಿ ಗೆದ್ದಿದ್ದಾರೆ.
ಪದಕ ವಿಜೇತರಿಗೆ ನಗದು ಬಹುಮಾನಕ್ಕೆ ಶಿಫಾರಸು: ಕರ್ತವ್ಯ ಕೂಟದಲ್ಲಿ ಪದಕ ಸಾಧನೆ ಮಾಡಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗದು ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ.
ಚಿನ್ನ ವಿಜೇತರಿಗೆ 3 ಲಕ್ಷ ರು., ಬೆಳ್ಳಿ ವಿಜೇತರಿಗೆ 2 ಲಕ್ಷ ರು. ಹಾಗೂ ಕಂಚು ವಿಜೇತರಿಗೆ 1 ಲಕ್ಷ ರು. ಮಂಜೂರು ಮಾಡಲು ಶಿಫಾರಸು ಮಾಡಲಾಗುವುದು.
ಈ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಾಧನೆಯನ್ನು ಶ್ಲಾಘಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ 2 ಲಕ್ಷ ರು. ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.