ಕನ್ನಡಪ್ರಭ ವಾರ್ತೆ ಕಾರಟಗಿ
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸಿದ್ದಾಪುರ ಗ್ರಾಮದ ಗ್ರಾಪಂ ಕಚೇರಿ ಸೇರಿ ಒಟ್ಟು ಎರಡು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಸೋಮವಾರ ಬೆಳಗ್ಗೆ ೮ ಗಂಟೆಗೆ ಸರಿಯಾಗಿ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು. ಪದವೀಧರ ಮತದಾರರು ಬೆಳಗ್ಗೆಯೇ ಮತದಾನಕ್ಕಾಗಿ ಆಗಮಿಸಿದರು. ಎರಡು ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ತಾಲೂಕಿನಲ್ಲಿ ಒಟ್ಟು ೧೧೫೮ ಪದವೀಧರ ಮತದಾರರು ಇದ್ದು, ಆ ಪೈಕಿ ಕಾರಟಗಿ ಮತಗಟ್ಟೆ ವ್ಯಾಪ್ತಿಗೆ ೭೬೪ ಮತ್ತು ಸಿದ್ದಾಪುರದಲ್ಲಿ ೩೯೪ ಜನ ಮತದಾರರು ಇದ್ದಾರೆ. ಕಾರಟಗಿಯಲ್ಲಿ ೪೪೯ ಪುರುಷರು, ೧೭೨ ಮಹಿಳೆಯರು ಸೇರಿ ಒಟ್ಟು ೬೨೧ ಜನರು ಮತದಾನ ಮಾಡಿದರೆ, ಸಿದ್ದಾಪುರದಲ್ಲಿ ೨೩೩ ಪುರುಷರು ಮತ್ತು ೯೪ ಮಹಿಳೆಯರು ಸೇರಿ ೩೨೭ ಜನರು ಮತ ಚಲಾಯಿಸಿದರು. ಆ ಮೂಲಕ ಕಾರಟಗಿ ಕೇಂದ್ರದಲ್ಲಿ ಶೇ.೮೧.೨೮ ಮತ್ತು ಸಿದ್ದಾಪುರದಲ್ಲಿ ಶೇ.೮೨.೯೯ರಷ್ಟು ಮತದಾನವಾಗಿದ್ದು, ತಾಲೂಕುವಾರ ಒಟ್ಟು ೮೧.೮೨ರಷ್ಟು ಮತದಾನವಾಗಿದೆ.
ಕನಕಗಿರಿಯಲ್ಲಿ ಶಾಂತಿಯುತ ಮತದಾನ:
ಅರ್ಜಿ ಸಲ್ಲಿಸಿದರೂ ಸಿಗದ ಅವಕಾಶ:ಪಟ್ಟಣದ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಪದವೀಧರರು ಈಶಾನ್ಯ ಪದವೀಧರ ಚುನಾವಣೆಗೆ ಮತದಾನದ ಹಕ್ಕು ಪಡೆಯಲು ಅರ್ಜಿ ಸಲ್ಲಿಸಿದರೂ ಅವಕಾಶ ದೊರೆತಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿ ಪದವೀಧರರು ಅರ್ಜಿಯೊಂದಿಗೆ ತಮ್ಮ ದಾಖಲೆ ನೀಡಿ, ಸ್ವೀಕೃತಿ ಪ್ರತಿ ಪಡೆದಿದ್ದರೂ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಲ್ಲ. ಇದರಿಂದಾಗಿ ಸುಮಾರು ನೂರಾರು ಪದವೀಧರರು ಮತದಾನದಿಂದ ವಂಚಿತರಾಗುವಂತಾಗಿದೆ.ನಡೆದ ವಾರದ ಸಂತೆ:ಈಶಾನ್ಯ ಪದವೀಧರ ಚುನಾವಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಾತ್ರೆ ಹಾಗೂ ಸಂತೆ ನಡೆಸದಂತೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಆದೇಶ ಪಟ್ಟಣದಲ್ಲಿ ಉಲ್ಲಂಘನೆಯಾಗಿದೆ. ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಎಪಿಎಂಸಿ ಯಾರ್ಡಿನಲ್ಲಿ ನಡೆದಿದ್ದು, ತರಕಾರಿ, ಮಸಾಲೆ, ಹಣ್ಣು, ಕಿರಾಣಿ ಸೇರಿ ನಾನಾ ದಿನಸಿ ವ್ಯಾಪಾರ ಪ್ರತಿ ವಾರದಂತೆ ನಡೆಯಿತು.