ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಒಟ್ಟು 241 ಬೂತುಗಳಲ್ಲಿ ಶೇ 81.30 ಮತದಾನ ನಡೆದಿದೆ.
ಗರಿಷ್ಠ ಮತದಾನ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 86ನೇ ಬೂತು ನೆರಿಯ ಗ್ರಾಮದ ಬಾಂಜಾರು ಸಮುದಾಯ ಭವನದ ಮತ ಗಟ್ಟೆಯಲ್ಲಿ ಎಲ್ಲ 51 ಪುರುಷರು ಮತ್ತು 60 ಮಹಿಳೆಯರು ಮತದಾನ ಮಾಡಿ ಶೇ.100 ಗರಿಷ್ಠ ಮತದಾನ ಮಾಡಿ ದಾಖಲೆ ನಿರ್ಮಿಸಿದೆ.
ಉಜಿರೆಯ ಎಸ್‌ಡಿಎಂ ಅನುದಾನಿತ ಶಾಲೆಯ ಬೂತ್ 94 ರಲ್ಲಿ ಶೇ. 65.91 ಕನಿಷ್ಠ ಮತದಾನ ದಾಖಲೆಯಾಗಿದೆ. ನಾರಾವಿ ಗ್ರಾಮ ಪಂಚಾಯಿತಿ 1ರಲ್ಲಿ ಶೇ 67.99 , ಬೂತ್ 92 ಉಜಿರೆ ಶ್ರೀ ಧ ಮಂ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಶೇ.69, ನೆರಿಯ ಗಂಡಿಬಾಗಿಲು ದ.ಕ.ಜಿ.ಪಂ.ಹಿ ಪ್ರ. ಶಾಲೆ ಬೂತ್ 85ರಲ್ಲಿ ಶೇ 65.98 ಮತದಾನವಾಗಿದ್ದು ಉಳಿದಂತೆ ಎಲ್ಲ ಬೂತುಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನವಾಗಿದೆ.