ಕಾಫಿನಾಡಿನಲ್ಲಿ 85 ಸಾವಿರ ಮತದಾರರು ಔಟ್‌

KannadaprabhaNewsNetwork |  
Published : Oct 28, 2026, 01:15 AM IST
ಡಿಸಿ | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನ ಐದು ವಿಧಾನಸಭಾ ಕ್ಷೇತ್ರದ 85,769 ಮತದಾರರ ಹೆಸರು ಮತದಾರ ಪಟ್ಟಿಯಿಂದ ಕೈಬಿಡುವ ಮೂಲಕ ಮತದಾರ ಸಂಖ್ಯೆ 9.60 ಲಕ್ಷದಿಂದ 8.74 ಲಕ್ಷಕ್ಕೆ ಕುಸಿತಗೊಂಡಿದೆ. ಕಳೆದ 3-4 ತಿಂಗಳಿನಿಂದ ನಡೆಸಲಾದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ಮಂಗಳವಾರ ಅಂತಿಮ ಮತದಾರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಮಂಗಳವಾರ ಅಂತಿಮ ಮತದಾರ ಪಟ್ಟಿ ಬಿಡುಗಡೆ । 8.74 ಲಕ್ಷಕ್ಕೆ ಕುಸಿತ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಐದು ವಿಧಾನಸಭಾ ಕ್ಷೇತ್ರದ 85,769 ಮತದಾರರ ಹೆಸರು ಮತದಾರ ಪಟ್ಟಿಯಿಂದ ಕೈಬಿಡುವ ಮೂಲಕ ಮತದಾರ ಸಂಖ್ಯೆ 9.60 ಲಕ್ಷದಿಂದ 8.74 ಲಕ್ಷಕ್ಕೆ ಕುಸಿತಗೊಂಡಿದೆ. ಕಳೆದ 3-4 ತಿಂಗಳಿನಿಂದ ನಡೆಸಲಾದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ಮಂಗಳವಾರ ಅಂತಿಮ ಮತದಾರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ ಭನ್ವರ್‌ ಸಿಂಗ್‌ ಮೀನಾ, ಎಸ್‌ಐಆರ್‌ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಎಸ್‌ಐಆರ್‌ ಆರಂಭಕ್ಕೂ ಮೊದಲು ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9,60,231 ಮತದಾರರಿದ್ದರು. ಎಸ್‌ಐಆರ್‌ ಪ್ರಕ್ರಿಯೆಯಡಿ ಎಲ್ಲ 9.60 ಲಕ್ಷ ಮತದಾರರಿಗೆ ಎನುಮರೇಶನ್‌ ಫಾರಂ ವಿತರಣೆ ಮಾಡಲಾಗಿತ್ತು. ಈ ವೇಳೆ 96,715 ಮಂದಿ ಎನುಮರೇಶನ್‌ ಫಾರಂ ಭರ್ತಿ ಮಾಡಿ ಬಿಎಲ್‌ಒಗಳಿಗೆ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಆ ಮತದಾರರ ಹೆಸರನ್ನು ಕೈಬಿಟ್ಟು ಆ. 24 ರಂದು 8,63,516 ಮತದಾರರು ಇರುವ ಕರಡು ಮತದಾರ ಪಟ್ಟಿ ಪ್ರಕಟಿಸಿದ ಚುನಾವಣಾ ವಿಭಾಗ ಆಕ್ಷೇಪಣೆ ಸಲ್ಲಿಸುವುದಕ್ಕೆ ಸೆ.23ರ ವರೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ 1916 ಆಕ್ಷೇಪಣೆ ಸಲ್ಲಿಕೆಯಾಗಿದ್ದವು.

ಇದೇ ವೇಳೆ ಎನುಮರೇಶನ್‌ ಫಾರಂ ಸಲ್ಲಿಸಿದ ಮತದಾರ ಪೈಕಿ 91,610 ಮತದಾರರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ನಡೆಸಲಾಗಿತ್ತು. ಈ ಪೈಕಿ 89,569 ಮತದಾರರು ವಿಚಾರಣೆಗೆ ಹಾಜರಾಗಿದ್ದರು. ಇದೀಗ ಮಂಗಳವಾರ ಅಂತಿಮ ಮತದಾರ ಪಟ್ಟಿ ಬಿಡುಗಡೆ ಮಾಡಿದ್ದು, 8,74,462 ಮತದಾರರಿದ್ದಾರೆ. ಈ ಪೈಕಿ 4,29,733 ಪುರುಷರು, 4,44,712 ಮಹಿಳೆ ಹಾಗೂ 17 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.

ಸೆ.23ರ ನಂತರ 15,244 ಮತದಾರರು ಪಟ್ಟಿಗೆ:ಎಸ್‌ಐಆರ್‌ ಅಡಿ ಸೆ. 23ಕ್ಕೆ ಪ್ರಕಟಿಸಲಾದ ಕರಡು ಮತದಾರ ಪಟ್ಟಿ ಬಳಿಕ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬರೋ ಬ್ಬರಿ 15,244 ಮತದಾರರು ಅಂತಿಮ ಮತದಾರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ 4298 ಮತದಾರರ ಹೆಸರನ್ನು ಡಿಲಿಟ್‌ ಮಾಡಲಾಗಿದೆ. ಇದರಲ್ಲಿ ನೋಟಿಸ್ ಜಾರಿಗೊಳಿಸಿ 96 ಸಾವಿರ ಮತದಾರರ ಪೈಕಿ 2,041 ಮತದಾರರ ಹೆಸರುಗಳನ್ನು ಫಾರಂ 7 ಅರ್ಜಿ ಮೂಲಕ ಇಆರ್‌ಒಗಳೇ ಡಿಲಿಟ್‌ಗೆ ಶಿಫಾರಸ್ಸು ಮಾಡಿದ್ದಾರೆ. ಒಟ್ಟಾರೆ ಈ ಅವಧಿಯಲ್ಲಿ ಜಿಲ್ಲೆಯಲ್ಲಿ 10,946 ಮತದಾರರು ಹೆಚ್ಚಳಗೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಮಾಹಿತಿ ನೀಡಿದ್ದಾರೆ.

ಫಾರಂ 7 ಅಡಿ ಸಲ್ಲಿಸಿದ 1,371 ಅರ್ಜಿ ತಿರಸ್ಕಾರ

ತೀವ್ರ ಚರ್ಚೆಗೆ ಕಾರಣವಾದ ಫಾರಂ 7 ಅಡಿ ಜಿಲ್ಲೆಯಲ್ಲಿ ಬರೋಬ್ಬರಿ 1916 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 545 ಅರ್ಜಿ ಮಾತ್ರ ಅನುಮೋದಿಸಿದ್ದು, 1371 ಫಾರಂ 7 ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕಾರ ಮಾಡಲಾಗಿದೆ.

ಇಆರ್‌ಒ ಕ್ರಮದ ಬಗ್ಗೆ ಒಂದೂ ಮೇಲ್ಮನವಿ ಬಂದಿಲ್ಲ91 ಸಾವಿರ ಮಂದಿಗೆ ನೋಟಿಸ್‌ ಮಾಡಿ ವಿಚಾರಣೆ ನಡೆಸಲಾಗಿತ್ತು. ಈ ಅವಧಿಯಲ್ಲಿ ಮತದಾರ ನೋಂದಣಿ ಅಧಿಕಾರಿ (ಇಆರ್‌ಒ) ತೆಗೆದುಕೊಂಡು ಕ್ರಮದ ಬಗ್ಗೆ ಯಾವುದೇ ಒಂದೇ ಒಂದು ಮೇಲ್ಮನವಿ ಅರ್ಜಿ ಜಿಲ್ಲಾ ನೋಂದಣಿ ಅಧಿಕಾರಿಗೆ (ಡಿಆರ್‌ಒ) ಸಲ್ಲಿಕೆಯಾಗಿಲ್ಲ. ಫಾರಂ 6ಗೆ ಸಂಬಂಧಿಸಿಂತೆ ಕೇವಲ ಒಂದು ಮೇಲ್ಮನವಿ ಸಲ್ಲಿಕೆಯಾಗಿದ್ದು, ಅದು ಎಸ್ ಐಆರ್‌ಗೆ ಸಂಬಂಧಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಇದ್ದರು.---ಬಾಕ್ಸ್‌---

ಚಿಕ್ಕಮಗಳೂರು ವಿಧಾಸಸಭಾ ಕ್ಷೇತ್ರದಲ್ಲಿ ಹೆಚ್ಚು ಡಿಲೀಟ್‌ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 85,769 ಮತದಾರರ ಹೆಸರು ಡಿಲೀಟ್‌ ಆಗಿರುವ ಈ ಪೈಕಿ ಅತಿ ಹೆಚ್ಚು ಅಂದರೆ 30,800 ಮತದಾರರು ಚಿಕ್ಕಮಗಳೂರು ಕ್ಷೇತ್ರದಲ್ಲಿ ಡಿಲೀಟ್‌ ಆಗಿದೆ. ಉಳಿದಂತೆ ತರೀಕೆರೆ 18,665, ಕಡೂರು 16,179, ಮೂಡಿಗೆರೆ 11,669 ಹಾಗೂ ಶೃಂಗೇರಿ 8,456 ಮತದಾರರ ಹೆಸರು ಡಿಲೀಟ್‌ ಆಗಿದೆ.-- ಬಾಕ್ಸ್‌--ವಿಧಾನಸಭಾ ಕ್ಷೇತ್ರವಾರು ಮತದಾರ ಡಿಲೀಟ್‌ ವಿವರ

ವಿಧಾನಸಭಾ ಕ್ಷೇತ್ರಎಸ್‌ಐಆರ್‌ ಮೊದಲುಎಸ್‌ಐಆರ್‌ ಅಂತಿಮ ಪಟ್ಟಿಡಿಲೀಟ್‌ ಸಂಖ್ಯೆ

ಶೃಂಗೇರಿ1671711,58,7158456

ಮೂಡಿಗೆರೆ1672991,55,63011669

ಚಿಕ್ಕಮಗಳೂರು22693419613430,800

ತರೀಕೆರೆ19208717342218,665

ಕಡೂರು20674019056116,179

ಒಟ್ಟು9,602318,74,46285,769

--ಕೋಟ್‌--

ಎಸ್‌ಐಆರ್‌ ಅಡಿ ಕೈಗೊಳ್ಳುವ ಪ್ರತಿಯೊಂದು ಕ್ರಮದ ಕುರಿತು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ. ಮತದಾರಪಟ್ಟಿಯಿಂದ ಕೈಬಿಟ್ಟು ಹೋಗಿದೆ ಎನ್ನುವ ಮತದಾರರು ಜಿಲ್ಲಾ ನೋದಂಣಿ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಅದಕ್ಕೆ ಯಾವುದೇ ಕಾಲಮಿತಿ ಇಲ್ಲ. ಸೆ.23ರ ನಂತರ ಮತದಾರ ಪಟ್ಟಿಗೆ ಸೇರ್ಪಡೆಗೆ ಸಲ್ಲಿಸಿದ ಅರ್ಜಿ ಗಳನ್ನು ಹೆಚ್ಚುವರಿ ಪಟ್ಟಿಯಲ್ಲಿ ಪ್ರಕಟಿಸಲಾಗುವುದು.

- ಭನ್ವರ್‌ ಸಿಂಗ್‌ ಮೀನಾ, ಜಿಲ್ಲಾ ಚುನಾವಣಾಧಿಕಾರಿ, ಚಿಕ್ಕಮಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ್ಲರಬಾಣವಾಡಿಯಲ್ಲಿ ಚಿರತೆ ಮರಿ ಪತ್ತೆ
ಬದುಕಿನ ಸನ್ನಡತೆಗೆ ಯೋಗ-ಅಧ್ಯಾತ್ಮ ಸಹಕಾರಿ: ಸ್ವಾಮೀಜಿ