ಹೇಮಾವತಿ ಲಿಂಕ್‌ ಕೆನಾಲ್‌ ವಿರುದ್ಧ ಹೋರಾಟ ಅಗತ್ಯ

KannadaprabhaNewsNetwork |  
Published : Oct 28, 2026, 01:15 AM IST
ಗುಬ್ಬಿತಾಲ್ಲೂಕಿನ ಕಸಬ ಹೋಬಳಿ ಮಡೇನಹಳ್ಳಿ ಗ್ರಾಮದ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ ವಿಸರ್ಜನಾ ಮಹೋತ್ಸವ ದಲ್ಲಿಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಹಾಗೂ  ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಇವರುಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ ಕಸಬಾ ಹೋಬಳಿ ಮಡೇನಹಳ್ಳಿ ಗ್ರಾಮದ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ ವಿಸರ್ಜನಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಈ ಅಂಗವಾಗಿ ವಿಶೇಷ ಪೂಜೆ ಹಾಗೂ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಕಸಬಾ ಹೋಬಳಿ ಮಡೇನಹಳ್ಳಿ ಗ್ರಾಮದ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ ವಿಸರ್ಜನಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಈ ಅಂಗವಾಗಿ ವಿಶೇಷ ಪೂಜೆ ಹಾಗೂ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ಬರಗಾಲ ಪೀಡಿತ ಪ್ರದೇಶಗಳಲ್ಲಿ ನಮ್ಮ ಗುಬ್ಬಿ ತಾಲೂಕು ಸೇರಿದೆ. ಹೇಮಾವತಿ ನಮ್ಮ ಬದುಕಿಗೆ ಆಧಾರವಾಗಿದೆ. ಈ ನೀರನ್ನು ಬೇರೆಡೆಗೆ ಕೊಂಡೊಯ್ಯಲು ಈಗಾಗಲೇ ಲಿಂಕ್ ಕೆನಾಲ್ ಕಾಮಗಾರಿ ನಡೆದಿದೆ. ಇದನ್ನು ವಿರೋಧಿಸಿ ದೊಡ್ಡ ಪ್ರತಿಭಟನೆ ನಡೆಸಿ ನ್ಯಾಯಾಲಯ ಮೆಟ್ಟಿಲೇರಿ ಕಾನೂನು ಹೋರಾಟ ಸಹ ನಡೆಸಿದ್ದೇವೆ. ಹೇಮಾವತಿ ಕೈ ತಪ್ಪಿದರೆ ಶಾಶ್ವತ ಬರ ನಾವು ಎದುರಿಸಬೇಕಾಗುತ್ತಿದೆ. ಈ ನಿಟ್ಟಿನಲ್ಲಿ ಗಣೇಶೋತ್ಸವ ಆಚರಿಸುವ ಯುವಕರು ಹೇಮಾವತಿ ಉಳಿಸಿಕೊಳ್ಳಲು ಹೋರಾಟಕ್ಕೆ ಬರಬೇಕು ಎಂದು ಕರೆ ನೀಡಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಇಂಥ ಧಾರ್ಮಿಕ ಕಾರ್ಯಗಳು ಗ್ರಾಮದಲ್ಲಿ ನಡೆದಾಗ ಮಾತ್ರ ಗ್ರಾಮದ ಅಭಿವೃದ್ಧಿಯಾಗುತ್ತದೆ ಹಾಗೂ ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಇಂಥ ಧಾರ್ಮಿಕ ಆಚರಣೆಗಳಿಂದ ಮಳೆ ಆಗಿದೆ ಎಂದು ತಿಳಿಸಿದರು.ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಮುಂದಿನ ದಿನದಲ್ಲಿ ಮೈತ್ರಿ ಪಕ್ಷದ ಗೆಲುವು ಎಲ್ಲೆಡೆ ಕಾಣಿಸಲಿದೆ. ಬೇಸತ್ತ ಜನ ಸ್ಥಳೀಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಈ ಫಲಿತಾಂಶ ಮುಂದಿನ ವರ್ಷದ ಎಲ್ಲಾ ಹಬ್ಬಗಳು ಮೈತ್ರಿ ಹಬ್ಬವಾಗಿ ಕಾಣಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಸ ಮಂಜರಿ ಕಾರ್ಯಕ್ರಮದ ಹಾಡಿಗೆ ಮುಖಂಡರು ಯುವಕರು ಕುಣಿದು ಕುಪ್ಪಳಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೊಸಹಳ್ಳಿ ಬಸವರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್, ಮುಖಂಡರಾದ ಹೊನ್ನಪ್ಪಾಜಿ ಅರಸು, ಜಿ.ಎಂ.ಶಿವಾನಂದ್, ಕಾಂತರಾಜು, ಮಲ್ಲೇಶ್, ವಿನಯ್, ರವೀಶ್, ಪರಮೇಶ್, ಮಂಜು, ನಿರ್ವಾಣಯ್ಯ, ರಾಜಣ್ಣ, ಭರತ್, ಮಂಜಣ್ಣ, ಕಂಚಿಪಾತಯ್ಯ, ದೇವರಾಜ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನಾಂಬೆಯ ದರ್ಶನಕ್ಕೆ ಸ್ಥಳೀಯರಿಗೆ ಮೊದಲ ಆದ್ಯತೆ ಕೋರಿ ಪ್ರತಿಭಟನೆ
ಕಾನೂನು ಅರಿವು ಪಡೆದು ಹಕ್ಕುಗಳನ್ನು ರಕ್ಷಿಸಿಕೊಳ್ಳಿ: ನ್ಯಾಯಾಧೀಶೆ ಹೇಮಾವತಿ ಕರೆ