- ವಿಚಾರಣೆ ಬಾಕಿ ಇದ್ದ 1794, ವ್ಯಾಜ್ಯ ಪೂರ್ವ 85190 ದಾವೆಗಳ ಪ್ರಕರಣ - - - ಕನ್ನಡಪ್ರಭ ವಾರ್ತೆ ಹರಿಹರ
ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮದಡಿ ಶನಿವಾರ ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ಲೋಕ್ ಅದಾಲತ್‌ನಲ್ಲಿ ವಿಚಾರಣೆ ಬಾಕಿ ಇದ್ದ 1794 ಮತ್ತು ವ್ಯಾಜ್ಯ ಪೂರ್ವ 85190 ದಾವೆ ಸೇರಿ ಒಟ್ಟು 86984 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರಿ ಮುನ್ನೋಳಿ ತಿಳಿಸಿದ್ದಾರೆ.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್‌ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 338 ಪ್ರಕರಣಗಳಲ್ಲಿ, 27 ವ್ಯಾಜ್ಯ ಪೂರ್ವದ 173ರಲ್ಲಿ 1 ಪ್ರಕರಣವು ರಾಜಿ ಸಂಧಾನ ಯಶಸ್ವಿಯಾಗಿದೆ. ಒಟ್ಟು ₹8824776 ಪರಿಹಾರ ಕೊಡಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್‌ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 935 ಪ್ರಕರಣಗಳಲ್ಲಿ 852 ವ್ಯಾಜ್ಯ ಪೂರ್ವದ 28978 ರಲ್ಲಿ 28407 ಪ್ರಕರಣದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು, ಒಟ್ಟು ₹57324 956 ಪರಿಹಾರ ಕೊಡಿಸಲಾಗಿದೆ.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್‌ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 610 ಪ್ರಕರಣಗಳಲ್ಲಿ 555 ವ್ಯಾಜ್ಯ ಪೂರ್ವದ ಎಲ್ಲ 28391 ಪ್ರಕರಣದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು, ಒಟ್ಟು ₹56767575 ಪರಿಹಾರ ಕೊಡಿಸಲಾಗಿದೆ.2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್‌ಗೆ ನಿಗದಿಪಡಿಸಿದ್ದ ವಿಚಾರಣಾ ಹಂತದ 423 ಪ್ರಕರಣಗಳಲ್ಲಿ 360 ವ್ಯಾಜ್ಯ ಪೂರ್ವದ ಎಲ್ಲಾ 28391 ಪ್ರಕರಣದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು, ಒಟ್ಟು ₹55953773 ಪರಿಹಾರ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯಾಯಾಧೀಶರಾದ ಪಕ್ಕೀರಮ್ಮ ಕೆಳಗೇರಿ, ಜ್ಯೋತಿ ಅಶೋಕ ಪತ್ತಾರ, ವೀಣಾ ಕೋಳೇಕರ ಮತ್ತು ಹಿರಿ-ಕಿರಿಯ ವಕೀಲರು, ಕಕ್ಷಿದಾರರು ಉಪಸ್ಥಿತರಿದ್ದರು. - - - -೧೮ಎಚ್‌ಆರ್‌ಆರ್೩:ಲೋಕ್ ಅದಾಲತ್ ನಿಮಿತ್ತ ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಪ್ರಕರಣಗಳ ರಾಜಿ ಸಂಧಾನ ಪ್ರಕ್ರಿಯೆ ಜರುಗಿತು.