ಅಮರೇಶ್ವಸ್ವಾಮಿ ಕಂದಗಲ್ಲಮಠ
ಉತ್ತಮ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ವೇಗ ಪಡೆದಿವೆ. ಯಲಬುರ್ಗಾ ತಾಲೂಕಿನಲ್ಲಿ ೫೭,೫೦೦ ಹೆಕ್ಟೇರ್ ಹಾಗೂ ಕುಕನೂರು ತಾಲೂಕಿನಲ್ಲಿ ೩೦,೧೦೬ ಹೆಕ್ಟೇರ್ ಬಿತ್ತನೆ ಕ್ಷೇತ್ರ ಹೊಂದಿದ್ದು ೮೭,೭೧೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪೂರ್ವ ಮುಂಗಾರಿನಲ್ಲಿ ಯಲಬುರ್ಗಾ ಹೋಬಳಿ ೮೨೦೦ ಹೆಕ್ಟೇರ್, ಕುಕನೂರ ಹೋಬಳಿ ೧೦,೪೪೪ ಹೆಕ್ಟೇರ್ ಹೆಸರು ಬೆಳೆ ಬಿತ್ತನೆ ಗುರಿ ಹೊಂದಿದೆ.ಬಿತ್ತನೆ ಬೀಜ ವಿತರಣೆ:
ಯಲಬುರ್ಗಾ ಹಾಗೂ ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರಗಳ ಜತೆಗೆ ಬೇವೂರು, ಗುನ್ನಾಳ, ಕುಕನೂರು ಹಾಗೂ ಮಂಗಳೂರು ಆರ್‌ಎಸ್‌ಕೆ ಜತೆಗೆ ತಳಕಲ್, ಮಸಬಹಂಚನಾಳದಲ್ಲಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಯಲಬುರ್ಗಾ ಕೃಷಿ ಇಲಾಖೆಯಿಂದ ೨೫೨ ಕ್ವಿಂಟಲ್ ಹೆಸರು, ೧೨೫ ಕ್ವಿಂಟಲ್ ತೊಗರಿ, ೩೫೦೦ ಕ್ವಿಂಟಲ್ ಮೆಕ್ಕೆಜೋಳ, ೩೦೦ ಕ್ವಿಂಟಲ್ ಸಜ್ಜೆ, ಜೋಳ ೫.೫೦ ಹಾಗೂ ಸೂರ್ಯಕಾಂತಿ ೧೫೨ ಕ್ವಿಂಟಲ್‌ಗಳ ಬೇಡಿಕೆ ಸಲ್ಲಿಸಲಾಗಿದೆ. ಇಲಾಖೆಯಿಂದ ಈಗಾಗಲೇ ವಿವಿಧ ಕಂಪನಿಗಳಿಗೆ ಪೂರೈಕೆ ಆದೇಶ ನೀಡಲಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಮಾಡಲಾಗುತ್ತಿದೆ. ವಿವಿಧ ಮಾರಾಟ ಮಳಿಗೆಗಳಲ್ಲಿ ಯೂರಿಯಾ, ಡಿಎಪಿ, ಪೋಟ್ಯಾಷ್ ಹಾಗೂ ಸಂಯುಕ್ತ ರಸಗೊಬ್ಬರಗಳ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.ಎಷ್ಟು ಪ್ರಮಾಣದಲ್ಲಿ ಬೆಳೆ ಬಿತ್ತನೆ:
ರಸಗೊಬ್ಬರ:
ಪ್ರಮೋದ ತುಂಬಳ ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾಉತ್ತಮ ಮಳೆಯಾಗಿದ್ದು, ಹೆಸರು ಬೆಳೆ ಸೇರಿದಂತೆ ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಬೆಳೆಗಳ ಬಿತ್ತನೆಗೆ ಭೂಮಿ ಸಿದ್ಧಪಡಿಸಲಾಗುತ್ತಿದೆ. ಎರಡ್ಮೂರು ಬಾರಿ ಭೂಮಿ ಉಳುಮೆ ಮಾಡಿ ಬಿತ್ತನೆ ಕಾರ್ಯ ಮಾಡುತ್ತೇವೆ. ಇದರಿಂದ ಕಸ ನಿರ್ವಹಣೆ ಸಹ ಆಗಲಿದೆ.