5 ಪಾಲಿಕೆ ಎಲೆಕ್ಷನ್‌ಗೆ 89 ಲಕ್ಷ ಮತದಾರರು

KannadaprabhaNewsNetwork |  
Published : Mar 10, 2026, 02:45 AM IST
ಜಿಬಿಎ | Kannada Prabha

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಐದು ಪಾಲಿಕೆಗಳಿಗೆ ಮೊದಲ ಬಾರಿ ನಡೆಯಲಿರುವ ಚುನಾವಣೆಗೆ ಒಟ್ಟು 88,91,411 ಜನರು ಮತದಾನದ ಹಕ್ಕು ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಐದು ಪಾಲಿಕೆಗಳಿಗೆ ಮೊದಲ ಬಾರಿ ನಡೆಯಲಿರುವ ಚುನಾವಣೆಗೆ ಒಟ್ಟು 88,91,411 ಜನರು ಮತದಾನದ ಹಕ್ಕು ಹೊಂದಿದ್ದಾರೆ.

ಸೋಮವಾರ ಜಿಬಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕರಡು ಮತದಾರರ ಪಟ್ಟಿಯ ಕುರಿತು ಮಾಹಿತಿ ಹಂಚಿಕೊಂಡ ಜಿಲ್ಲಾ ಚುನಾವಣಾಧಿಕಾರಿಯು ಆಗಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ನಗರ ಪಾಲಿಕೆಗಳಲ್ಲಿ 369 ವಾರ್ಡಗಳವೆ. 45,69,752 ಪುರುಷರು, 43,21,143 ಮಹಿಳೆಯರು ಹಾಗೂ 1,635 ಇತರೆ ಮತದಾರರು ಇದ್ದಾರೆ. 8,024 ಮತಟ್ಟೆಗಳಿವೆ ಎಂದು ವಿವರಿಸಿದರು.

ಕರಡು ಪಟ್ಟಿಗೆ ಮಾ.10ರಿಂದ 16ರವರೆಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಜಿಬಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಏ.6ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ದಕ್ಷಿಣ ನಗರಪಾಲಿಕೆಯ ಸುಬ್ರಮಣ್ಯಪುರ ವಾರ್ಡ್ ಸಂಖ್ಯೆ 51ರಲ್ಲಿ ಅತಿ ಹೆಚ್ಚು ಅಂದರೆ 54,026 ಮತದಾರರನ್ನು ಹೊಂದಿದೆ. ಪೂರ್ವ ಪಾಲಿಕೆಯ ಕೊತ್ತೂರು ವಾರ್ಡ್ ಸಂಖ್ಯೆ 16ರಲ್ಲಿ ಅತಿ ಕಡಿಮೆ ಅಂದರೆ 10,940 ಮತದಾರರನ್ನು ಹೊಂದಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಿ:

ಕೆಲವು ವಾರ್ಡ್‌ಗಳಲ್ಲಿ ಜನಸಂಖ್ಯೆ ಹೆಚ್ಚು ಇದೆ. ಹೆಚ್ಚು ಜನಸಂಖ್ಯೆ ಇರುವ ವಾರ್ಡ್‌ ಮತ್ತು ಕಡಿಮೆ ಜನಸಂಖ್ಯೆ ಇರುವ ವಾರ್ಡ್‌ಗೆ ಒಂದೇ ಪ್ರಮಾಣದ ಅನುದಾನ ಬಿಡುಗಡೆಯಿಂದ ಅಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗುವುದಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ಹೆಚ್ಚಿನ ಅನುದಾನಕ್ಕೆ ಜನಪ್ರತಿನಿಧಿ ಮನವಿ ಮಾಡಬಹುದು. ಅಗತ್ಯತೆ ನೋಡಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆಗಳಿಗೆ ಅಧಿಕಾರ ಇದೆ ಎಂದು ಮಹೇಶ್ವರ ರಾವ್ ಹೇಳಿದರು.ಕ್ರ. ಸಂ.ಪಾಲಿಕೆಗಳ ಹೆಸರುಒಟ್ಟು ವಾರ್ಡ್‌ಗಳುಒಟ್ಟು ಮತಗಟ್ಟೆಗಳುಪುರುಷಮಹಿಳೆಇತರೆ ಒಟ್ಟು1.ಬೆಂಗಳೂರು ಕೇಂದ್ರ631,3057,26,3526,98,82830314,25,483 2.ಬೆಂಗಳೂರು ಉತ್ತರ721,7169,94,3109,59,51538119,54,206

3.ಬೆಂಗಳೂರು ದಕ್ಷಿಣ721,6149,03,1828,40,86322517,44,270

4.ಬೆಂಗಳೂರು ಪೂರ್ವ509165,49,3134,92,16725810,41,7385.ಬೆಂಗಳೂರು ಪಶ್ಚಿಮ1122,49313,96,03613,29,21046827,25,714 | ಒಟ್ಟು3698,04445,69,19343,20,5831,63588,91,411

ಮಹಿಳಾ ಮೀಸಲಾತಿ

ಸರ್ಕಾರದ ನಿರ್ಧಾರ

ಪಾಲಿಕೆಯ ವಾರ್ಡ್‌ ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನಿಯಮ ಪಾಲನೆಯಾಗದಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆಯುಕ್ತ ಮಹೇಶ್ವರ ರಾವ್, ಮೀಸಲಾತಿ ಮಾರ್ಗಸೂಚಿ ನಿಯಮಗಳ ಪ್ರಕಾರವೇ ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಆಯೋಗದಿಂದ ಚುನಾವಣೆ

ದಿನಾಂಕ ನಿಗದಿ: ಆಯುಕ್ತಜೂನ್ ಅಂತ್ಯದೊಳಗೆ ಚುನಾವಣೆ ನಡೆಯುವುದೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ಸುಪ್ರೀಂಕೋರ್ಟ್ ಹಾಗೂ ಚುನಾವಣಾ ಆಯೋಗದ ಸೂಚನೆಯಂತೆ ಸಿದ್ಧತೆಗಳು ನಡೆದಿವೆ. ಚುನಾವಣೆ ನಡೆಸುವ ತೀರ್ಮಾನವನ್ನು ಆಯೋಗವೇ ತೆಗೆದುಕೊಳ್ಳುತ್ತದೆ. ಸಮಗ್ರ ಮತದಾರರ ಪರಿಷ್ಕರಣೆಗೆ (ಎಸ್‌ಐಆರ್) ಈವರೆಗೆ ಯಾವುದೇ ಸೂಚನೆಗಳು ಬಂದಿಲ್ಲ. ಆದರೆ, ಚುನಾವಣಾ ಆಯೋಗದ ಸೂಚನೆಯಂತೆ ಪೂರ್ವಸಿದ್ಧತಾ ಚಟುವಟಿಕೆಗಳನ್ನು ಮಾಡಲಾಗಿದೆ ಎಂದು ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1 ಅಪಘಾತಕ್ಕೆ 4 ಪ್ರಮಾಣ ಪತ್ರ: ಕೋರ್ಟ್‌ ದಿಗ್ಭ್ರಮೆ
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿಗೆ: ಮಂಜುನಾಥ್