ಭೀಮಶಿ ಭರಮಣ್ಣವರ
ಕನ್ನಡಪ್ರಭ ವಾರ್ತೆ ಗೋಕಾಕ5 ವರ್ಷಗಳಿಗೊಮ್ಮೆ ಆಚರಿಸಲಾಗುವ ಗೋಕಾಕ ಗ್ರಾಮ ದೇವತೆಯರ ಜಾತ್ರೆ ಈ ಬಾರಿ ಹತ್ತು ವರ್ಷಗಳ ನಂತರ ನಡೆಯುತ್ತಿದ್ದು, ಗೋಕಾಕ ಜನತೆ ಸಡಗರ ಸಂಭ್ರಮದಿಂದ ಜಾತ್ರಾ ಮಹೋತ್ಸವ ಆಚರಣೆಯಲ್ಲಿ ತೋಡಗಿದ್ದಾರೆ.ಜೂ.30ರಿಂದ ಜುಲೈ 8ರವರೆಗೆ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದ್ದು. ಜಾತ್ರಾ ಮಹೋತ್ಸವದ ಮೊದಲನೆ ದಿನವಾದ ಜೂ.30ರಂದು ದ್ಯಾಮವ್ವ ದೇವಿಯರನ್ನು ಜಿನಗಾರರ ಮನೆಯಿಂದ ಸಂಜೆ 4ಕ್ಕೆ ಕರೆತಂದು ಅಂಬಿಗೇರ ಗಲ್ಲಿಯಲ್ಲಿ ಪ್ರತಿಷ್ಠಾನಗೊಳಿಸಲಾಗುವುದು. ಜು.1ರಂದು ಮಹಾಲಕ್ಷ್ಮೀ ದೇವಿಯರಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸುವುದು, ಮಧ್ಯಾಹ್ನ ನೈವೇದ್ಯ, ರಾತ್ರಿ ಮದ್ದು ಹಾರಿಸುವುದು ಮತ್ತು ದೇವಿಯರ ಹೊನ್ನಾಟ ನಡೆಯಲಿದೆ.
ಜು.2ರಂದು ಬೆಳಗ್ಗೆ 7ಗಂಟೆಗೆ ಶ್ರೀ ದ್ಯಾಮವ್ವ ದೇವಿಯರನ್ನು ರಥದಲ್ಲಿ ಕೂಡ್ರಿಸುವುದು. ಮಧ್ಯಾಹ್ನ 2ಗಂಟೆಗೆ ಸೋಮವಾರ ಪೇಠೆಯಿಂದ ಎರಡು ರಥಗಳ ರಥೋತ್ಸವ ಸಕಲ ವಾದ್ಯ ಮೇಳದೊಂದಿಗೆ ನಡೆದು ಸಂಜೆ 6ಗಂಟೆಗೆ ದ್ಯಾಮವ್ವ ಗುಡಿಗೆ ತಲುಪುವುದು. ರಾತ್ರಿ ಬಯಲಾಟ ಮದ್ದು ಸುಡುವುದು. ಜು.3ರಂದು ಮಧ್ಯಾಹ್ನ ಎರಡು ರಥಗಳು ಹಳೆ ಮುನ್ಸಿಪಾಲಿಟಿ ಮತ್ತು ಚಾವಡಿ ರಸ್ತೆಯಿಂದ ಹಾಯ್ದು ಮೊದಲ ರಥ ಅಜಂತಾ ಕೂಟಗೆ ಎರಡನೇ ರಥ ಬಾಫನಾ ಕೂಟಗೆ ತಲುಪಲಿದೆ. ಜು.4ರಂದು ಬೆಳಗ್ಗೆ 8ಗಂಟೆಗೆ ಅಜಂತಾ ಕೂಟದಿಂದ ಮೊದಲ ರಥ ಹೊರಟು ಮೆರಕನಟ್ಟಿ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನ ತಲುಪುವುದು. ಮಧ್ಯಾಹ್ನ 3ಗಂಟೆಗೆ ಎರಡನೇ ರಥ ಬಾಫನಾ ಕೂಟದಿಂದ ಸಂಜೆ 6ಗಂಟೆಗೆ ಗುರುವಾರ ಪೇಠ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನ ತಲುಪಲಿದೆ.ಜು.5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು. ಜು.6ರಂದು ಭಾರಿ ಜೋಡೆತ್ತಿನ ಬಂಡಿ ಶರ್ಯತ್ತು ಪ್ರಥಮ ₹5 ಲಕ್ಷ, ದ್ವಿತೀಯ ₹3 ಲಕ್ಷ, ತೃತೀಯ ₹2 ಲಕ್ಷ ಬಹುಮಾನ ವಿತರಣೆ. ಜು.7ರಂದು ಸೈಕಲ್ ಶರ್ಯತ್ತು ಪ್ರಥಮ ₹1 ಲಕ್ಷ, ದ್ವಿತೀಯ ₹75 ಸಾವಿರ, ತೃತೀಯ ₹50 ಸಾವಿರ ಬಹುಮಾನ ವಿತರಣೆ ಮತ್ತು ಜೋಡು ಕುದುರೆ ಗಾಡಿ ಶರ್ಯತ್ತು ಪ್ರಥಮ ₹2 ಲಕ್ಷ, ದ್ವಿತೀಯ ₹1 ಲಕ್ಷ, ತೃತೀಯ ₹50 ಸಾವಿರ ಬಹುಮಾನ ವಿತರಣೆ. ಮಂಗಳವಾರದಂದು ಮಹಾಲಕ್ಷ್ಮೀ ದೇವಿಯರಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸುವುದು, ಮಧ್ಯಾಹ್ನ ಪುರಜನರಿಂದ ನೈವೇದ್ಯ ನೀಡಲಾಗುವುದು.
ಗೋಕಾಕ ಗ್ರಾಮ ದೇವತೆಯರ ಜಾತ್ರೆಗೆ ದಿ. ಲಕ್ಷ್ಮಣರಾವ ಜಾರಕಿಹೊಳಿ, ದಿ.ದೇವಪ್ಪಾ ಬಾ.ಉಳ್ಳಾಗಡ್ಡಿ, ದಿ.ಎಸ್.ಎ.ಕೋತವಾಲ, ದಿ.ಅಶೋಕ ನಾಯಿಕ, ದಿ.ವಿ.ಎಲ್.ಹೆಜ್ಜೆಗಾರ ಸೇರಿದಂತೆ ಅನೇಕ ಹಿರಿಯರು ಅಧ್ಯಕ್ಷರಾಗಿದ್ದು, ಸದಸ್ಯರಾಗಿದ್ದು ಜಾತ್ರಾ ಮಹೋತ್ಸವವನ್ನು ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸುತ್ತ ಬಂದಿದ್ದಾರೆ.ಜಾತ್ರೆಯ ರೂವಾರಿಗಳು:
ಜಾತ್ರಾ ಕಮಿಟಿ ಅಧ್ಯಕ್ಷರಾಗಿ ರಮೇಶ ಲ ಜಾರಕಿಹೊಳಿ, ಸದಸ್ಯರುಗಳಾದ ಪ್ರಭಾಕರ ನಾ. ಚವ್ಹಾಣ, ಶ್ರೀಪಾದ ದೇಶಪಾಂಡೆ, ಅಶೋಕ ಹೆಗ್ಗಣ್ಣವರ, ಅಡಿವೇಪ್ಪ ಕಿತ್ತೂರ, ದೇವರಾಜ ಪಾಟೀಲ, ಶಿವಾನಂದ ಬನ್ನಿಶೆಟ್ಟಿ, ಸಗೀರ ಕೋತವಾಲಗೌಡ್ರು, ಬಾಗಪ್ಪ ಉಳ್ಳಾಗಡ್ಡಿ, ಸಿದ್ದಪ್ಪ ಮುತ್ತೆಪ್ಪಗೋಳ, ಅನೀಲ ಸುಣಧೋಳಿ, ಆನಂದ ಉಳ್ಳಾಗಡ್ಡಿ, ಕರೇಪ್ಪ ಭಂಡಾರಿ, ಭೀಮಶಿ ಮಾಳಿ, ಆನಂದ ಸಂಕಪಾಳ, ಪರಸಪ್ಪ ಮಲ್ಲಾಡದವರ, ಅಶೋಕ ತುಕ್ಕಾರ ಅವರು ಜಾತ್ರೆಯ ಸಕಲ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದಾರೆ.ಕಣ್ಮನ ಸೆಳೆಯುತ್ತಿವೆ ಫ್ಲೆಕ್ಸ್, ಬ್ಯಾನರ್, ದೀಪಾಲಂಕಾರಗಳುಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಹಿನ್ನೆಲೆ ಗೋಕಾಕ ನಗರದ ಫ್ಲೆಕ್ಸ್, ಬ್ಯಾನರ್‌ಗಳು ಹಾಗೂ ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ನಗರದ ಮೆರಕನಟ್ಟಿ ಮಹಾಲಕ್ಷ್ಮೀ ದೇವಸ್ಥಾನದ ಪಕ್ಕದಲ್ಲಿ, ನಗರ ಬ್ಯಾಳಿ ಕಾಟಾದಲ್ಲಿ ತರಹೇವಾರಿ ಜೇಕು, ಜೋಕಾಲಿಗಳು ಹಾಗೂ ಇಲ್ಲಿಯ ತಂಬಾಕೆ ಜಿನ್ನಿಂಗ್ ಪ್ಯಾಕ್ಟರಿಯ ಹತ್ತಿರದಲ್ಲಿ ಸರ್ಕಸ್ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಜನತೆಯನ್ನು ರಂಗಭೂಮಿ ಕಲಾ ತಂಡಗಳು ನಕ್ಕು ನಗಿಸಲು ನಗರದ ವಿವಿಧೆಡೆ ಟೆಂಟ್‌ಗಳನ್ನು ಹಾಕಿಕೊಂಡು ಮನರಂಜನೆ ನೀಡಲಿವೆ.ಇಲ್ಲಿ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವಿದ್ದು ಪ್ರತಿ ಮನೆ, ವಾಣಿಜ್ಯ ಮಳಿಗೆ, ಸರ್ಕಾರಿ ಕಚೇರಿಗಳು ಸೇರಿ ಎಲ್ಲೆಡೆ ದೀಪಾಲಂಕಾರ ಗೊಂಡಿದೆ. ಈ ಜಾತ್ರೆ ಮುಖ್ಯವಾಗಿ ಭಂಡಾರದಿಂದ ಕೂಡಿರುತ್ತದೆ. ಈ ಬಾರಿ ನಡೆಯಲಿರುವ ಜಾತ್ರೆ ಕಣ್ಣತುಂಬಿಕೊಳ್ಳಲು ಲಕ್ಷಾಂತರ ಜನ ಭಕ್ತರು ಆಗಮಿಸಲಿದ್ದಾರೆ. ರಥೋತ್ಸವದ ಮೂರು ದಿನ ಭಕ್ತರು ದೇವಿಯ ಭಂಡಾರದಲ್ಲಿ ಮಿಂದೆಳಲಿದ್ದು ಎಲ್ಲ ಮನೆ ಮನಗಳಲ್ಲಿ ಸಿದ್ಧತೆ ಜೋರಾಗಿದೆ.
ಪಾರ್ಕಿಂಗ್ ವ್ಯವಸ್ಥೆ:ಲೋಳಸೂರ ಮಾರ್ಗವಾಗಿ ನಾಕಾ ನಂ-1ರಿಂದ ಬರುವ ಭಕ್ತಾಧಿಗಳ ವಾಹನಗಳಿಗೆ ಚನ್ನಬಸವೇಶ್ವರ ವೀದ್ಯಾ ಪೀಠ, ಸಿ.ಎಸ್ ಅಂಗಡಿ ಕಾಲೇಜು, ಬೆಲ್ಲದ ಮತ್ತು ತುಪ್ಪದರವರ ಖಾಲಿ ಜಾಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗೋಕಾಕ ಫಾಲ್ಸನಿಂದ ಬರುವ ಭಕ್ತಾಧಿಗಳ ವಾಹನಗಳಿಗೆ ಜೆಎಸ್‌ಎಸ್ ಮತ್ತು ಎನ್‌ಇಎಸ್ ಶಾಲಾ ಮೈದಾನ, ಕಡಗಬಟ್ಟಿಯಿಂದ ಬರುವ ಭಕ್ತಾಧಿಗಳ ವಾಹನಗಳಿಗೆ ಜೆಆರ್‌ಬಿಸಿ ಮತ್ತು ಜ್ಞಾನದೀಪ ಕಾಲೇಜು ಮೈದಾನ, ಯರಗಟ್ಟಿಯಿಂದ ಬರುವ ಭಕ್ತಾಧಿಗಳ ವಾಹನಗಳಿಗೆ ಎಪಿಎಮ್‌ಸಿ ಮೈದಾನದಲ್ಲಿ ವ್ಯವಸ್ಥೆ ಮಾಡಾಗಿದೆ.
ಜೂ.30ರಿಂದ ಜುಲೈ2ರ ಬೆಳಗಿನ 10ಗಂಟೆ ವರೆಗೆ ಚಿಕ್ಕಹೊಳಿ ಬ್ರಿಡ್ಜ್, ಸಂಗಮ ನಗರ ಹಾಗೂ ಜಲಾಲ ಗಲ್ಲಿ ಕಡೆಗೆ ವಾಹನ ಪ್ರವೇಶ ನಿಷೇಧ ಮಾಡಲಾಗಿದೆ. ಜು.2ರಿಂದ 4ರವರೆಗೆ ಜಲಾಲ ಗಲ್ಲಿ ಸಂಗೋಳ್ಳಿ ರಾಯಣ್ಣ ವೃತ್ತ, ತಂಬಾಕ ಕೂಟ, ಚೌಧರಿ ಕೂಟ, ಕ್ರೀಮ್ ಕಾರ್ನರ್, ಬ್ಯಾಳಿ ಕಾಟಾ, ಬಸವೇಶ್ವರ ವೃತ್ತದ ಕಡೆಯಿಂದ ಆನಂದ ಟಾಕೀಸ್ ಕಡೆಯ ರಥ ಬೀದಿಯಲ್ಲಿ ವಾಹನ ಪ್ರವೇಶ ನಿಷೇಧ. 30ರಿಂದ ದಿ.8ರವರೆಗೆ ನಗರಕ್ಕೆ ಬರುವ ಭಾರಿ ವಾಹನಗಳಿಗೆ ವಾಹನ ಪ್ರವೇಶ ನಿಷೇಧಿಸಲಾಗಿದ್ದು ಪ್ರರ್ಯಾಯ ಮಾರ್ಗವಾಗಿ ಹೋಗಬೇಕು.ಊಟದ ವ್ಯವಸ್ಥೆ:
ಜೂ.30ರಿಂದ ಜು.8ರವರೆಗೆ 9ದಿನಗಳ ವರೆಗೆ ನಡೆಯುವ ಗ್ರಾಮ ದೇವತೆ ಜಾತ್ರಾ ನಿಮಿತ್ತ ನಗರಕ್ಕೆ ಬರುವ ಭಕ್ತಾಧಿಗಳಿಗೆ ನಗರದ ಎನ್‌ಎಸ್‌ಎಫ್ ಶಾಲಾ ಆವರಣದಲ್ಲಿ ನಿರಂತರ ಮಹಾಪ್ರಸಾದ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ಗೋಕಾಕ ನಗರದ ಪ್ರಮುಖ ರಸ್ತೆಗಳನ್ನು ನವೀಕರಿಸಲಾಗಿತ್ತು ಮುಖ್ಯ ರಸ್ತೆಯ ಪಕ್ಕದಲ್ಲಿ ಫೂಟ್ ಫಾತ್ ನಿರ್ಮಿಸಲಾಗಿದೆ. ಫೂಟಫಾತ್ ಮೇಲೆ ಯಾವುದೇ ಅಂಗಡಿಗಳನ್ನು ಹಚ್ಚಲು ಅವಕಾಶವಿಲ್ಲ. ರಥೋತ್ಸವ ನಡೆಯುವ ರಥ ಬೀದಿಗಳ ಉದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರಮುಖ ಸ್ಥಳಗಳಲ್ಲಿ ಪ್ರಾಥಮಿಕ ಚಿಕಿತ್ಸೆಗೆ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. 7 ಮೊಬೈಲ್ ಶೌಚಾಲಯ, 10 ತಾತ್ಕಾಲಿಕ, 10 ಹೊಸ ಶೌಚಾಲಯ, 50 ನೀರಿನ ಟ್ಯಾಂಕರಗಳ ವ್ಯವಸ್ಥೆ ಸೇರಿ ಇನ್ನು ಹಲವಾರು ಕ್ರಮಕೈಗೊಳ್ಳಲಾಗಿದೆ.ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಹಿನ್ನೆಲೆ ನಗರದ ಎರಡು ಗ್ರಾಮ ದೇವತೆಯರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡಿದ್ದು, ನೂತನ ಹೊಸ ಗ್ರಾಮ ದೇವತೆಯರ ರಥಗಳ ಜಾತ್ರಾ ಮಹೋತ್ಸವಕ್ಕೆ ಸಜ್ಜುಗೊಳ್ಳುತ್ತಿವೆ. ಸಾರ್ವಜನಿಕರು ಜಾತ್ರಾ ಮಹೋತ್ಸವದಲ್ಲಿ ಚಿಕ್ಕಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಪೊಲೀಸ್ ಸೇರಿದಂತೆ ಎಲ್ಲ ಸರಕಾರಿ ಅಧಿಕಾರಿಗಳೊಂದಿಗೆ ಸಹಕರಿಸಿ ಜಾತ್ರೆ ಯಶಸ್ವಿಗೊಳಿಸಬೇಕು.ರಮೇಶ ಜಾರಕಿಹೊಳಿ, ಶಾಸಕರು ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷಗೋಕಾಕ ಗ್ರಾಮ ದೇವತೆ ಜಾತ್ರೆಯ ಸಿದ್ಧತೆ ಪರಿಶೀಲಿಸಲಾಗಿದೆ. ನಮ್ಮ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿಕೊಂಡಿದ್ದು 2500 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಡಾ.ಭೀಮಾಶಂಕರ ಗುಳೇದ, ಪೊಲೀಸ್ ವರಿಷ್ಠಾಧಿಕಾರಿಗಳು ಬೆಳಗಾವಿ.
ಗ್ರಾಮ ದೇವತೆ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೆ ತೋದಂರೆ ಉಂಟಾಗದಂತೆ ನಗರಸಭೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರ್.ಎಸ್.ರಣಸೂಬೆ, ಪ್ರಭಾರ ಪೌರಾಯುಕ್ತರು ನಗರಸಭೆ ಗೋಕಾಕ