ಕೊಪ್ಪಳ:
ನಾನು ಹೇಳುತ್ತಿರುವುದು ಕೇವಲ ಮರಳು ಗಣಿಗಾರಿಕೆ ಕುರಿತು ಅಲ್ಲ, ಎಲ್ಲ ಗಣಿಗಾರಿಕೆಯಲ್ಲಿಯೂ ಶೇ. 90ರಷ್ಟು ಸಕ್ರಮವಾಗಿವಾಗಿಯೇ ಇವೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಜನರು ದುಡಿದು ತಿನ್ನುತ್ತಿರುವುದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಮರಳು ಗಣಿಗಾರಿಕೆ ವಿರುದ್ಧ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರಮವಹಿಸಿದೆ. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುತ್ತದೆ. ಹಾಗಂತ ಎಲ್ಲ ಗಣಿಗಾರಿಕೆಯೂ ತಪ್ಪು ಎಂದು ಹೇಳುವುದು ಸರಿಯಲ್ಲ. ಅಭಿವೃದ್ಧಿಯಾಗಬೇಕು ಎಂದರೇ ಗಣಿಗಾರಿಕೆಯೂ ಆಗಬೇಕು ಎಂದ ಅವರು, ಮರಳು ಹೇರುವಾಗ ಒಂದಿಷ್ಟು ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲೊಂದು ದೇವಸ್ಥಾನ ನಿರ್ಮಿಸಲಾಗುತ್ತಿದ್ದು ಅದಕ್ಕೆ ಮರಳು ಬೇಕೆಂದು ನಮಗೆ ಕರೆ ಮಾಡಿ ಕೇಳುತ್ತಾರೆ. ಆಗ ಕೊಡಬಾರದೆ ಎಂದು ಪ್ರಶ್ನಿಸಿದರು. ಇದು ಸೇರಿದಂತೆ ಇದರ ಹೆಸರಿನಲ್ಲಿ ಒಂದಷ್ಟು ಅಕ್ರಮ ನಡೆಯುತ್ತಿದ್ದರೇ ಅದನ್ನು ಅಧಿಕಾರಿಗಳು ತಡೆಯಲಿ. ಆದರೆ, ಇಡೀ ಗಣಿಗಾರಿಕೆಯೇ ಬೇಡ ಎನ್ನುವುದು ಸರಿಯಲ್ಲ ಎಂದರು.ಮರಳು ಸಾಗಾಟದ ಲಾರಿ, ಟ್ರ್ಯಾಕ್ಟರಿಗೆ ನನ್ನ ಸೇರಿದಂತೆ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಿಕೊಂಡರೇ ತಪ್ಪೇನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮರಳು ಸಾಗಾಟ ಸೇರಿದಂತೆ ಯಾವುದೇ ವಾಹನಕ್ಕೆ ನನ್ನ ಫೋಟೋ ಹಾಕಿಕೊಂಡು ಹೊಡೆಯುತ್ತಿದ್ದರೇ ಅದು ಅಭಿಮಾನದಿಂದ ಕಾರ್ಯಕರ್ತರು ಹಾಕಿಕೊಳ್ಳುತ್ತಿರಬಹುದು. ಆದರೆ, ಅವರು ಅಕ್ರಮವಾಗಿ ಮರಳು ಹೇರುತ್ತಿದ್ದರೇ ಅವರ ಮೇಲೆ ಕ್ರಮವಹಿಸಲಿ ಎಂದರು.