- ಯಕ್ಕನಹಳ್ಳಿಯಲ್ಲಿ ಅಭಿಯಾನಕ್ಕೆ ಚಾಲನೆ । ದೇಶದಲ್ಲಿಯೇ ಅತಿ ದೊಡ್ಡ ಪಕ್ಷ ಬಿಜೆಪಿ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸೋಮವಾರ ಹೊನ್ನಾಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನೋಂದಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಕ್ಕನಹಳ್ಳಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ಬಿಜೆಪಿ ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ಉತ್ತರಕ್ಕೆ 75 ಸಾವಿರ ಸದಸ್ಯತ್ವ ಗುರಿ ನೀಡಲಾಗಿದೆ. ಈ ಪೈಕಿ 21763 ಜನ ನೋಂದಣಿ ಆಗಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 60 ಸಾವಿರ ಗುರಿಯಿದ್ದು, 8433 ನೋಂದಣೆಯಾಗಿದೆ. ಮಾಯಕೊಂಡ ಕ್ಷೇತ್ರಕ್ಕೆ 60 ಸಾವಿರ ಗುರಿಯಿದ್ದು, 7198 ನೋಂದಣೆಯಾಗಿದೆ, ಚನ್ನಗಿರಿ ಕ್ಷೇತ್ರದಲ್ಲಿ 75 ಸಾವಿರ ಗುರಿಯಿದ್ದು, ಇದರಲ್ಲಿ 18,901 ಸದಸ್ಯತ್ವ ನೋಂದಣೆಯಾಗಿದೆ ಎಂದರು.ಅಂತೆಯೇ, ಹೊನ್ನಾಳಿ ಕ್ಷೇತ್ರದಲ್ಲಿ 60 ಸಾವಿರ ಗುರಿಯಿದ್ದು, 21534 ನೋಂದಣೆಯಾಗಿದೆ. ಹರಿಹರದಲ್ಲಿ 70 ಸಾವಿರ ಗುರಿಯಿದ್ದು, 4748 ನೋಂದಣೆಯಾಗಿದೆ. ಜಗಳೂರು ಕ್ಷೇತ್ರಕ್ಕೆ 60 ಸಾವಿರ ಗುರಿಯಿದ್ದು, ಇದರಲ್ಲಿ 9305 ನೋಂದಣೆಯಾಗಿದೆ ಎಂದು ಸದಸ್ಯತ್ವ ನೋಂದಣೆ ಅಂಕಿ -ಅಂಶಗಳ ಮಾಹಿತಿ ನೀಡಿದರು. ನೋಂದಣಿಗೆ ಅ.30ರವರೆಗೆ ಕಾಲಾವಕಾಶವಿದೆ. ಪಕ್ಷದ ಕಾರ್ಯಕರ್ತರು ಹೆಚ್ಚು ಶ್ರಮಹಾಕಿ ಬಿಜೆಪಿ ಸದಸ್ಯತ್ವ ನೋಂದಣಿ ಸಂಖ್ಯೆ ಹೆಚ್ಚಿಸಬೇಕಿದೆ ಎಂದು ತಿಳಿಸಿದರು.
- - -
-28ಎಚ್.ಎಲ್.ಐ1:ಯಕ್ಕನಹಳ್ಳಿಯಲ್ಲಿ ಸೋಮವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಗಾಯಿತ್ರಿ ಸಿದ್ದೇಶ್ವರ ಚಾಲನೆ ನೀಡಿ ಮಾತನಾಡಿದರು.