ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಶೇಕಡ 96.02 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ್ ತಿಳಿಸಿದ್ದಾರೆ.
ಅದೇ ರೀತಿ ದೇವನಹಳ್ಳಿ ಟೌನ್ ನ ಮತದಾನ ಕೇಂದ್ರದಲ್ಲಿ 496 ಮತದಾರ ಪೈಕಿ 465 ಮತ ಚಲಾಯಿಸಿದ್ದು ಶೇ.93.75 ರಷ್ಟು ಮತದಾನವಾಗಿದೆ. ಹೊಸಕೋಟೆ ಟೌನ್ ನ ಮತದಾನ ಕೇಂದ್ರದಲ್ಲಿ 563 ಮತದಾರರ ಪೈಕಿ 554 ಮತದಾರರು ಮತ ಚಲಾಯಿಸಿದ್ದು ಶೇ.98.40 ಮತದಾನವಾಗಿದೆ. ನೆಲಮಂಗಲ ಟೌನ್ ಮತದಾನ ಕೇಂದ್ರದಲ್ಲಿ 382 ಮತದಾರರ ಪೈಕಿ 368 ಮತದಾರರು ಮತ ಚಲಾಯಿಸಿದ್ದು ಶೇ.96.34 ಮತದಾನವಾಗಿದೆ. ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಮತದಾನ ಕೇಂದ್ರದಲ್ಲಿ 177 ಮತದಾರರ ಪೈಕಿ 171 ಮತ ಚಲಾಯಿಸಿದ್ದು ಶೇ.96.61 ಮತದಾನವಾಗಿದೆ.
ಒಟ್ಟಾರೆ 1163 ಪುರುಷರು, 1025 ಮಹಿಳೆಯರು ಸೇರಿ ಒಟ್ಟು 2188 ಶಿಕ್ಷಕ ಮತದಾರರು ಅಂತಿಮ ಪಟ್ಟಿಯಲ್ಲಿ ಇದ್ದು, ಅದರಲ್ಲಿ 1120 ಪುರುಷರು, 981 ಮಹಿಳೆಯರು ಸೇರಿ ಒಟ್ಟಾರೆ 2101 ಮತದಾರರು ಮತ ಚಲಾಯಿಸಿದ್ದಾರೆ ಎಂದು ವಿವರಿಸಿದ್ದಾರೆ.ಮತಕೇಂದ್ರಗಳ ಬಳಿ ಪ್ರಚಾರದ ಅಬ್ಬರ:
ಈಗ ಬದಲಾದ ರಾಜಕೀಯ ಮೇಲಾಟಗಳ ಪರಿಣಾಮ ಪುಟ್ಟಣ್ಣ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ವಿಧಾನಸಭೆ ಪ್ರವೇಶಿಸುವ ವಿಫಲ ಯತ್ನದ ಬಳಿಕ ಮತ್ತೊಮ್ಮೆ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗುವ ಆಕಾಂಕ್ಷೆಯಿಂದ ಕಾಂಗ್ರೆಸ್ ಪಕ್ಷದ ಬೆಂಬಲಿತ ಉಮೇದುವಾರರಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಾಧಿಸಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಎ.ಪಿ.ರಂಗನಾಥ್ ಅವರು ಮೈತ್ರಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ಬಾರಿ ಬಿಜೆಪಿ -ಜೆಡಿಎಸ್ ನಡುವೆಯೇ ಬಹುತೇಕ ಮತಗಳು ಹಂಚಿ ಹೋಗಿದ್ದವು ಎಂಬುದು ಇತಿಹಾಸ. ಈ ಬಾರಿ ಏನಾಗಲಿದೆ ಎಂಬುದರ ಕುರಿತ ಪ್ರಶ್ನೆಗೆ ಭಾನುವಾರ ಉತ್ತರ ದೊರೆಯಲಿದೆ.16ಕೆಡಿಬಿಪಿ4-
ದೊಡ್ಡಬಳ್ಳಾಪುರ ತಾಲೂಕು ಕಚೇರಿಯ ಮತಗಟ್ಟೆಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು.