ಕನ್ನಡಪ್ರಭ ವಾರ್ತೆ ಸಿಂದಗಿ

ಪಟ್ಟಣದ ಕೆಇಬಿ ಹಿಂದುಗಡೆ ವಾರ್ಡ್‌ ನಂ.12ರ ಶುಭಂ ಬಡಾವಣೆಯಲ್ಲಿ ನಗರಸಭೆಯ ಪೌರಾಯುಕ್ತರು ಹಾಗೂ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯದಿಂದ ಚರಂಡಿಯಲ್ಲಿ ಜೊಂಡು(ಪಾಚಿ) ಹುಲ್ಲು ಬೃಹದಾಕಾರವಾಗಿ ಬೆಳೆದು ಚರಂಡಿ ನೀರು ಹರಿದು ಹೋಗಲು ಆಗದೆ ಚರಂಡಿಯ ನೀರು, ಮಳೆ ನೀರು ಶೇಖರಣೆಗೊಂಡು ನೀರು ಖಾಲಿ ನಿವೇಶನಗಳ ಮೇಲೆ ನಿಂತು ಕೆರೆಯಂತಾಗಿವೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆ ಕಾಟ ವಿಪರೀತವಾಗಿದೆ. ವೃದ್ಧರಿಗೆ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಭೀತಿ ಕಾಡುತ್ತಿದೆ. ಕೂಡಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಜರುಗಿಸಬೇಕು ಎಂದು ನಿವಾಸಿಗಳಾದ ಅರುಣ ಹಿರೇಮಠ, ಶಾಂತು ಶಿವಶಿಂಪಿಗೇರ, ಮಹೇಶ ದುತ್ತರಗಾಂವಿ, ಕುಮಾರ ದ್ಯಾಬೇರಿ , ಮಹೇಶ ತೆಗ್ಗಳ್ಳಿ ಒತ್ತಾಯಿಸಿದ್ದಾರೆ.