ಕನ್ನಡಪ್ರಭ ವಾರ್ತೆ ಬೀಳಗಿಬಿಡದಿ ರೈತರಿಗೆ ಸಿಕ್ಕ ಈ ನ್ಯಾಯವನ್ನು ನಾನು ಸ್ವಾಗತಿಸುತ್ತೇವೆ. ಆದರೆ, ಅದೇ ನ್ಯಾಯ ಕೃಷಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ನಮ್ಮ ಉತ್ತರ ಕರ್ನಾಟಕ ರೈತರಿಗೆ ಏಕೆ ಸಿಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ ?.

ಕನ್ನಡಪ್ರಭ ವಾರ್ತೆ ಬೀಳಗಿ

ಬಿಡದಿ ರೈತರಿಗೆ ಸಿಕ್ಕ ಈ ನ್ಯಾಯವನ್ನು ನಾನು ಸ್ವಾಗತಿಸುತ್ತೇವೆ. ಆದರೆ, ಅದೇ ನ್ಯಾಯ ಕೃಷಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ನಮ್ಮ ಉತ್ತರ ಕರ್ನಾಟಕ ರೈತರಿಗೆ ಏಕೆ ಸಿಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ ?.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಸರ್ಕಾರ ಎರಡೂ ಕಣ್ಣಿನ ನೀತಿ ಅನುಸರಿಸುತ್ತಿದೆ. ರಾಮನಗರ ಜಿಲ್ಲೆಯ ಬಿಡದಿ ಸ್ಮಾರ್ಟ ಸಿಟಿ ಟೌನ್ ಶಿಪ್ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸರ್ಕಾರ ಇತ್ತೀಚಿಗೆ ಅತ್ಯಂತ ಆಕರ್ಷಕ ಹಾಗೂ ವೈಜ್ಞಾನಿಕ ಭೂ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಅಲ್ಲಿನ ರೈತರಿಗೆ ಮಾರುಕಟ್ಟೆ ದರಕ್ಕೆಅನುಗುಣವಾಗಿ ಕೋಟ್ಯಾಂತರ ರೂಪಾಯಿ ಪರಿಹಾರ ಅಥವಾ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ (ಟಿಡಿಆರ್ ಪ್ಲಾಟ್ ಶೇರಿಂಗ್) ಸಮಾನ ಪಾಲು ನೀಡಲಾಗುತ್ತಿದೆ. ಯಾಕೆ ತಾರತಮ್ಯ ಎಂದು ಪ್ರಶ್ನಿಸಿದ್ದಾರೆ.

ಪ್ರಸ್ತುತ 2026ರ ಚಾಲ್ತಿ ಮಾರುಕಟ್ಟೆ ದರದ ಮೇಲೆ ಹಾಗೂ ಹೊಸ ಭೂ ಸ್ವಾಧೀನಕಾಯ್ದೆಯ (2013ರ ಕಾಯ್ದೆ) ಅನ್ವಯ 3-4 ಪಟ್ಟು ಹೆಚ್ಚಿನ ಪರಿಹಾರ ನೀಡಬೇಕೆಂಬುವುದು ಕಾನೂನಿನಲ್ಲಿದೆ ಎಂದರು. ಈಗಾಗಲೇ ಸರ್ಕಾರ ಒಪ್ಪಿಗೆ ಐತೀರ್ಪಿನ ಪ್ರಕಾರ 2025ರಲ್ಲಿ ನೀರಾವರಿಗೆ ₹ 40 ಲಕ್ಷ ಒಣಬೇಸಾಯಕ್ಕೆ ₹ 30 ಲಕ್ಷ ಘೋಷಣೆಯಾಗಿದೆ. ಹಾಗೂ ಕಾಲುವೆ ಇತ್ಯಾದಿ ಸ್ವಾಧೀನಕ್ಕಾಗಿ ನೀರಾವರಿಗೆ ₹ 30 ಲಕ್ಷ ಒಣಬೇಸಾಯಕ್ಕೆ ₹ 25 ಲಕ್ಷ ಘೋಷಣೆಯನ್ನು ರೈತರೂ ಸ್ವಾಗತಿಸಿದರು. ಸಹ ಸರ್ಕಾರ ಪರಿಹಾರ ನೀಡುವುದರಲ್ಲಿ ಹಿಂದೇಟು ಹಾಕುತ್ತಿದೆ. ಪ್ರತಿ ವರ್ಷವೂ ಕೂಡ ಈ ಒಪ್ಪಿಗೆ ಬೆಲೆಗೆ ಶೇ.10ರಷ್ಟು ಹೆಚ್ಚುವರಿ ಪರಿಹಾರಧನ (ಎಕ್ಷಗ್ರೇಷಿಯಾ)ವನ್ನು ಪ್ರತಿ ವರ್ಷ ಹೆಚ್ಚಿಸಬೇಕೆಂದು ಆಗ್ರಹಿಸಿದ್ದರೂ ಸಹ ಇಲ್ಲಿಯ ವರೆಗೂ ಜಾರಿ ಮಾಡಿರುವುದಿಲ್ಲ ಎಂಬುವುದನ್ನು ಸರ್ಕಾರ ಮನಗಾಣಬೇಕು. ಕೂಡಲೇ ಇದು ಘೋಷಣೆ ಆಗಬೇಕಿದೆ ಎಂದರು.

2025ರ ಸಚಿವ ಸಂಪುಟ ಸಭೆಯಲ್ಲಿಯೂ ಪ್ರತಿ ವರ್ಷ ₹ 18 ಸಾವಿರ ಕೋಟಿಗಳಂತೆ 4 ವರ್ಷಗಳ ಕಾಲ ಪರಿಹಾರ ನೀಡಿ ಈ ಯೋಜನೆಯನ್ನುಅಂದಾಜು ₹ 75 ಸಾವಿರ ಕೋಟಿ ನೀಡಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, 2026 ರ ಮಾರ್ಚ ನಲ್ಲಿ ಮುಖ್ಯಮಂತ್ರಿಗಳು ಮಂಡಿಸಿದ ಆಯವ್ಯಯದಲ್ಲಿ ಒದಗಿಸಿದ ಅನುದಾನ ಕೇವಲ ₹ 3 ಸಾವಿರ ಕೋಟಿ ಮಾತ್ರ. ಆದ್ದರಿಂದ ಸರ್ಕಾರವು ಸಂಪೂರ್ಣ ಪರಿಹಾರಧನ ಒದಗಿಸಲು ಸಂತ್ರಸ್ತರಿಗೆ ನೀಡಿದ ಆಶ್ವಾಸನೆಯಂತೆ ಹಾಗೂ ದಿನಾಂಕ 16.9.2025ರ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ: ಸಿ774/2025ರಲ್ಲಿ ನೀಡಿರುವ ನಿರ್ಣಯದಂತೆ/ನಿರ್ಧರಿಸಿದಂತೆ ಇದಕ್ಕೆ ಹೆಚ್ಚುವರಿಯಾಗಿ ಅನುದಾನ ಒದಗಿಸುವಂತೆ ಆಗ್ರಹಿಸಿದರು.

ಕೇವಲ ನಗದು ಹಣ ನೀಡಿ ಕೈತೊಳೆದುಕೊಂಡರೆ ಸಾಲದು ಕೃಷ್ಣಾ ನದಿ ಪಾತ್ರದ ಅತ್ಯಂತ ಫಲವತ್ತಾದ ನೀರಾವರಿ ಜಮೀನನ್ನು ಕಳೆದುಕೊಂದ ರೈತ ಕುಟುಂಬಗಳಿಗೆ ಪರ್ಯಾಯವಾಗಿ ಕೃಷಿ ಭೂಮಿ ನೀಡಬೇಕು ಸಂತ್ರಸ್ತರ ಪುನರ್ ವಸತಿ ಕೇಂದ್ರಗಳಲ್ಲಿ ರಸ್ತೆ, ಕುಡಿಯುವ ನೀರು, ಶಾಲೆ, ಆಸ್ಪತ್ರೆ ಮತ್ತು ವಿದ್ಯುತ್‌ನಂತಹ ಮೂಲಸೌಕರ್ಯಗಳನ್ನು ಕೂಡಲೇ ಒದಗಿಸಬೇಕೆಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಯೋಜನೆ ಅನುಷ್ಠಾನಕ್ಕೆ ಬೇಕಾಗುವ ಒಟ್ಟು 1,33,867 ಎಕರೆ ಜಮೀನು ಕ್ಷೇತ್ರದಲ್ಲಿ 29,556 ಎಕರೆ ಪ್ರದೇಶಕ್ಕೆಅವಾರ್ಡ್ ಮಾಡಲಾಗಿದ್ದು. ಈ ಪೈಕಿ 28,499 ಎಕರೆ ಜಮೀನುಗಳಿಗೆ ಹೆಚ್ಚಿನ ಭೂ ಪರಿಹಾರಕೋರಿ (ತ್ರೈಲ್‌ಕೋರ್ಟ) ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಮತ್ತು ಕಲಬುರ್ಗಿ ಪೀಠ ಹಾಗೂ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಅಂದಾಜು 28,338 ಪ್ರಕರಣಗಳು ದಾಖಲಾಗಿರುತ್ತವೆ. ಸದರಿ ಪ್ರಕರಣಗಳಲ್ಲಿ ಸುಮಾರು 10-15 ವರ್ಷಗಳಿಂದ ವ್ಯಾಜ್ಯ ಮಾಡಿ ಇತ್ತೀಚಿಗೆ ನ್ಯಾಯಾಲಯಗಳಲ್ಲಿ ಆದೇಶವಾದಂತಹ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ಭೂ ಪರಿಹಾರ ವಿತರಿಸಲು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಬಿಡದಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬಗಳ ಯುವಕರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗದ ಭರವಸೆ ನೀಡಲಾಗಿದೆ. ಅದೇ ಮಾದರಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ತ್ಯಾಗ ಮಾಡಿದ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ಅಥವಾ ಶಾಶ್ವತ ಜೀವನೋಪಾಯದ ಭತ್ಯೆ ನೀಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯು ಇಡೀ ಕರ್ನಾಟಕದ ಪಾಲಿಗೆ ಅಮೃತಧಾರೆ ಒದಗಿಸುವ ಯೋಜನೆ ವಿಜಯಪುರ ಬಾಗಲಕೋಟೆ, ಯಾದಗಿರಿ, ಕಲಬುರ್ಗಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳ ಲಕ್ಷಾಂತರ ಎಕರೆ ಜಮೀನುಗಳಿಗೆ ನೀರುಣಿಸುವ ಈ ಯೋಜನೆಗೆ ಭೂಮಿಕೊಟ್ಟ ರೈತರೂ ಇಂದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ದೇಶದ ಅನ್ನದಾತರನ್ನೂ ಭೀಕ್ಷುಕುರನ್ನಾಗಿ ಮಾಡಬೇಡಿ ಬಿಡದಿ ಟೌನ್ ಶಿಪ್ ಮಾದರಿಯಲ್ಲಿ ಕೃಷ್ಣಾ ಮೇಲ್ದಂಡೆ ಸಂತ್ರಸ್ತರಿಗೂ ವಿಶೇಷ ಆರ್ಥಿಕ ಪ್ಯಾಕೇಜ್ ಘೋಶಿಸಬೇಕೆಂದು ಆ ಭಾಗದ 7 ಜಿಲ್ಲೆಗಳಿಂದ ಭೂಮಿ, ಮನೆ, ಮಠ ತಮ್ಮ ಸರ್ವಸ್ವವನ್ನು ಕಳೆದುಕೊಂಡು ರೈತಕುಟುಂಬಗಳ ಹಾಗೂ ಸಂತ್ರಸ್ತರ ಪರವಾಗಿ ಸರ್ಕಾರವನ್ನು ಆಗ್ರಹಿಸಿದರು.ಬಿಡದಿ ಟೌನ್ ಶಿಪ್ ಗೆ (ಲ್ಯಾಂಡ್ ಪಾರ್ ಲ್ಯಾಂಡ್) ಅಥವಾ ಹೆಚ್ಚಿನ ಮಾರುಕಟ್ಟೆದರ ಪರಿಹಾರ ನೀಡಲಾಗಿದೆಯೋ, ಅದೇ ಮಾದರಿಯನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಯುಕೆಪಿ ಸಂತ್ರಸ್ತರಿಗೂ ಅನ್ವಯಿಸಬೇಕು. ರಾಜ್ಯದಲ್ಲಿ ಭೂಮಿ ಕಳೆದುಕೊಳ್ಳುವ ಪ್ರತಿಯೊಬ್ಬ ರೈತನೂ ಒಂದೇ ಬೆಂಗಳೂರು ಸುತ್ತಮುತ್ತಲಿನ ರೈತನಿಗೊಂದು ನ್ಯಾಯ ಉತ್ತರ ಕರ್ನಾಟಕದ ರೈತರಿಗೊಂದು ನ್ಯಾಯ ಇರಬಾರದು. ಪ್ರಸ್ತುತ ಮಾರುಕಟ್ಟೆ ದರದ ಅನ್ವಯ ಯುಕೆಪಿ ಯೋಜನೆಯಡಿ ಹತ್ತಾರು ವರ್ಷಗಳ ಹಿಂದೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಕಾಯ್ದೆ ಅಥವಾ ಹಳೆಯ ದರಗಳ ಪ್ರಕಾರ ನೀಡಲಾಗುತ್ತಿರುವ ಅತ್ಯಲ್ಪ ಪರಿಹಾರ ಹಣದಿಂದ ರೈತರೂ ಬೇರೆಕಡೆ ಕೇವಲ ಒಂದು ಗುಂಟೆ ಭೂಮಿ ಖರೀದಿಸಲು ಸಾಧ್ಯವಾಗುತ್ತಿಲ್ಲ.

-ಹಣಮಂತ ನಿರಾಣಿ, ವಿಧಾನ ಪರಿಷತ್‌ ಸದಸ್ಯ