ರುದ್ರೇಶ್ ಹೊನ್ನೇನಹಳ್ಳಿ
ನೆಲಮಂಗಲ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಮಹತ್ವದ ಬೆಳೆ ಸಮೀಕ್ಷೆ ಕಾರ್ಯವು ಭರದಿಂದ ಸಾಗಿದ್ದು, ಈಗಾಗಲೇ ಶೇ.98ರಷ್ಟು ಪ್ರಗತಿ ಸಾಧಿಸುವ ಮೂಲಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ತಾಲೂಕಿನಾದ್ಯಂತ ಒಟ್ಟು 1,33,888 ಜಮೀನುಗಳನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ ಕೇವಲ ಕೆಲವೇ ದಿನಗಳಲ್ಲಿ 1,31,176 ಜಮೀನುಗಳ ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಇನ್ನುಳಿದ ಕೇವಲ ಶೇ.2ರಷ್ಟು (2,712 ಜಮೀನುಗಳು) ತಾಂತ್ರಿಕ ದೋಷ ಅಥವಾ ಮಾಲೀಕರ ಅಲಭ್ಯತೆಯಿಂದ ಬಾಕಿ ಉಳಿದಿದೆ.ನಾಲ್ಕು ಪ್ರಮುಖ ಇಲಾಖೆಗಳ ಜಂಟಿ ಕಾರ್ಯಾಚರಣೆ:
ಕ್ಷೇತ್ರದಲ್ಲಿ ಶ್ರಮಿಸಿದ 161 ಸಿಬ್ಬಂದಿ:
ರೈತರಿಂದಲೇ ಸ್ವಯಂ ಸಮೀಕ್ಷೆ :
ಪ್ರಸ್ತುತ ಬಾಕಿ ಉಳಿದಿರುವ ಸುಮಾರು 2712 ಜಮೀನುಗಳಿಗೆ ಕೆಲವು ಜಮೀನುಗಳಲ್ಲಿ ನೆಟ್ ವರ್ಕ್ ಸಮಸ್ಯೆ ಅಥವಾ ಜಮೀನಿನ ಗಡಿ ಗುರುತಿಸುವಲ್ಲಿ ತಾಂತ್ರಿಕ ತೊಂದರೆ ಇರುವ ಕಾರಣ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ.
ಸೋಲೂರು ಹೋಬಳಿಯು ಶೇ.99.10ರಷ್ಟು ಪ್ರಗತಿಯೊಂದಿಗೆ ತಾಲೂಕಿನಲ್ಲೇ ಮುಂಚೂಣಿಯಲ್ಲಿದೆ. ಉಳಿದಂತೆ ಕಸಬಾ (ಕಸಬಾ-1: ಶೇ.97.47, ಕಸಬಾ-2: ಶೇ.99.30), ತ್ಯಾಮಗೊಂಡ್ಲು (ತ್ಯಾಮಗೊಂಡ್ಲು-1: ಶೇ.98.31, ತ್ಯಾಮಗೊಂಡ್ಲು-2: ಶೇ.98.21) ಹಾಗೂ ಸೋಂಪುರ (ಸೋಂಪುರ-1: ಶೇ.96.86, ಸೋಂಪುರ-2: ಶೇ.95.93) ಹೋಬಳಿಗಳು ಭರ್ಜರಿ ಪ್ರಗತಿ ದಾಖಲಿಸಿವೆ.
ನೆಲಮಂಗಲ ತಾಲೂಕಿನಲ್ಲಿ ನಾಲ್ಕು ಇಲಾಖೆಗಳ ಸಮನ್ವಯತೆ ಹಾಗೂ ರೈತರ ಸಹಕಾರದಿಂದ ಬೆಳೆ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಶೇ.98ರಷ್ಟು ಮುಕ್ತಾಯಗೊಂಡಿದೆ. ಈ ಸಮೀಕ್ಷೆಯ ದತ್ತಾಂಶಗಳು ಅತ್ಯಂತ ಪಾರದರ್ಶಕವಾಗಿದ್ದು, ಮುಂಬರುವ ದಿನಗಳಲ್ಲಿ ಅರ್ಹ ರೈತರಿಗೆ ಸರ್ಕಾರದ ಯೋಜನೆಗಳು ತಲುಪಲು ಆಧಾರವಾಗಲಿದೆ. ರೈತರು ತಾಂತ್ರಿಕ ತೊಂದರೆಗಳಿದ್ದಲ್ಲಿ ತಕ್ಷಣವೇ ಸ್ಥಳೀಯ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ತಾಲೂಕು ಕೃಷಿ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ನೆಲಮಂಗಲ.
ಕೃಷಿ ಇಲಾಖೆ ರೈತರ ಬೆಳೆ ಸಮೀಕ್ಷೆ ಆ್ಯಪ್ ಮಾಡಿರುವುದು ಸ್ವಾಗತಾರ್ಹ, ಕಳೆದ ಬಾರಿ ಸಾಕಷ್ಟು ರೈತರು ರಾಗಿ ಬಿತ್ತನೆ ಮಾಡಿದ್ದರು. ಬೆಳೆ ಸಮೀಕ್ಷೆ ಮಾಡದಿರುವ ಹಿನ್ನೆಲೆಯಲ್ಲಿ ಪಹಣಿ ಪತ್ರದಲ್ಲಿ ಬೆಳೆ ದಾಖಲೀಕರಣ ಆಗಿರಲಿಲ್ಲ. ಇದರಿಂದ ಸರ್ಕಾರದ ಖರೀದಿ ಕೇಂದ್ರದಲ್ಲಿ ಕೆಲ ರೈತರು ತಾವು ಬೆಳೆದ ಬೆಳೆಯ ಮಾರಾಟಕ್ಕೆ ಅವಕಾಶವೇ ಸಿಗಲಿಲ್ಲ. ಇದು ಸರ್ಕಾರಿ ಸೌಲಭ್ಯ ಪಡೆಯಲು ಸುಲಭ ಮಾರ್ಗವಾಗಿದೆ.
ಉಮೇಶ್, ರೈತಗಂಗೇನಪುರ