100 ಮೀಟರ್ ರಸ್ತೆಯಲ್ಲಿ ನೂರಾರು ಗುಂಡಿಗಳದ್ದೇ ಸಾಮ್ರಾಜ್ಯ

KannadaprabhaNewsNetwork |  
Published : Oct 28, 2025, 12:03 AM IST
ಚಿತ್ರ 27ಬಿಡಿಆರ್51 | Kannada Prabha

ಸಾರಾಂಶ

100 ಮೀಟರ್ ರಸ್ತೆಯಲ್ಲಿ ನೂರಾರು ಗುಂಡಿಗಳ ಸಾಮ್ರಾಜ್ಯ ಸೃಷ್ಟಿಯಾಗಿದ್ದು ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

ಹುಮನಾಬಾದ್: 100 ಮೀಟರ್ ರಸ್ತೆಯಲ್ಲಿ ನೂರಾರು ಗುಂಡಿಗಳ ಸಾಮ್ರಾಜ್ಯ ಸೃಷ್ಟಿಯಾಗಿದ್ದು ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

ಹೌದು ಇತ್ತೀಚೆಗೆ ಸುರಿದ ಭಾರಿ ಮಳೆಗೆ ಗುಂಡಿಗಳು ಹೆಚ್ಚಾಗಿ ಗುಂಡಿಗಳ ನಡುವೆ ರಸ್ತೆ ಹುಡುಕುವಂತಾಗಿದೆ. ಬೈಕ್ ಸವಾರರು, ಕಾರು, ಭಾರಿ ವಾಹನ ಚಾಲಕರು ಪ್ರಾಣ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಸ್ಥಿತಿ ಎದುರಾಗಿದೆ ಎಂದರೆ ತಪ್ಪಾಗಲಾರದು.

ತಾಲೂಕಿನ ಘಾಟಬೋರಳ-ರಾಜೋಳಾ ಮಾರ್ಗದ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ ರಸ್ತೆಯ ಡಾಂಬರು ಕಿತ್ತು ಹೋಗಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದ್ದು. ಘೋಡವಾಡಿ, ಹುಣಸನಾಳ, ಘಾಟಬೋರಳ ಗ್ರಾಮಸ್ಥರು ಪ್ರತಿ ನಿತ್ಯ ಹುಮನಾಬಾದ ಪಟ್ಟಣಕ್ಕೆ ಕೆಲಸಕ್ಕೆ ಬರುವ ಈ ಮಾರ್ಗವಾಗಿದೆ. ಅಲ್ಲದೇ ಪ್ರತಿ ಗುರುವಾರ, ಶುಕ್ರವಾರ ಘೋಡವಾಡಿಯ ಇಸ್ಮಾಯಿಲ್ ಖಾದ್ರಿ ದರ್ಗಾ ದರ್ಶನ, ಹರಕೆ ತಿರಿಸಲು ವಿವಿಧ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಮಾರ್ಗದಲ್ಲೆ ಸಂಚರಿಸುತ್ತಾರೆ.

ಇದೀಗ ಗುಂಡಿಗಳು ಹೆಚ್ಚಾಗಿದ್ದು, ಬಲಿಗಾಗಿ ಕಾಯುತ್ತಿವೆ. ಪ್ರತಿ ನಿತ್ಯ ಒಂದಿಲ್ಲೊಂದು ಅಪಘಾತಕ್ಕೆ ಕಾರಣವಾಗುತ್ತಿವೆ. ಆದರೆ ಲೋಕಪಯೋಗಿ ಇಲಾಖೆ ಮಾತ್ರ ಈ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲು ಮುಂದಾಗುತ್ತಿಲ್ಲ.

ಜನ ಪ್ರತಿನಿದಿಗಳು ಸಹಿತ ಇತ್ತ ಗಮನಹರಿಸುತ್ತಿಲ್ಲ. ಸಂಬಂಧಿತ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ ಎಂದು ಘಾಟಬೋರಳ, ಘೋಡವಾಡಿ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ. ----

ಘೋಡವಾಡಿ, ಘಾಟಬೋರಳ ಸೇರಿದಂತೆ ಸಾಕಷ್ಟು ವಾಹನ ಸವಾರರು ಸರ್ಕಸ್ ಮಾಡಿಕೊಂಡು ಸಂಚಾರ ಮಾಡುತ್ತ ಸಾಗುತ್ತಿದ್ದಾರೆ. ರಾತ್ರಿ ವೇಳೆ ಗುಂಡಿಗಳು ಕಾಣದೇ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಲಾದರು ಅಧಿಕಾರಿಗಳು ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು

-ಜ್ಞಾನೇಶ್ವರ ಭೊಸ್ಲೆ, ಘಾಟಬೋರಳ ಗ್ರಾಮದ ಮುಖಂಡ.

ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದಿದ್ದು, ವಾಹನ ಸವಾರರು ರಸ್ತೆಗಳಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ. ರಾತ್ರಿ ಸಂದರ್ಭದಲ್ಲಿ ಗರ್ಭೀಣಿಯರು ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಹುಮನಾಬಾದ ಪಟ್ಟಣಕ್ಕೆ ರಾಜೋಳ ಮಾರ್ಗದಿಂದಲ್ಲೆ ಹೋಗಬೇಕಾದರೆ. ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಗಮನಿಸಿ ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು.

-ರಂಜಿತ ಮಾನಕರೆ, ಘಾಟಬೋರಳ ಗ್ರಾಮದ ಸಾಮಾಜಿಕ ಕಾರ್ಯಕರ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!