ಯಾದಗಿರಿ: ವಾಲ್ಮೀಕಿ ಸಮಾಜದ ಪ್ರತಿಯೊಬ್ಬರೂ ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆಯಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ಟಿ.ಅರ್.ತುಲಸಿರಾಮ ಹೇಳಿದರು.
ಸರ್ಕಾರ ನೀಡಿರುವ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಂಡು ಹೆಚ್ಚಿನ ಅಂಕಗಳನ್ನು ಪಡೆದು ಪಾಸಾಗಬೇಕು. ಆ ಮೂಲಕ ಉನ್ನತ ಹುದ್ದೆಗಳನ್ನು ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಋಣ ತೀರಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ರಾಜಕೀಯವಾಗಿ ಅಧಿಕಾರ ಸಿಕ್ಕಾಗ ಮಾತ್ರ ಸಮಾಜಕ್ಕೆ ವಿವಿಧ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ಒಗ್ಗಟ್ಟು ಇರಬೇಕು. ಬೇರೆ ಎಲ್ಲ ಸಮುದಾಯಗಳನ್ನು ಪ್ರೀತಿಯಿಂದ ಕಾಣುವ ಮೂಲಕ ಸಮಾಜದ ಸಂಘಟನೆ ಮಾಡಬೇಕು ಎಂದರು.ಉತ್ತರ ರಾಜ್ಯಾಧ್ಯಕ್ಷರಾದ ಮರೆಪ್ಪ ನಾಯಕ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗಲು ಅಕ್ಷರ ಜ್ಞಾನವೇ ಮೊದಲ ಮೆಟ್ಟಿಲು. ಕಾರಣ, ವಿದ್ಯಾರ್ಥಿ ಜೀವನದಲ್ಲಿ ಬೇರೆ ಏನ್ನನ್ನೂ ಮಾಡದೇ ಕೇವಲ ಓದಿಗಾಗಿ ಸಮಯ ಮಿಸಲಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಅಹಿಂದ ಘಟಕದ ಅಧ್ಯಕ್ಷ ಹಣಮೇಗೌಡ ಬಿರನಕಲ್ ಮಾತನಾಡಿದರು.
ಶ್ರೀಧರ ಪಾಟೀಲ್, ಭೀಮರಾಯ ಠಾಣಾಗುಂದಿ, ಹಸಿರು ಸೇವೆ ರಾಜ್ಯ ಉಪಾಧ್ಯಕ್ಷ ಕಾಂತು ಪಾಟೀಲ್, ಎಸ್.ಎಸ್.ನಾಯಕ, ಬಿಜೆಪಿ ಯುವ ಘಟಕದ ಅಧ್ಯಕ್ಷ ಶ್ರೀಧರ್ ಸಾಹುಕಾರ, ಸುರಪುರ ತಾಲೂಕು ಮರೆಪ್ಪ ಪ್ಯಾಟಿ, ರಮೇಶ ದೊರೆ, ಜಿಲ್ಲಾಧ್ಯಕ್ಷ ಬಿ.ಬಿ.ನರಸಪ್ಪ ನಾಯಕ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ ನಾಯಕ, ನಗರಸಭೆ ಸದಸ್ಯ ಹಣಮಂತ ನಾಯಕ, ಮಹಾವೀರ ನಾಯಕ, ಸಮಾಜ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ, ಬಸಲಿಂಗಪ್ಪ ಹುಲಕಲ್, ಬಸವರಾಜ ನೀಲಹಳ್ಳಿ, ಎಸ್.ಎಸ್.ನಾಯಕ, ಜನಾರ್ಧನ ನಾಯಕ, ಸುಭಾಶನಾಯಕ, ಜನಾರ್ಧನ, ಬಸವರಾಜ ನೀಲಹಳ್ಳಿ, ಮೋನಪ್ಪ ಹಳಿಗೇರಿ, ಆಂಜನಯ್ಯ ಮಲ್ಹಾರ್, ಹಣಮಂತ ಖಾನಳ್ಳಿ ಇದ್ದರು.