ಕಳಪೆ ಕಾಮಗಾರಿ ಎನ್ನುವ ಬಿಜೆಪಿಗರಿಗೆ ತಿರುಗೇಟು

KannadaprabhaNewsNetwork | Published : Aug 13, 2024 12:56 AM

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರ ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಬಿಜೆಪಿ ಮುಖಂಡರು ಕಳಪೆ ಕಾಮಗಾರಿ ಎಂದು ಹೇಳುತ್ತಿರುವುದು ಎಷ್ಟು ಸಮಂಜಸ ಎಂದು ಬಿಡಿಡಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಪ್ರಶ್ನಿಸಿದರು. ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಧಿಕಾರ ಅವಧಿಯಲ್ಲಿ ಲೋಕಾಪುರ ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೇ ತರಾತುರಿಯಲ್ಲಿ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಬಿಜೆಪಿ ಮುಖಂಡರು ಕಳಪೆ ಕಾಮಗಾರಿ ಎಂದು ಹೇಳುತ್ತಿರುವುದು ಎಷ್ಟು ಸಮಂಜಸ ಎಂದು ಬಿಡಿಡಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಪ್ರಶ್ನಿಸಿದರು. ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಧಿಕಾರ ಅವಧಿಯಲ್ಲಿ ಲೋಕಾಪುರ ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೇ ತರಾತುರಿಯಲ್ಲಿ ಉದ್ಘಾಟಿಸಲಾಯಿತು. ಇದು ಎಷ್ಟು ಸರಿ ಎಂಬುದನ್ನು ಅರಿಯಬೇಕು. ಎಂದಿದ್ದಾರೆ.ಮಾಜಿ ಉಪಮುಖ್ಯಮಂತ್ರಿಗಳಿದ್ದಾಗಲೇ ಟೆಂಡರ್‌ ಕರೆದು ನೀವೇ ಕಾಮಗಾರಿಗಳನ್ನು ಪ್ರಾರಂಭ ಮಾಡಿದ್ದೀರಿ. ನೀವು ಗುತ್ತಿಗೆ ಕೊಟ್ಟ ಗುತ್ತಿಗೆದಾರರೇ ಕಳಪೆ ಕಾಮಗಾರಿ ಮಾಡಿದ್ದರೆ ನಮ್ಮ ಮೇಲೆ ಯಾಕೆ ಗೂಭೆ ಕೂರಿಸುತ್ತೀರಿ. ನಿಮಗೆ ಇದರಲ್ಲಿ ಎಷ್ಟು ಪರ್ಸೆಂಟ್‌ ಕಮೀಷನ್‌ ಸಿಕ್ಕಿಗೆ ಎಂಬುದನ್ನು ತಿಳಿಸಬೇಕು. ಬಾಗಲಕೋಟ ರಸ್ತೆಯ ಕೆನರಾ ಬ್ಯಾಂಕ್‌ ಮುಂದೆ ನಡೆದ ಕಾಮಗಾರಿಯೇ ಸಾಕ್ಷಿ, ಒಂದುವರೆ ವರ್ಷವಾದರೂ ಕಾಮಗಾರಿಯೇ ಮುಗಿದಿಲ್ಲವೆಂದರೆ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.ಕಾಂಗ್ರೆಸ್‌ ಮುಖಂಡ ಸುಭಾಸ ಗಸ್ತಿ ಮಾತನಾಡಿ, ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಿಮ್ಮ ಕಾರ್ಯಕರ್ತರೇ, ವಿರೋಧ ವ್ಯಕ್ತಪಡಿಸದಿದ್ದರೆ ಬಾಗಲಕೋಟ- ಮುಧೋಳ ರಸ್ತೆ ಅಪೂರ್ಣವಾಗಿ ಯಾಕೆ ಉಳಿಯುತ್ತಿತ್ತು. ಇದರ ಬಗ್ಗೆ ಎಲ್ಲರಿಗೂ ತಿಳಿದೆ ಎಂದರು.ಯುವ ಮುಖಂಡ ಗುರುರಾಜ ಉದಪುಡಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಬಂದುಕ ಕೇವಲ ಒಂದೂವರೆ ವರ್ಷವಾಯಿತು. ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಭೂಮಿ ಪೂಜೆ ಮಾಡಿ, ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ನಗರೋತ್ಥಾನ ಹಂತ ೪ರಲ್ಲಿ ಎಸ್ಸಿ ಕಾಲೋನಿಯಲ್ಲಿ ₹ 18.99 ಲಕ್ಷದಲ್ಲಿ ಸಮುದಾಯ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ₹ ೧೧ ಲಕ್ಷ, ಪ.ಪಂ ಜನಾಂಗದವರಿಗೆ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ₹ ೧೭.೭೨ ಲಕ್ಷ, ವೆಂಕಟಾಪುರದಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ₹ ೧೮.೪೯ ಲಕ್ಷ, ಡಿಎಂಎಫ್ ಫಂಡ್ ವಿಶೇಷ ಅನುದಾನದಲ್ಲಿ ಕುಡಿಯುವ ನೀರು ಹಾಗೂ ಇತರೆ ಕಾಮಗಾರಿಗಳಿಗೆ ₹ ೧ ಕೋಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಹಿತಿಯನ್ನು ನೀಡಿದರು.ಗೋವಿಂದಪ್ಪ ಕೌಲಗಿ ಮಾತನಾಡಿ, ೨೦ ವರ್ಷಗಳ ಕಾಲ ಶಾಸಕರಾಗಿ ವಿವಿಧ ಇಲಾಖೆಗಳಲ್ಲಿ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಕಾರಜೋಳ ಸಾಹೇಬರು, ಲೋಕಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.ಈ ವೇಳೆ ಪಿಕೆಪಿಎಸ್ ಮಾಜಿ ಅಧ್ಯಕ್ಷ ಆನಂದ ಹಿರೇಮಠ, ಕೆಎಂಎಫ್ ನಿರ್ದೇಶಕ ಲಕ್ಷ್ಮಣ ಮಾಲಗಿ, ಸುರೇಶ ಸಿದ್ದಾಪುರ, ಮುತ್ತಪ್ಪ ಗಡ್ಡದವರ, ರವಿ ರೊಡ್ಡಪ್ಪನವರ, ಕೃಷ್ಣಾ ಹೂಗಾರ, ಮುತ್ತಪ್ಪ ಚೌಧರಿ, ಅಬ್ದುಲ್ ರೆಹೆಮಾನ್ ತೊರಗಲ್ ಮುಂತಾದವರು ಇದ್ದರು.

----------------------------------ಕೋಟ್‌

ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುವುದಾಗಿ ಹೇಳಿದ್ದೀರಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಮಾಡಬೇಕಾಗಿದ್ದ ಕೆಲಸವನ್ನು ಬೇಗನೆ ಮಾಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು. ಅದನ್ನು ಬಿಟ್ಟು ಮಿನಿ ವಿಧಾನಸೌಧಕ್ಕೆ ಮೀಸಲಿಟ್ಟ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ಮಾಡಲುಭೂಮಿ ಪೂಜೆ ಮಾಡುತ್ತಿರುವಾಗ ವಿರೋಧಿಸುತ್ತಿರುವುದು ಎಷ್ಟು ಸರಿ.ಶಿವಾನಂದ ಉದಪುಡಿ,ಬಿಡಿಡಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ

Share this article