ಶರಣರ ಆದರ್ಶ ಬದುಕಿಗೆ ದಾರಿದೀಪ: ದರ್ಶನಾಪುರ

KannadaprabhaNewsNetwork |  
Published : Nov 13, 2024, 12:02 AM IST
ಶಹಾಪುರ ನಗರದ ಕಾಳಿಕಾದೇವಿ ದೇವಾಲಯದಲ್ಲಿ 14ನೇ ವಾರ್ಷಿಕೋತ್ಸವ ಮುತ್ತು ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿಂದ್ರ ಸ್ವಾಮಿಗಳ ವಿರುಚಿತ್  ಜಗದ್ಗುರು ಮೌನೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

A beacon for the ideal life of Sharana: Darshanapura

-ದೇವಿಂದ್ರ ಸ್ವಾಮಿಗಳ ವಿರುಚಿತ ಜಗದ್ಗುರು ಮೌನೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ

------

ಕನ್ನಡಪ್ರಭ ವಾರ್ತೆ ಶಹಾಪುರ

ಮನುಷ್ಯ ಮನುಷ್ಯನಾಗಲು, ದೈವತ್ವ ಹೊಂದಲು ಶರಣರ ಜೀವನ ನಮಗೆ ದಾರಿದೀಪವಾಗುತ್ತದೆ. ಪುರಾಣ ಪ್ರವಚನ ಆಲಿಸಿ ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ಸಾರ್ಥಕ ಬದುಕಾಗುತ್ತದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ಕಾಳಿಕಾದೇವಿ ದೇಗುಲದಲ್ಲಿ 14ನೇ ವಾರ್ಷಿಕೋತ್ಸವ ಮುತ್ತು ಜಾತ್ರಾ ಮಹೋತ್ಸವ ಪ್ರಯುಕ್ತ ದೇವಿಂದ್ರ ಸ್ವಾಮಿಗಳ ವಿರಚಿತ ಶ್ರೀಜಗದ್ಗುರು ಮೌನೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಪಾಠವಾಗಬೇಕಿದೆ. ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ವಿಶ್ವಕರ್ಮ ಏಕದಂಡಗಿ ಮಠದ ಕೊಡುಗೆ ಅಪಾರವಾಗಿದೆ ಎಂದರು.

ಕಾಳಹಸ್ತೇಂದ್ರ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿಯ ಯಾವುದೇ ಭಾಗವಿರಲಿ ಅದು ಅರಳಿಸಿ, ವ್ಯಕ್ತಿತ್ವ ವಿಕಸನಗೊಳಿಸಿ ನಮ್ಮನ್ನು ಎತ್ತರಕ್ಕೆ ಏರಿಸುವಂತದ್ದು, ಬಹು ಸಂಸ್ಕೃತಿಯ ನಾಡಾದರೂ ಇಡೀ ದೇಶವೇ ಒಂದು ಎಂಬ ಭಾವ ನಮ್ಮನ್ನು ಆವರಿಸಿದೆ. ಇಲ್ಲಿನ ಆಹಾರ, ಉಡುಗೆ-ತೊಡುಗೆ, ಪದ್ಧತಿಗಳು ಎಲ್ಲವೂ ವಿಭಿನ್ನವಾಗಿ ತೋರಿಬಂದರೂ ನಮ್ಮದು ಒಂದೇ ಸಂಸ್ಕೃತಿಯನ್ನು ಹೊಂದಿದ ಮಹಾನ್ ರಾಷ್ಟ್ರ. ಯಾವ ಆಚರಣೆಗೂ ಇಲ್ಲಿ ವಿರೋಧವಿಲ್ಲ. ಶರಣ ಸಂತ, ಸತ್ಪುರುಷರು ಜನಿಸಿದ ಈ ನಾಡು. ವಿಶ್ವದಲ್ಲಿಯೇ ಸಂಸ್ಕೃತಿ ಸಂಸ್ಕಾರ ಶ್ರೇಷ್ಠವಾಗಿದೆ ಎಂದರು.

ಗುರು ಅಜಯೇಂದ್ರ ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಸುಮಂಗಲಿಯರು ಮತ್ತು ಮಠದ ಭಕ್ತರು ಭಾಗವಹಿಸಿದ್ದರು.

-----

ಫೋಟೊ: ಶಹಾಪುರ ನಗರದ ಕಾಳಿಕಾದೇವಿ ದೇವಾಲಯದಲ್ಲಿ 14ನೇ ವಾರ್ಷಿಕೋತ್ಸವ ಮತ್ತು ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿಂದ್ರ ಸ್ವಾಮಿಗಳ ವಿರುಚಿತ ಜಗದ್ಗುರು ಮೌನೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು.

12ವೈಡಿಆರ್‌8

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ