ವೃತ್ತಿ ರಂಗಭೂಮಿ ರಂಗಾಯಣದ ಸಕಾರಾತ್ಮಕ ಚಟುವಟಿಕೆ, ನೂತನ ರಂಗಾಯಣ ನಿರ್ಮಾಣಕ್ಕೆ ಸರ್ಕಾರದಿಂದ 10 ಎಕರೆ ಜಮೀನು, ₹3 ಕೋಟಿ ಅನುದಾನ ಪಡೆದು, ಸಂಸ್ಥೆಯನ್ನು ಕಟ್ಟಲಾಗುತ್ತಿದೆ. ಇದನ್ನು ಸಹಿಸಲಾಗದೇ ಅಹಂಕಾರಿ, ಸ್ವಾರ್ಥ ತುಂಬಿರುವ ನೀಚ ಮನಸ್ಸಿನ ವ್ಯಕ್ತಿಯೆಂಬುದಾಗಿ ತಮ್ಮನ್ನು ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ತಮ್ಮ ಸಂಘದ ವಾರ್ಷಿಕೋತ್ಸವ ಕುರಿತ ಸುದ್ದಿಗೋಷ್ಟಿಯಲ್ಲಿ ನಿಂದಿಸಿದ್ದಾರೆ. ಇದು ಖಂಡನೀಯ ಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.
- ನೀಚ ಮನಸ್ಸಿನ ವ್ಯಕ್ತಿ ಎಂದು ತೇಜೋವಧೆ: ಆರೋಪ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ವೃತ್ತಿ ರಂಗಭೂಮಿ ರಂಗಾಯಣದ ಸಕಾರಾತ್ಮಕ ಚಟುವಟಿಕೆ, ನೂತನ ರಂಗಾಯಣ ನಿರ್ಮಾಣಕ್ಕೆ ಸರ್ಕಾರದಿಂದ 10 ಎಕರೆ ಜಮೀನು, ₹3 ಕೋಟಿ ಅನುದಾನ ಪಡೆದು, ಸಂಸ್ಥೆಯನ್ನು ಕಟ್ಟಲಾಗುತ್ತಿದೆ. ಇದನ್ನು ಸಹಿಸಲಾಗದೇ ಅಹಂಕಾರಿ, ಸ್ವಾರ್ಥ ತುಂಬಿರುವ ನೀಚ ಮನಸ್ಸಿನ ವ್ಯಕ್ತಿಯೆಂಬುದಾಗಿ ತಮ್ಮನ್ನು ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ತಮ್ಮ ಸಂಘದ ವಾರ್ಷಿಕೋತ್ಸವ ಕುರಿತ ಸುದ್ದಿಗೋಷ್ಟಿಯಲ್ಲಿ ನಿಂದಿಸಿದ್ದಾರೆ. ಇದು ಖಂಡನೀಯ ಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.
ವೃತ್ತಿ ರಂಗಭೂಮಿ ರಂಗಾಯಣ ಸ್ಥಾಪನೆ ಮೂಲ ಉದ್ದೇಶಗಳನ್ನು ಸಾಕಾರಗೊಳಿಸಲು, ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಸರ್ಕಾರ ತಮ್ಮನ್ನು ನಿರ್ದೇಶಕನನ್ನಾಗಿ ನೇಮಿಸಿದೆ. ರಾಜ್ಯಮಟ್ಟದ ಕಾರ್ಯವ್ಯಾಪ್ತಿ ಹೊಂದಿರುವ ರೆಪರ್ಟರಿ ಆಗಿರುವ ನಮ್ಮ ರಂಗಾಯಣ ಕೇವಲ ಒಂದು ಜಿಲ್ಲೆಯ ಸಂಸ್ಥೆಯಲ್ಲ. ಇದು ಫಂಡಿಂಗ್ ಏಜೆನ್ಸಿ ಸಹ ಅಲ್ಲ. ಈ ಬಗ್ಗೆ ಸ್ಪಷ್ಟ ಸರ್ಕಾರಿ ಆದೇಶ, ಮಾರ್ಗಸೂಚಿಗಳಿವೆ ಎಂದಿದ್ದಾರೆ.
ಸರ್ಕಾರ ಕಾಲಕಾಲಕ್ಕೆ ಸೂಚಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸುವುದು ನಮ್ಮ ಆದ್ಯತೆ. ಜೊತೆಗೆ ಅಗತ್ಯ ವಿಶೇಷ ಕಾರ್ಯಕ್ರಮ ಆಯೋಜಿಸಲು ನಿರ್ದೇಶಕರಿಗೆ ವಿವೇಚನಾ ಅಧಿಕಾರವೂ ಇದೆ. ಈ ಹಿನ್ನೆಲೆ ರಾಷ್ಟ್ರೀಯ ವೃತ್ತಿ ರಂಗೋತ್ಸವ ಸೇರಿದಂತೆ 8 ತಿಂಗಳಲ್ಲಿ 12ಕ್ಕೂ ಅದಿಕ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದೇವೆ. ಸರ್ಕಾರ ಮತ್ತು ರಂಗಭೂಮಿಯ ಅನೇಕ ಹೆಸರಾಂತ ತಜ್ಞರು, ಹಂಸಲೇಖ, ಅರುಣ ಸಾಗರ, ಮುಖ್ಯಮಂತ್ರಿ ಚಂದ್ರು ಇನ್ನೂ ಅನೇಕರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದಿರುವ ಅವರು, ಭದ್ರಪ್ಪ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ತೇಜೋವಧೆ ಮಾಡುವುದನ್ನು ಮುಂದುವರಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಕಡಕೋಳ ಎಚ್ಚರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.