ಹರಿಹರ ನಗರದ ಗಾಂಧಿ ವೃತ್ತದ ಬಳಿಯ ಹರಪನಹಳ್ಳಿ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ೧೨-೧೫ಕ್ಕೆ ನಡೆದ ರಸ್ತೆ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನಗರದ ಬಾಪೂಜಿ ಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಕೊಟ್ರೇಶ ಎಚ್. ಅವರ ಮಗ ಮನೋಜ್ ಕೆ. ಮನುಗುದ್ರಿ ಮೃತ ಯುವಕ.
ಹರಿಹರ: ನಗರದ ಗಾಂಧಿ ವೃತ್ತದ ಬಳಿಯ ಹರಪನಹಳ್ಳಿ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ೧೨-೧೫ಕ್ಕೆ ನಡೆದ ರಸ್ತೆ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನಗರದ ಬಾಪೂಜಿ ಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಕೊಟ್ರೇಶ ಎಚ್. ಅವರ ಮಗ ಮನೋಜ್ ಕೆ. ಮನುಗುದ್ರಿ ಮೃತ ಯುವಕ.
ಪ್ರಸನ್ನ ಎನ್.ಕೆ. ಹಾಗೂ ಮನೋಜ್ ದಾವಣಗೆರೆ ಕಡೆಯಿಂದ ಗಾಂಧಿ ವೃತ್ತದ ಮೂಲಕ ಪಲ್ಸರ್ ಬೈಕ್‌ನಲ್ಲಿ ಹರಪನಹಳ್ಳಿ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೆ ರಸ್ತೆ ಪಕ್ಕ ಪಾರ್ಕಿಂಗ್ ಸ್ಥಳದಲ್ಲಿ ಇಟ್ಟಿದ್ದ ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ನೆಲಕ್ಕೆ ಬಿದ್ದಾಗ ಬೈಕ್‌ನಲ್ಲಿ ಕುಳಿತಿದ್ದ ಮನೋಜ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ಪ್ರಸನ್ನ ಎನ್.ಕೆ. ಗಾಯಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ಮನೋಜ್‌ನನ್ನು ಸ್ನೇಹಿತ ಪ್ರಸನ್ನ ತನ್ನ ಹುಟ್ಟುಹಬ್ಬಕ್ಕೆಂದು ಭಾನುವಾರ ಮಧ್ಯಾಹ್ನ ಕರೆದುಕೊಂಡು ಹೋಗಿದ್ದನು. ತಡರಾತ್ರಿ ವಾಪಸ್ ಬರುವಾಗ ಈ ಅಪಘಾತವಾಗಿದೆ ಎಂದು ಮನೋಜ್ ತಂದೆ ಕೊಟ್ರೇಶ್ ದೂರಿನಲ್ಲಿ ವಿವರಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.