ಕನ್ನಡಪ್ರಭ ವಾರ್ತೆ, ತುಮಕೂರು
ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಸ್ವಾಮಿ ವೀರೇಶಾನಂದ ಸರಸ್ವತಿರವರ ‘ಗುರು ಎಂದರೆ ಲಘು ಅಲ್ಲ’ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಚಾರಿತ್ರ್ಯವಂತ, ಬದ್ಧತೆಯುಳ್ಳ, ಜವಾಬ್ದಾರಿಯುಳ್ಳ ವ್ಯಕ್ತಿಗಳು ದೇಶಕ್ಕೆ ಅವಶ್ಯಕವಾಗಿದ್ದಾರೆ. ಇಂತಹ ವ್ಯಕ್ತಿಗಳ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ. ಸ್ವಾಮಿ ವಿವೇಕಾನಂದರು ಹೇಳುವಂತೆ ಶಿಕ್ಷಣವೆಂದರೆ ಚಮತ್ಕಾರ. ಶಿಕ್ಷಣವೆಂಬ ಚಮತ್ಕಾರದಿಂದ ಸಾಧಿಸಲಾಗದ್ದು ಯಾವುದೂ ಇಲ್ಲ. ಸ್ವಾಮಿ ವೀರೇಶಾನಂದರ ‘ಗುರು ಎಂದರೆ ಲಘು ಅಲ್ಲ’ ಕೃತಿ ಇಂದಿಗೆ ಬಹಳ ಪ್ರಸ್ತುತವಾದದ್ದು. ಸರಳ ಭಾಷೆಯಲ್ಲಿ ನೇರವಾಗಿ ಅತ್ಯಶ್ಯಕವಾದ ವಿಚಾರಗಳನ್ನು ಮಂಡಿಸಿದ್ದಾರೆ ಎಂದರು.ಬೆಂಗಳೂರಿನ ಹಿರಿಯ ಕನ್ನಡ ಪ್ರಾಧ್ಯಾಪಕರು ಹಾಗೂ ಸುಪ್ರಸಿದ್ಧ ಗ್ರಂಥಕರ್ತ ಪ್ರೊ, ಜಿ. ಅಶ್ವತ್ಥನಾರಾಯಣ ಸ್ವಾಮಿ ವಿವೇಕಾನಂದರ ನುಡಿಗಳು ಇಂದಿಗೂ ನಿತ್ಯೋಜ್ವಲ. ಅಂತರ್ಗತವಾಗಿರುವ ಚೈತನ್ಯವನ್ನು ಉದ್ಘೋಷಿಸಿದವರು ಸ್ವಾಮಿ ವಿವೇಕಾನಂದರು. ಸ್ವಾಮಿ ವೀರೇಶಾನಂದರ ‘ಗುರು ಎಂದರೆ ಲಘು ಅಲ್ಲ’ ಎಂಬ ಅತ್ಯಂತ ಪ್ರಸ್ತುತವಾದ ಈ ಗ್ರಂಥದಲ್ಲಿ ಅಧ್ಯಾಯಗಳ ಶೀರ್ಷಿಕೆಗಳೇ ಬಹಳ ಮಾರ್ಮಿಕವಾಗಿವೆ. ಜನಮನದ ಜ್ಞಾನಗಂಗೋತ್ರಿಯ ಸಂಗಮವಿದು ಎಂದರು. ಭಾರತ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ರಾಮದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಕರು ವೇತನಕ್ಕಾಗಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಹೊಸ ನಿಯಮಾವಳಿಗಳಿಂದ ಅಡೆತಡೆಯುಂಟಾದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮಾರ್ಗದರ್ಶನ ನೀಡಬೇಕು ಎಂದರು. ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಅವರು, ಈ ಕೃತಿಯಲ್ಲಿ ಪ್ರಾಚೀನ ಮತ್ತು ಆಧುನಿಕ ಪರಿಕಲ್ಪನೆಗಳ ಸಮತೋಲಿತ ಮಿಶ್ರಣ ಇದೆ. ದೇಶದ ವರ್ತಮಾನ ಮತ್ತು ಭವಿಷ್ಯಕ್ಕೆ ಶಿಕ್ಷಕರ ವ್ಯಕ್ತಿತ್ವ ಕಾರಣ. ವಿದ್ಯಾರ್ಥಿಗೆ ಶಿಕ್ಷಕನೇ ಪಠ್ಯಪುಸ್ತಕ. ಶಿಕ್ಷಕರಿಗೆ ಚಾರಿತ್ರ್ಯವೇ ಮೂಲ. ಚಾರಿತ್ರ್ಯವನ್ನು ಕಲಿಸಲು ಚಾರಿತ್ರ್ಯವಂತ ಶಿಕ್ಷಕರೇ ಬೇಕು. ಸ್ವಾಮಿ ವಿವೇಕಾನಂದರ ಚಿಂತನೆಯ ಬೆಳಕಿನಲ್ಲಿ ಶಿಕ್ಷಣವನ್ನು ವಿಶ್ಲೇಷಿಸುವುದರ ಮೂಲಕ ಪೂಜ್ಯ ಸ್ವಾಮೀಜೀರವರು ಶಿಕ್ಷಣಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ ಎಂದರು.