ಗ್ರಂಥ, ಗ್ರಂಥಾಲಯ ಮಿತ್ರನಿಗಿಂತಲೂ ಮಿಗಿಲು: ಡಾ.ಚನ್ನಪ್ಪ ಕಟ್ಟಿ

KannadaprabhaNewsNetwork |  
Published : May 25, 2025, 01:18 AM IST
ಗ್ರಂಥ ಮತ್ತು ಗ್ರಂಥಾಲಯ ಮಿತ್ರನಿಗಿಂತಲೂ ಮಿಗಿಲು : ನವ ನಿರ್ಮಿತ ಪ್ರವಾಚಕ ಗ್ರಂಥಾಲಯವ ಉದ್ಘಾಟನೆ  | Kannada Prabha

ಸಾರಾಂಶ

ವಿದ್ಯಾಗಿರಿಯ 22ನೇ ರಸ್ತೆಯ ಮೂರನೇ ಮನೆಯಲಿ ಮಮತಾ ಹಾಗೂ ಮಹಾಂತೇಶ ಕೋಟಿ ಶಿಕ್ಷಕ ದಂಪತಿ ನೂತನವಾಗಿ ನಿರ್ಮಿಸಿದ ಪ್ರವಾಚಕ ನಿಲಯ ಕಾರ್ಯಕ್ರಮದಲ್ಲಿ ಪ್ರವಾಚಕ ಗ್ರಂಥಾಲಯ ಅನಾವರಣಗೊಳಿಸಿಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿದ್ಯಾಗಿರಿಯ 22ನೇ ರಸ್ತೆಯ ಮೂರನೇ ಮನೆಯಲಿ ಮಮತಾ ಹಾಗೂ ಮಹಾಂತೇಶ ಕೋಟಿ ಶಿಕ್ಷಕ ದಂಪತಿ ನೂತನವಾಗಿ ನಿರ್ಮಿಸಿದ ಪ್ರವಾಚಕ ನಿಲಯ ಕಾರ್ಯಕ್ರಮದಲ್ಲಿ ಪ್ರವಾಚಕ ಗ್ರಂಥಾಲಯ ಅನಾವರಣಗೊಳಿಸಿಲಾಯಿತು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಅವರು ಪ್ರವಾಚಕ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಮನೆಗೊಂದು ಗ್ರಂಥಾಲಯವಾಗಬೇಕೆಂಬ ಮಹತ್ವಕಾಂಕ್ಷೆಯ ಹಾದಿಯಲ್ಲಿ ಕಾರ್ಯ ಪ್ರವೃತ್ತರಾದ ಕೋಟಿ ಪರಿವಾರದ ಪುಸ್ತಕ ಪ್ರೀತಿ ಶ್ಲಾಘನೀಯ ಎಂದ ಅವರು, ತಮ್ಮ ಸಿಂದಗಿಯ ನೆಲೆ ಪ್ರಕಾಶನ ಪ್ರಕಟಗೊಂಡಿರುವ 50 ಗ್ರಂಥಗಳನ್ನು ಕಾಣಿಕೆಯಾಗಿ ನೀಡುವುದರ ಮೂಲಕ ಪ್ರೋತ್ಸಾಹಿಸಿದರು.

ವೇದಿಕೆಯ ಕಾರ್ಯಕ್ರಮ ಉದ್ಘಾಟಿಸಿದ ಜಿ.ಎಂ. ಸಿಂಧೂರ ಅವರು ಗೃಹಪ್ರವೇಶದಂತಹ ಕೌಟುಂಬಿಕ ಕಾರ್ಯಕ್ರಮಕ್ಕೆ ಸಾಹಿತ್ಯಿಕ ಮೆರಗು ನೀಡಿದ ಕೋಟಿ ಪರಿವಾರವನ್ನು ಪ್ರಸಂಸಿಸಿದರು. ಪ್ರತಿಯೊಬ್ಬರ ಮನೆಗಳಲ್ಲಿ ಚಿಕ್ಕದಾದ ಒಂದು ಗ್ರಂಥಾಲಯವಾದರೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ದೊರೆಯುತ್ತದೆ ಎಂದು ಹೇಳಿದರು.

ಇದೇ ವೇಳೆ ಎಸ್.ಜಿ. ಕೋಟೆ ಅವರು ರಚಿಸಿದ ಮತ್ತೊಂದು ವಡ್ಡಾರಾಧನೆ ಗ್ರಂಥವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ಟ ಬಿಡುಗಡೆ ಮಾಡಿದರು. ಎಸ್. ಜಿ. ಕೋಟಿಯವರನ್ನು ಬರಲಿರುವ ಜೂನ್ 7 ಮತ್ತು 8ರಂದು ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ನಾಲ್ಕನೇ ದಾವಣಗೆರೆ ಅಧಿವೇಶನಕ್ಕೆ ಸರ್ವಾಧ್ಯಕ್ಷರಾಗಿರುವ ವಿಷಯ ಪ್ರಕಟಿಸಿ ಪರಿಷತ್ ಪರವಾಗಿ ಸನ್ಮಾನಿಸಿದರು. ಉಪಸ್ಥಿತರಿದ್ದ ಜನಮೆಜಯ ಅಭಿನಂದನ ನುಡಿಗಳನ್ನಾಡಿ ದಾವಣಗೆರೆ ಸಮ್ಮೇಳನಕ್ಕೆ ಆಮಂತ್ರಣದ ಕರೆಯೋಲೆ ನೀಡಿದರು.

ಪತ್ರಕರ್ತ ಮುಧೋಳದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ಮತ್ತೊಂದು ವಡ್ಡಾರಾಧನೆ ಕೃತಿಯನ್ನು ಪರಿಚಯಿಸಿದರು. ಗೌರವ ಪೂರ್ವಕವಾಗಿ ಈ ಕೃತಿಯನ್ನು ಹಿರಿಯ ಸಾಹಿತಿಗಳಾದ ಎಂ.ಜಿ. ಬಿರಾದಾರ್ ಹಾಗೂ ಕೊಪ್ಪಳ ಜಿಲ್ಲಾ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಣ್ಣ ನಿಂಗೋಜಿಯವರಿಗೆ ಅರ್ಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಶಿಕ್ಷಣ ಚಿಂತಕರೂ ಸಾಹಿತಿಗಳೂ ಆದ ಶಿವಶಂಕರ ಹಿರೇಮಠವರು ಸಮಾರೋಪ ನುಡಿಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಯಾಳವಾರ, ಎಂ.ಎಸ್. ಬಳಗಾನೂರ, ಸಿಂದಗಿಯ ಎಸ್.ಎಂ. ನಾಗಾವಿ,, ಬೆಳಗಾವಿಯ ಪಿ.ಎಲ್. ಹೂಗಾರ, ಕೊಪ್ಪಳದ ಅಕ್ಬರ್ ಕಾಲಿಮಿರ್ಚಿ, ವೀರಣ್ಣ ನಿಂಗೋಜಿ, ಎಂ.ಡಿ. ಬಳ್ಳಾರಿ, ಶ್ರೀಶೈಲ ಕರಿಶಂಕರಿ, ಎಸ್.ಆರ್. ಮನಹಳ್ಳಿ, ಡಾ ಮಾರುತಿ ಪಾಟೋಳ್ಳಿ, ಎಂ.ಎಸ್. ಮುಂಡರಗಿಯವರು ಉಪಸ್ಥಿತರಿದ್ದು ಕೋಟಿ ಅವರನ್ನು ಗೌರವಿಸಿದರು.ಕಲ್ಯಾಣಕುಮಾರ ಗೂಗಿ ಪ್ರಾರ್ಥಿಸಿದರು. ಮಹಾಂತೇಶ ಕೋಟಿಯವರು ಸ್ವಾಗತಿಸಿದರು. ಜಿ. ಜಿ ಕೋಟಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗುರುರಾಜ ಲೂತಿ ಹಾಗೂ ಸಣ್ಣತಂಗಿ ನಿರೂಪಿಸಿದರು.

PREV

Latest Stories

ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ