ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದವರಿಗೆ ಅನೇಕ ಯೋಜನೆ ರೂಪಿಸಿದೆ. ಅದರಲ್ಲಿ ಆರ್ಥಿಕ ಅಭಿವೃದ್ಧಿ, ಹಣಕಾಸಿಗೆ ಸಂಬಂಧಿಸಿದ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದವರಿಗೆ ಅನೇಕ ಯೋಜನೆ ರೂಪಿಸಿದೆ. ಅದರಲ್ಲಿ ಆರ್ಥಿಕ ಅಭಿವೃದ್ಧಿ, ಹಣಕಾಸಿಗೆ ಸಂಬಂಧಿಸಿದ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹೇಳಿದರು.ಶುಕ್ರವಾರ ತಾಲೂಕಿನ ಹಂಸನೂರ ಗ್ರಾಮದಲ್ಲಿ ವಾಸಿಸುತ್ತಿರುವ ಚೆನ್ನದಾಸರ ಸಮುದಾಯದವರು ವಾಸಿಸುವ ಕುಟುಂಬಗಳ ಸ್ಥಳ ಪರಿಶೀಲನೆ ಮತ್ತು ಕುಂದು ಕೊರತೆಗಳನ್ನು ಆಲಿಸಿ ನಂತರ ಮಾತನಾಡಿ, ಸರ್ಕಾರದ ಸೌಲಭ್ಯ ಪಡೆದುಕೊಂಡು ಸಮುದಾಯದ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ವ್ಯಾಪಾರ ಉದ್ದಿಮೆ ಸ್ಥಾಪಿಸಬೇಕು, ಗುಡಿ ಕೈಗಾರಿಕೆ ಸ್ಥಾಪಿಸಿಕೊಳ್ಳುವ ಮೂಲಕ ಆರ್ಥಿಕ ಸಬಲತೆ ಸಾಧಿಸಬೇಕು. ಸರ್ಕಾರ ಅಲೆಮಾರಿಗಳ ಜೊತೆ ಇದೆ ಎಂದು ಹೇಳಿದರು.
ಹಂಸನೂರ ಗ್ರಾಪಂ ಅಧ್ಯಕ್ಷೆ ಚೆನ್ನದಾಸರ ಸಮುದಾಯದ ಆಶಾ ಚಿಂತಾಕಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯದ ಸ್ಥಿತಿಗತಿಯನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರಿಗೆ ಸವಿಸ್ತಾರವಾಗಿ ತಿಳಿಸಿದರು. ಮತ್ತು ಅಧ್ಯಕ್ಷರು ಸಮುದಾಯದವರ ಜೊತೆಗೆ ಸಂವಾದ ನಡೆಸಿದರು.ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ, ಸಹಾಯಕ ನಿರ್ದೇಶಕ ರಾಮಚಂದ್ರ ಮೈತ್ರಿ, ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ, ಗ್ರಾಮಾಡಳಿತ ಅಧಿಕಾರಿ ಮಾಗುಂಡಪ್ಪ ಗುಡಿಸಾಗರ, ಪಿಡಿಓ ಮಂಜುನಾಥ ಅರಳಿಕಟ್ಟಿ, ನಾಗರತ್ನಾ ಜಮಖಂಡಿ, ಸುರೇಶ ಚಿಮ್ಮಲ, ಬಸವರಾಜ ಕುಂಬಾರ ಹಾಗೂ ಚನ್ನದಾಸರ ಸಮುದಾಯದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.