ಹಣ, ಸಮಯ ಉಳಿತಾಯಕ್ಕೆ ವಧು-ವರರ ಸಮಾವೇಶ ಸಹಕಾರಿ: ರೂಪೇಶ್ ಕುಮಾರ್

KannadaprabhaNewsNetwork |  
Published : Jul 28, 2025, 12:31 AM IST
ಅಂತಾರಾಜ್ಯ ಮಟ್ಟದ ಸವಿತಾ ಸಮಾಜದ ವಧು-ವರರ ಸಮಾವೇಶ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಮ್ಯಾರೇಜ್ ಬ್ರೋಕರ್‌ಗಳ ಸುಲಿಗೆ ತಪ್ಪಿಸುವುದು, ಉತ್ತಮ ಸಂಬಂಧ ಬೆಸೆಯುವುದು, ಪೋಷಕರ ಹಣ, ಸಮಯ ಉಳಿತಾಯಕ್ಕೆ ವಧು-ವರರ ಸಮಾವೇಶ ಸಹಕಾರಿಯಾಗಲಿದೆ.

ಸವಿತಾ ಸಮಾಜದ ವಧು- ವರರ ಸಮಾವೇಶ ಉದ್ಘಾಟಿಸಿದ ನಗರಸಭೆ ಅಧ್ಯಕ್ಷಕನ್ನಡಪ್ರಭ ವಾರ್ತೆ ಹೊಸಪೇಟೆ

ಮ್ಯಾರೇಜ್ ಬ್ರೋಕರ್‌ಗಳ ಸುಲಿಗೆ ತಪ್ಪಿಸುವುದು, ಉತ್ತಮ ಸಂಬಂಧ ಬೆಸೆಯುವುದು, ಪೋಷಕರ ಹಣ, ಸಮಯ ಉಳಿತಾಯಕ್ಕೆ ವಧು-ವರರ ಸಮಾವೇಶ ಸಹಕಾರಿಯಾಗಲಿದೆ ಎಂದು ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಹೇಳಿದರು.

ನಗರ ಸವಿತಾ ಸಮಾಜ, ದಾವಣಗೆರೆ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಜ್ಯ ಮಟ್ಟದ ಸವಿತಾ ಸಮಾಜದ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಸವಿತಾ ಸಮಾಜದ ಯುವಕರು ಸಾಂಪ್ರದಾಯಿಕ ಕುಲವೃತ್ತಿಗೆ ಸೀಮಿತವಾಗಿಲ್ಲ. ಶೈಕ್ಷಣಿಕವಾಗಿ ದಾಪುಗಾಲು ಹಾಕುತ್ತಿದ್ದಾರೆ. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಉದ್ಯೋಗ, ವ್ಯಾಪಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಯುವತಿಯರು ಹೆಚ್ಚಿನ ಸಂಖ್ಯೆ ಯಲ್ಲಿ ಸಾಫ್ಟವೇರ್ ಕ್ಷೇತ್ರದಲ್ಲಿರುವುದು ಸಂತಸದ ವಿಷಯ. ಆದರೆ, ಮದುವೆ ವಿಚಾರ ಬಂದಾಗ ಇತ್ತೀಚೆಗೆ ಯುವ ಜನರಲ್ಲಿ ಬೇಕು, ಬೇಡಿಕೆಗಳು ಹೆಚ್ಚುತ್ತಿದ್ದು, ಮದುವೆ ವಿಳಂಬಕ್ಕೆ ಕಾರಣವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮದುವೆ ಪ್ರತಿಯೊಬ್ಬರ ಜೀವನದ ಬಹುಮುಖ್ಯ ಹಂತ. ಸೂಕ್ತ ಸಮಯದಲ್ಲಿ ಒಳ್ಳೆಯ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟಾಚಲಪತಿ ಪಿ.ಬಿ. ಮಾತನಾಡಿ, ಮದುವೆಗೆ ಉತ್ತಮ ಸಂಗಾತಿ ಹುಡುಕಿಕೊಳ್ಳುವುದು ಅತಿ ಅವಶ್ಯಕ. ಆದರೆ, ಮದುವೆ ಬ್ರೋಕರ್‌ಗಳು ಇದನ್ನೇ ಬಂಡವಾಳ ಮಾಡಿಕೊಂಡು ಸುಲಿಗೆ ಮಾಡುತ್ತಾರೆ. ಜೊತೆಗೆ ಸುಳ್ಳು ಹೇಳಿ ಸಂಬಂಧ ಕುದುರಿಸುತ್ತಾರೆ. ಇದನ್ನು ತಪ್ಪಿಸಲು ವಧು-ವರರ ಸಮಾವೇಶ ಸಹಕಾರಿಯಾಗಿದೆ ಎಂದರು.

ಸವಿತಾ ಸ್ವಯಂ ವರ ಉಚಿತ ವೇದಿಕೆಯಿಂದ ಕಳೆದ ೯ ವರ್ಷಗಳಲ್ಲಿ ಸುಮಾರು ೧ ಸಾವಿರಕ್ಕೂ ಹೆಚ್ಚು ಮದುವೆಗಳು ನಿಶ್ಚಯವಾಗಿವೆ. ಈ ಹಿಂದೆ ದಾವಣಗೆರೆಯಲ್ಲಿ ಆಯೋಜಿಸಿದ್ದ ಸ್ವಯಂ ವರ ಸಮಾವೇಶದಲ್ಲಿ ೧೫೦, ಬೆಂಗಳೂರಿನ ಸಮಾವೇಶದಲ್ಲಿ ೨೫೦ ಕ್ಕೂ ಹೆಚ್ಚು ವಧು- ವರರು ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ ಎಂದರು.

ನಿವೃತ್ತ ಶಿಕ್ಷಕ ನಾಗೇಶ್, ನಿವೃತ್ತ ಎಎಸ್‌ಐ ಶ್ರೀನಿವಾಸ, ಸಾರಿಗೆ ಇಲಾಖೆ ನಿವೃತ್ತ ನೌಕರ ಮನೋಹರ್ ಕುಮಾರ್, ಅಬಕಾರಿ ಇಲಾಖೆಯ ನಿವೃತ್ತ ನೌಕರ ರಾಮಲಿಂಗಪ್ಪ, ನಾರಾಯಣ ಹಡಪದ, ಹೊಸಪೇಟೆ ಟೌನ್ ಸ್ಟೇಷನ್ ಎಎಸ್‌ಐ ಎಂ.ಸುರೇಶ್, ರಾಯಚೂರು ಸವಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ನಾಗರಾಜ್, ಸವಿತಾ ಸಮಾಜದ ರಾಯಚೂರು ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ಇಟಗಿ, ಹೊಸಪೇಟೆ ಸಮಾಜದ ಪ್ರಮುಖರಾದ ಎನ್.ವೇಣುಗೋಪಾಲ, ಗುರುರಾಜ್ ಹೊಸಪೇಟೆ, ಡಾ. ರಾಘವೇಂದ್ರ ಗುರ್ಜಾಲ, ಕೃಷ್ಣ ಹಡಪದ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''