ಲಕ್ಷ್ಮೇಶ್ವರ: ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಲಿತಾ ಕೆರಿಮನಿ ಅವರಿಗೆ ತಾಲೂಕು ಕಸಾಪ ಅಧಿಕೃತ ಆಹ್ವಾನ ನೀಡಿ ಗೌರವಿಸಿದರು.
ಮಂಗಳವಾರ ಸಂಜೆ ಪಟ್ಟಣದಲ್ಲಿನ ವಿನಾಯಕ ನಗರದಲ್ಲಿನ ಲಲಿತಾ ಕೆರಿಮನಿ ಅವರಿಗೆ ನಿವಾಸಕ್ಕೆ ಕಸಾಪ ಅಧ್ಯಕ್ಷರು ಹಾಗೂ ಯಳವತ್ತಿ ಗ್ರಾಮದ ಹಿರಿಯರು ಹೋಗಿ ಸಮ್ಮೇಳದ ಆಹ್ವಾನ ನೀಡಲಾಯಿತು.ಈ ವೇಳೆ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ಫೆ. 14ರಂದು ನಡೆಯುವ ಲಕ್ಷ್ಮೇಶ್ವರ ತಾಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲಲಿತಾ ಕೆರಿಮನಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಯಳವತ್ತಿ ಗ್ರಾಮದಲ್ಲಿ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನಕ್ಕೆ ಎಲ್ಲ ಸಿದ್ಧತೆಗಳನ್ನು ಗ್ರಾಮದ ಹಿರಿಯರು ಸಂತೋಷದಿಂದ ಮಾಡಿದ್ದಾರೆ ಎಂದರು.
ಗದಗ ಜಿಲ್ಲೆಯಲ್ಲಿ ಮಹಿಳೆಯರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲಲಿತಾ ಕೆರಿಮನಿ ಅವರು ಮೊದಲ ಸಲ ಆಯ್ಕೆಯಾಗಿರುವುದು ಸಂತಸದ ಸಂಗತಿ. ಲಲಿತಾ ಕೆರಿಮನಿ ಅವರು ಸಂಸ್ಕೃತ ಶಿಕ್ಷಕಿಯಾಗಿ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುವುದರ ಜತೆ ಹಲವು ಪುಸ್ತಕಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯದ ಸೇವೆ ಮಾಡಿದ್ದಾರೆ ಎಂದರು.ಈ ವೇಳೆ ಸಿ.ಜಿ. ಹಿರೇಮಠ, ಕೊತ್ತಲ ಮಹಾದೇವಪ್ಪ ಮಾತನಾಡಿದರು. ಡಿ.ಬಿ. ಬಳಿಗಾರ, ಆರ್.ಎಫ್. ರಿತ್ತಿ, ಶಂಕರಗೌಡ ನಿಂಗನಗೌಡ್ರ, ಆರ್.ಎಫ್. ಅಜ್ಜನಗೌಡ್ರ, ಎಫ್.ಎ. ಪಾಟೀಲ, ಎಸ್.ಎಫ್. ಕೊಡ್ಲಿ, ಎಂ.ಬಿ. ಪಾಟೀಲ, ಆರ್.ಎಸ್. ಗಾಣಗೇರ, ವಿ.ಎಂ. ಮೇಟಿ, ಮಾರುದ್ರಪ್ಪ ಶಿರಬಡಗಿ, ಮುತ್ತಣ್ಣ ನವಲಗುಂದ, ಎಸ್.ಎಂ. ಗಾಣಗೇರ, ಎಸ್.ಎನ್. ಮಳಲಿ, ಮಂಜುನಾಥ ಕೊಕ್ಕರಗುಂದಿ, ಎಸ್.ಬಿ. ಅಣ್ಣಿಗೇರಿ, ಮಂಜುನಾಥ ಚಾಕಲಬ್ಬಿ, ಎಸ್.ಬಿ. ಸೊಪ್ಪಿನ, ಎಸ್.ವಿ. ಕನೋಜ, ವೀರಣ್ಣ ಅಕ್ಕೂರ, ರತ್ನಾ ಕರ್ಕಿ, ಅಶ್ವಿನಿ ಅಂಕಲಕೋಟಿ, ಈರಣ್ಣ ಗಾಣಿಗೇರ, ಹಾಷಮ್ ಗುತ್ತಲ, ಸೋಮಣ್ಣ ಕೆರಿಮನಿ, ಈರಣ್ಣ ಬಳಿಗಾರ, ನಾಗರಾಜ ಮಜ್ಜಿಗುಡ್ಡ ಇದ್ದರು. ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಲಲಿತಾ
ಲಕ್ಷ್ಮೇಶ್ವರ: ಪಟ್ಟಣದ ಲಲಿತಾ ಸಿ. ಕೆರಿಮನಿ ಅವರು ಕಳೆದ ನಾಲ್ಕು ದಶಕಗಳಿಂದ ಕನ್ನಡ ನಾಡು, ನುಡಿ, ಕಲೆ, ಸಂಸ್ಕೃತಿಗೆ ಉತ್ತರ ಕರ್ನಾಟಕದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅರ್ಪಣಾ ಮನೋಭಾವದ ಶಿಕ್ಷಕಿಯಾಗಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಅದರಲ್ಲೂ ಮಹಿಳಾ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.ವೃತ್ತಿಯಿಂದ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಜಗದ್ಗುರು ರೇಣುಕಾಚಾರ್ಯ ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಮೂರು ದಶಕಗಳವರೆಗೆ ಕಾರ್ಯನಿರ್ವಹಿಸಿ, ನಿವೃತ್ತಿಯಾಗಿದ್ದಾರೆ. ಇವರು ಪ್ರವೃತ್ತಿಯಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಈಗಾಗಲೇ ಮಹಾತ್ಮ ಶರೀಫರು, ಸಂಪದಾ, ಸುಭಾಷಿತ ಸ್ಮೃತಿ, ಸುಭಾಷಿತ ಚಿಂತನ ಕಾಳಿದಾಸ ನಾಟಕಗಳಲ್ಲಿ ಮಹಿಳೆಯ ಪಾತ್ರ, ಅಮೃತ ಪಾರ್ವತಿ, ಸಮಾನತೆ ಸಾರಿದ ವಚನಕಾರ್ತಿಯರು(ಅಚ್ಚಿನಲ್ಲಿದೆ) ಕೃತಿ ರಚಿಸಿ ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು, ಕವನಗಳು ಪ್ರಕಟಗೊಂಡಿವೆ.