ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಕಳಸ ಬಾಳೂರು ರಸ್ತೆ ಅಬ್ರುಗುಡಿಗೆ ಎಂಬಲ್ಲಿ ನಡೆದಿದೆ. ಜನ್ನಾಪುರದಲ್ಲಿ ಹೋಟೆಲ್ ನಡೆಸುತ್ತಿದ್ದ ಅಂಜನ್ ಇಂದು ಮುಂಜಾನೆ ಹೊರನಾಡು ದೇವಸ್ಥಾನಕ್ಕೆಂದು ತಮ್ಮ ಕಾರಿನಲ್ಲಿ ಒಬ್ಬರೆ ಪ್ರಯಾಣಿಸುತ್ತಿದ್ದರು. ಅಬ್ರುಗುಡಿಗೆ ಸಮೀಪ ತಿರುವಿನಲ್ಲಿ ನಿಯಂತ್ರಣ ತಪ್ಪಿ 200 ಅಡಿ ಆಳದ ಪ್ರಪಾತಕ್ಕೆ ಕಾರು ಬಿದ್ದಿದೆ. ಕಾರು ಪ್ರಪಾತಕ್ಕೆ ಬಿದ್ದ ರಭಸಕ್ಕೆ ಕಾರು ಚಲಾಯಿಸುತ್ತಿದ್ದ ಅಂಜನ್ (38 ವರ್ಷ)ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಜನ್ನಾಪುರ ಬಳಿಯ ಅಣಜೂರು ಗ್ರಾಮದ ದಿ. ನಾಗೇಶ್ ಮತ್ತು ಜಯಮ್ಮ ಅವರ ಪುತ್ರ. ತಾಯಿ ಮತ್ತು ಸಹೋದರನ್ನು ಅಗಲಿದಗ್ದಾರೆ.ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕ್ರೋಶ: ಅಬ್ರುಕೊಡುಗೆ ತಿರುವು ಬಳಿ ತಡೆಗೋಡೆ ಇಲ್ಲದೆ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು ಆದರೂ ತಡೆ ಗೋಡೆ ನಿರ್ಮಿಸದೆ ನಿರ್ಲಕ್ಷ ವಹಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋಟೊ: 26ಎಂಡಿಜಿ2ಪಿ1 : ಕಾರು ಅಪಘಾತದಲ್ಲಿ ಮೃತರಾದ ಅಂಜನ್(38 ವರ್ಷ)