ಸಂಭ್ರಮದ ಗಂಗಾಜಲ ಚೌಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ

KannadaprabhaNewsNetwork | Published : Jan 15, 2025 12:45 AM

ಸಾರಾಂಶ

ಇಲ್ಲಿನ ತಳವಾರ ಗಲ್ಲಿಯ ಮೂಲದೇವಸ್ಥಾನದಿಂದ ಶೃಂಗರಿಸಿದ ರಥದಲ್ಲಿ ನಗರದ ಗ್ರಾಮದೇವತೆ ಗಂಗಾಜಲ ಚೌಡೇಶ್ವರಿದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸೋಮವಾರ ರಾತ್ರಿ ಪ್ರಾರಂಭಗೊಂಡಿತು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ರಾಣಿಬೆನ್ನೂರು: ಇಲ್ಲಿನ ತಳವಾರ ಗಲ್ಲಿಯ ಮೂಲದೇವಸ್ಥಾನದಿಂದ ಶೃಂಗರಿಸಿದ ರಥದಲ್ಲಿ ನಗರದ ಗ್ರಾಮದೇವತೆ ಗಂಗಾಜಲ ಚೌಡೇಶ್ವರಿದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸೋಮವಾರ ರಾತ್ರಿ ಪ್ರಾರಂಭಗೊಂಡಿತು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮೆರವಣಿಗೆಯು ದೊಡ್ಡಪೇಟೆ, ಕುಂಬಾರ ಓಣಿ, ಗವಾರದವರ ಓಣಿ, ಗವಳಿ ಓಣಿ, ಕುರುಬಗೇರಿ, ಎಂ.ಜಿ.ರಸ್ತೆ, ಸಂಗಮ ಸರ್ಕಲ್, ಅಶೋಕ ಸರ್ಕಲ್, ಮೇಡ್ಲೇರಿ ರಸ್ತೆ ಮಾರ್ಗವಾಗಿ ಮಂಗಳವಾರ ಬೆಳಗ್ಗೆ ಮೆಡ್ಲೇರಿ ರಸ್ತೆಯಲ್ಲಿರುವ ಗಂಗಾಜಲ ಚೌಡೇಶ್ವರ ದೇವಸ್ಥಾನಕ್ಕೆ ತಲುಪಿತು. ಬಾಜಾ ಭಜಂತ್ರಿ, ನಿಶಾನೆಗಳು, ಬಿರುದಾವಳಿಗಳನ್ನು ಹೊತ್ತ ಭಕ್ತರು, ಡೊಳ್ಳುವಾದ್ಯ, ಜಾಂಜ್‌ಮೇಳ, ವೀರಗಾಸೆ, ವಿವಿಧ ರೀತಿಯ ಗೊಂಬೆಗಳ ಮುಖವಾಡ ಧರಿಸಿದವರು ಮೆರವಣಿಗೆಯ ಆಕರ್ಷಣೆಯಾಗಿದ್ದರು. ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ಮಹಿಳೆಯರು ರಸ್ತೆಗೆ ನೀರು ಹಾಕಿ, ಮನೆಗಳ ಮುಂದೆ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಸಂಭ್ರಮದಿಂದ ಸ್ವಾಗತಿಸಿದರು. ಗಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ನಾಯಕ, ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣನವರ, ಬಸವರಾಜ ಹುಚಗೊಂಡರ, ಸಂತೋಷಕುಮಾರ ಪಾಟೀಲ, ಚೋಳಪ್ಪ ಕಸವಾಳ, ಪ್ರಕಾಶ ಬುರಡಿಕಟ್ಟಿ, ಪುಟ್ಟಪ್ಪ ಮರಿಯಮ್ಮನವರ, ಸಿದ್ದು ಚಿಕ್ಕಬಿದರಿ, ರಮೇಶ ಗುತ್ತಲ,ಅಮೋಘ ಬಾದಾಮಿ, ಅನಿಲಕುಮಾರ ಸಿದ್ದಾಳಿ, ನಾಗರಾಜ ಪವಾರ, ಬಸವರಾಜ ಹುಚ್ಚಗೊಂಡರ, ಶಶಿಧರ ಬಸೇನಾಯ್ಕ, ಬಸವರಾಜ ಚಳಗೇರಿ, ಪರಮೇಶ ಗೂಳಣ್ಣನವರ, ಭೀಮಣ್ಣ ಎಡಚಿ, ಜಯಶ್ರೀ ಪಿಸೆ, ಶಿವಕುಮಾರ ಹರ್ಕನಾಳ, ಮಂಜುನಾಥ ಹುಲ್ಲತ್ತಿ, ಶಿವಯೋಗಿ ಹಳ್ಳಳ್ಳಿ, ಮಂಜುನಾಥ ಕಬ್ಬಿಣದ, ಮೃತ್ಯುಂಜಯ ಗುದಿಗೇರ, ರಾಜಣ್ಣ ಮೋಟಗಿ, ರಾಜಶೇಖರಯ್ಯ ಸುರಳಿಕೇರಿಮಠ, ಆನಂದ ಹುಲಬನ್ನಿ, ಕೃಷ್ಣಪ್ಪ ಕಂಬಳಿ, ವೀರೇಶ ಹೆದ್ದೇರಿ, ರಮೇಶ ಕರಡೆಣ್ಣನವರ, ಯುವರಾಜ ಬಾರಟಕ್ಕಿ ಸೇರಿದಂತೆ ಸಹಸ್ರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Share this article