ಸ್ವಾಭಿಮಾನದ ಬದುಕಿಗೆ ಸಹಕಾರ ವ್ಯವಸ್ಥೆ ಸಹಕಾರಿ

KannadaprabhaNewsNetwork | Published : Nov 17, 2024 1:21 AM

ಸಾರಾಂಶ

ಸ್ವಾಭಿಮಾನ ಮತ್ತು ನೆಮ್ಮದಿ ಬದುಕಿಗಾಗಿ ಸಹಕಾರಿ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ರಂಗನಾಥ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಬಂದಗಿ ಬಸವರಾಜ್ ಶೇಟ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಸ್ವಾಭಿಮಾನ ಮತ್ತು ನೆಮ್ಮದಿ ಬದುಕಿಗಾಗಿ ಸಹಕಾರಿ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ರಂಗನಾಥ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಬಂದಗಿ ಬಸವರಾಜ್ ಶೇಟ್ ಹೇಳಿದರು. ಗುರುವಾರ ಪಟ್ಟಣದ ಶ್ರೀ ರಂಗನಾಥ ವಿವಿದೋದ್ದೇಶ ಸಹಕಾರ ಸಂಘದ ಆವರಣದಲ್ಲಿ 71ನೇ ರಾಷ್ಟ್ರೀಯ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ಶೇರುದಾರರ ಮತ್ತು ಸದಸ್ಯರ ಪಾತ್ರ ಮಹತ್ವದ್ದಾಗಿದೆ. ಸಮಾಜದ ಹಾಗೂ ದೇಶದ ಬೆಳವಣಿಗೆಯಲ್ಲಿಯೂ ಸಹ ಸಹಕಾರಿ ಕ್ಷೇತ್ರ ಅತ್ಯಗತ್ಯವಾಗಿದೆ. ಹಿರಿಯರ ಕೊಡುಗೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ದೂರದರ್ಶಿತ್ವ ಇಟ್ಟುಕೊಂಡು ಸಹಕಾರಿಯನ್ನು ಹುಟ್ಟುಹಾಕಿದ ಹಿರಿಯರನ್ನು ನಾವುಗಳು ನೆನಪಿಸಿಕೊಳ್ಳಬೇಕು ಎಂದರು. ಠೇವಣಿದಾರರ ವಿಶ್ವಾಸ ಉಳಿಸಿಕೊಂಡು ಸಂಘವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಟ್ಟಣದಲ್ಲಿ ಶತಮಾನ ಕಂಡಿರುವ ಏಕೈಕ ಸಹಕಾರ ಸಂಘವಾಗಿ ಹೊರಹೊಮ್ಮಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿಪಥದತ್ತ ಹೋಗಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ರಂಗನಾಥ ವಿವಿದೋದ್ಧೇಶ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್ ಕಾಳೆ, ನಿರ್ದೇಶಕರಾದ ಮಧುರಾಯ್ ಜಿ. ಶೇಟ್, ಕೆ.ಪಿ. ಶ್ರೀಧರ್ ನೆಮ್ಮದಿ, ಡಿ.ಎಸ್. ಶಂಕರ್, ಸಿ. ರಾಜಶೇಖರ್, ಇ.ಎಚ್. ಮಂಜುನಾಥ, ರೇಣುಕಾ ಮಾರುತಿ, ಸಾವಿತ್ರಮ್ಮ, ಕಾರ್ಯದರ್ಶಿ ಆರ್. ರವಿಕುಮಾರ್, ಹಿರಿಯ ಲೆಕ್ಕಪರಿಶೋಧಕ ಕೆ. ರಾಜಶೇಖರಪ್ಪ, ಪಿಗ್ಮಿ ಸಂಗ್ರಹಕಾರರಾದ ಶ್ರೀಕರ, ರವಿ, ಗೀತಾ ಸೇರಿದಂತೆ ಇತರರಿದ್ದರು. ------

೧೫ಕೆಪಿಸೊರಬ-೦೧: ಸೊರಬ ಪಟ್ಟಣದ ಶ್ರೀ ರಂಗನಾಥ ವಿವಿದೋದ್ಧೇಶ ಸಹಕಾರ ಸಂಘದ ಆವರಣದಲ್ಲಿ 71ನೇ ರಾಷ್ಟ್ರೀಯ ಸಹಕಾರ ಸಪ್ತಾಹ ಆಚರಿಸಲಾಯಿತು.

Share this article