ದೇಶಕ್ಕೆ ಮಳೆ ಇಲ್ಲದೇ ಬರ ಬರಬಹುದು, ಆದರೆ ಭಕ್ತರ ಭಕ್ತಿಗೆ ಬರವಿಲ್ಲ

KannadaprabhaNewsNetwork |  
Published : Sep 30, 2024, 01:15 AM IST
ಲೋಕಾಪುರ | Kannada Prabha

ಸಾರಾಂಶ

ಮಠ ಮತ್ತು ಶ್ರೀಗಳ ಮೇಲಿರುವ ಭಕ್ತಿಯೇ ಭಕ್ತರ ಶ್ರೀಮಂತಿಕೆ. ಈ ದೇಶಕ್ಕೆ ಮಳೆ ಇಲ್ಲದೇ ಬರ ಬರಬಹುದು ಆದರೆ ಭಕ್ತರ ಭಕ್ತಿಗೆ ಎಂದು ಬರವಿಲ್ಲ ಎಂದು ನಿವೃತ್ತ ಮುಖ್ಯೋಪಾಧ್ಯಾಯ ವ್ಹಿ.ಬಿ.ಮಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಮಠ ಮತ್ತು ಶ್ರೀಗಳ ಮೇಲಿರುವ ಭಕ್ತಿಯೇ ಭಕ್ತರ ಶ್ರೀಮಂತಿಕೆ. ಈ ದೇಶಕ್ಕೆ ಮಳೆ ಇಲ್ಲದೇ ಬರ ಬರಬಹುದು ಆದರೆ ಭಕ್ತರ ಭಕ್ತಿಗೆ ಎಂದು ಬರವಿಲ್ಲ ಎಂದು ನಿವೃತ್ತ ಮುಖ್ಯೋಪಾಧ್ಯಾಯ ವ್ಹಿ.ಬಿ.ಮಾಳಿ ಹೇಳಿದರು.

ಪಟ್ಟಣದ ಜ್ಞಾನೇಶ್ವರ ಮಠದಲ್ಲಿ ಶ್ರೀಚತುರ್ಥ ಭುಜಂಗ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಮುಧೋಳ ಸಹಯೋಗದಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಜ್ಞಾನೇಶ್ವರ ಮಠವು ಸಮಾಜಮುಖಿ ಕೆಲಸಗಳ ಮೂಲಕ ನಾಡಿನಲ್ಲಿಯೇ ವಿಶಿಷ್ಟವಾಗಿದೆ. ಕಾಯಕದ ಮೂಲಕ ಮಠಾಧಿಪತಿಗಳು ಆದರ್ಶವಾಗಿರಬೇಕು ಎಂಬುವುದಕ್ಕೆ ಬ್ರಹ್ಮಾನಂದ ಶ್ರೀಗಳೇ ಸಾಕ್ಷಿಯಾಗಿದ್ದರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಇತಿಹಾಸದಲ್ಲಿ ಕೇಳರಿಯದ ಸಂಗತಿ ಎಂದರೆ ಮುಸಲ್ಮಾನ ಗುರುವಿನಿಂದ ಓರ್ವ ಬ್ರಾಹ್ಮಣ ಅನುಗ್ರಹ ಪಡೆದುಕೊಂಡು ಗುರು ಶಿಷ್ಯತ್ವವನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವುದನ್ನು ಕಾಣಬಹುದು. ಹಿಂದೂ ಮುಸ್ಲಿಂ ಭಾವೈಕ್ಯತಾ ಭಾವ ಇಲ್ಲಿದೆ. ಒಂದು ಕಡೆ ಅಜಮೀರ ಸಾಹೇಬರ ಗದ್ದುಗೆ ಇದೆ, ಇನ್ನೊಂದು ಕಡೆ ಪರಮಹಂಸ ಸಜೀವ ವೃಂದಾವನ ಈ ಕಡೆ ಆರಾಧನೆ, ಆ ಕಡೆ ಉರುಸು, ಗುರು ಶಿಷ್ಯ ಅತ್ಮೀಯತೆಯ ಭಾವ ಕಣ್ಮನ ತಣಿಸುವಂತಹದ್ದು ಎಂದರು.

ಸಾಹಿತಿ ಹಾಗೂ ಉಪನ್ಯಾಸಕ ಡಾ.ಲೋಕಣ್ಣ ಭಜಂತ್ರಿ ಮಾತನಾಡಿ, ಚತುರ್ಥ ಭುಜಂಗ ಸ್ವಾಮಿಗಳು ಲೀನರಾಗಿ ೨೪ ವರ್ಷಗಳು ಕಳೆದಿವೆ. ಗುರುವಿಲ್ಲದೆ ಮಠವಲ್ಲ ಎಂಬಂತೆ ಶ್ರೀ ಚತುರ್ಥ ಭುಜಂಗ ಸ್ವಾಮಿಗಳ ಸುಪುತ್ರರಾದ ಶ್ರೀ ಬ್ರಹ್ಮಾನಂದ ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ದಕ್ಷತೆಯಿಂದ ನಿಭಾಯಿಸುತ್ತಿದ್ದಾರೆ. ಸಂಪೂರ್ಣ ಮಠವು ಜೀರ್ಣೋದ್ಧಾರವಾಗಿ ನವೀಕರಣದೊಂದಿಗೆ ಸುಂದರ ಕಲ್ಲಿನ ಮಹಾದ್ವಾರ ನೋಡುಗರ ಕಣ್ಮನ ಸೆಳೆಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ದ್ವಾದಶ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ವಹಿಸಿ ಮಾತನಾಡಿ, ಚತುರ್ಥ ಭುಜಂಗ ಸ್ವಾಮಿಗಳ ಆರ್ಶಿರ್ವಾದ ಎಲ್ಲರ ಮೇಲಿರಲಿ. ಮಠಕ್ಕೆ ಸಹಾಯ, ಸಹಕಾರ ನೀಡುತ್ತಾ ಬಂದಿರುವ ಭಕ್ತರವೃಂದಕ್ಕೆ ಪರಮಹಂಸರು ಸದಾ ಎಲ್ಲರ ಕೃಪೆ ಇರಲಿ ಎಂದು ಆರ್ಶಿರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಗುರುರಾಜ ಉದಪುಡಿ, ಪಿಎಸ್‌ಐ ಕಾಡಪ್ಪ ಜಕ್ಕನ್ನವರ, ಮುಧೋಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ಎಸ್ ಪೂಜಾರಿ, ಲೋಕಾಪುರ ವಲಯ ಘಟಕದ ಅಧ್ಯಕ್ಷ ಎಸ್.ಎಂ.ರಾಮದುರ್ಗ, ಸಾಹಿತಿ ಬಸವರಾಜ ಹೂಗಾರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ, ಎಸ್.ಡಿ.ನಿಲಗುಂದ, ಶ್ರೀಮಠದ ಜಯರಾಮ ತಳಗಟ್ಟಿ, ನಿ.ಶಿಕ್ಷಕ ಚಂದ್ರಕಾಂತ ರಂಗಣ್ಣವರ, ಕೃಷ್ಣಾ ಭಜಂತ್ರಿ, ಸಿದ್ದು ಹೂಗಾರ, ಆರ್.ಆರ್.ಕೋಲಾರ, ಸಿದ್ದು ವಿರಕ್ತಮಠ, ಪಿ.ಬಿ.ಹಿರೇಮಠ, ಪ್ರಕಾಶ ಬೆಳಗಲಿ, ಸುಜಾತಾ ಜೋಶಿ, ಜಗದೀಶ ಮಾರಂಗಪ್ಪನವರ, ಕೃಷ್ಣಾ ರಂಗಣ್ಣವರ, ಪತ್ರಕರ್ತ ಸಲೀಂ ಕೊಪ್ಪದ, ಲೋಕಾಪುರ ಕನ್ನಡ ಸಾಹಿತ್ಯ ಪರಿಷತ್ತ ವಲಯ ಘಟಕದ ಪದಾಧಿಕಾರಿಗಳು ಹಾಗೂ ಜ್ಞಾನೇಶ್ವಮಠ ಮಠದ ಭಕ್ತವೃಂದ ಸ್ಥಳೀಯರು ಇದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು